ಇಸ್ರೇಲ್-ಹಮಾಸ್ ಸಂಘರ್ಷ: ಷೇರುಮಾರುಕಟ್ಟೆಯಲ್ಲಿ ಏರುಪೇರು ; ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ ಸಾಧ್ಯತೆ...!

ರಷ್ಯಾ ಉಕ್ರೇನ್ ಯುದ್ಧದಿಂದ ಇಡೀ ಜಗತ್ತು ಬಾಧೆ ಪಡುತ್ತಿರುವುದು ಇನ್ನೂ ನಿಂತೇ ಇಲ್ಲ. ಈಗ ಮತ್ತೊಂದು ಭೀಕರ ಯುದ್ಧವನ್ನು ಈ ಜಗತ್ತು ನೋಡುತ್ತಿದೆ. ಇಸ್ರೇಲ್ ಮತ್ತು ಹಮಾಸ್ ಉಗ್ರರ ಮಧ್ಯೆ ಸುದೀರ್ಘ ಯುದ್ಧ (Israel and Hamas war) ನಡೆಯುವ ಸಾಧ್ಯತೆ ದಟ್ಟವಾಗಿದೆ. ಮೊದಲೇ ಆರ್ಥಿಕ ಹಿನ್ನಡೆಯಿಂದ ನಲುಗುತ್ತಿರುವ ಅನೇಕ ರಾಷ್ಟ್ರಗಳಿಗೆ ಈಗ ಈ ಬೆಳವಣಿಗೆ ಇನ್ನಷ್ಟು ಉತ್ಸಾಹ ತಗ್ಗಿಸಿದೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಸಮರದಿಂದ ಯಾವೆಲ್ಲಾ ತೊಂದರೆಗಳು ಆಗಬಹುದು,
ಇಸ್ರೇಲ್ ಹಮಾಸ್ ಯುದ್ಧದಿಂದ ಏನು ಪರಿಣಾಮ ಸಾಧ್ಯತೆ?
- ಚಿನ್ನ, ಬೆಳ್ಳಿ ಬೆಲೆ ಏರಿಕೆ
- ಡಾಲರ್ ಬಲವೃದ್ಧಿ
- ರುಪಾಯಿ ಇನ್ನಷ್ಟು ದುರ್ಬಲ
- ಫಾರೆಕ್ಸ್ ನಿಧಿ ಇನ್ನಷ್ಟು ಸಂಕುಚಿತ
- ಭಾರತೀಯ ಷೇರುಪೇಟೆಗೆ ಹಿನ್ನಡೆ
ಇಸ್ರೇಲ್ ಮತ್ತು ಹಮಾಸ್ ಯುದ್ಧ ಜಾಗತಿಕ ಭೌಗೋಳಿಕ ರಾಜಕೀಯ ಬಿಕ್ಕಟ್ಟಾಗಿ ಪರಿಣಮಿಸಬಹುದು. ಷೇರುಮಾರುಕಟ್ಟೆಗಳಿಗೆ ಹಿನ್ನಡೆ ಆಗುವ ಸಾಧ್ಯತೆ ಇದೆ. ಬಹಳಷ್ಟು ಹೂಡಿಕೆದಾರರು ಚಿನ್ನ ಖರೀದಿಗೆ ಮುಗಿಬೀಳಬಹುದು. ಬಿಕ್ಕಟ್ಟು ಬಂದಾಗೆಲ್ಲಾ ಚಿನ್ನದ ಮೇಲಿನ ಹೂಡಿಕೆ ಹೆಚ್ಚುವುದನ್ನು ಗಮನಿಸಿರಬಹುದು. ಇದರ ಪರಿಣಾಮವಾಗಿ, ಕಳೆದೆರಡು ವಾರದಿಂದ ಕುಸಿಯುತ್ತಾ ಬರುತ್ತಿದ್ದ ಚಿನ್ನದ ಬೆಲೆ ಮತ್ತೆ ಏರುಗತಿಗೆ ಬರುವ ಸಾಧ್ಯತೆ ಇದೆ.
ವಾರಾಂತ್ಯದಲ್ಲಿ ಇಸ್ರೇಲಿ ಮತ್ತು ಹಮಾಸ್ ಪಡೆಗಳ ನಡುವಿನ ನಾಟಕೀಯ ಮಿಲಿಟರಿ ಸಂಘರ್ಷದ ಬಳಿಕ ಮಧ್ಯಪ್ರಾಚ್ಯದ ರಾಜಕೀಯದಲ್ಲಿ ಅನಿಶ್ಚಿತತೆ ತಲೆದೋರಿದ್ದು, ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಕಚ್ಚಾ ತೈಲ ದರಗಳು ಬ್ಯಾರೆಲ್‌ಗೆ 3 ಡಾಲರ್‌ಗಿಂತರ ಹೆಚ್ಚು ಏರಿಕೆ ಕಂಡಿವೆ.
ವಾರಾಂತ್ಯದಲ್ಲಿ ಇಸ್ರೇಲಿ ಮತ್ತು ಹಮಾಸ್ ಪಡೆಗಳ ನಡುವಿನ ನಾಟಕೀಯ ಮಿಲಿಟರಿ ಸಂಘರ್ಷದ ಬಳಿಕ ಮಧ್ಯಪ್ರಾಚ್ಯದ ರಾಜಕೀಯದಲ್ಲಿ ಅನಿಶ್ಚಿತತೆ ತಲೆದೋರಿದ್ದು, ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಕಚ್ಚಾ ತೈಲ ದರಗಳು ಬ್ಯಾರೆಲ್‌ಗೆ 3 ಡಾಲರ್‌ಗಿಂತರ ಹೆಚ್ಚು ಏರಿಕೆ ಕಂಡಿವೆ.
ಪ್ಯಾಲೇಸ್ತೀನ್‌ನ ಶಸಸ್ತ್ರ ಗುಂಪು ಹಮಾಸ್ ಶನಿವಾರ ಏಕಾಏಕಿ ಇಸ್ರೇಲ್ ಮೇಲೆ ಹಲವಾರು ದಶಕಗಳಲ್ಲೇ ಅತಿದೊಡ್ಡದೆನ್ನಲಾದ ಮಿಲಿಟರಿ ದಾಳಿ ಪ್ರಾರಂಭಿಸಿತು. ಇದರಿಂದ ನೂರಾರು ಇಸ್ರೇಲಿಗರು ಹತರಾಗಿದ್ದು, ಪ್ರತೀಕಾರವಾಗಿ ಇಸ್ರೇಲ್ ಗಾಜಾದ ಮೇಲೆ ಮುಗಿಬಿದ್ದಿದೆ. ಇಸ್ರೇಲಿನ ವೈಮಾನಿಕ ದಾಳಿ ಭಾನುವಾರದವರೆಗೂ ಮುಂದುವರಿದಿದ್ದು, ಹಲವಾರು ಜನರು ಸಾವನ್ನಪ್ಪಿದ್ದಾರೆ.
ಪೆಟ್ರೋಲ್, ಡೀಸೆಲ್ ದರ ಸ್ಥಿರ, ಮೂಡೀಸ್ ಭವಿಷ್ಯ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆ ಕಾಣುತ್ತಿರುವುದರ ಹೊರತಾಗಿಯೂ ದೇಶದಲ್ಲಿ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡುವ ಸಾಧ್ಯತೆ ತುಂಬಾ ಕಡಿಮೆ ಎಂದು ಅಂತಾರಾಷ್ಟ್ರೀಯ ರೇಟಿಂಗ್ ಸಂಸ್ಥೆ ಮೂಡೀಸ್ ತಿಳಿಸಿದೆ.