ಸಿರಿಯಾ ರಾಯಭಾರ ಕಚೇರಿ ಮೇಲೆ ಇಸ್ರೇಲ್ ದಾಳಿ; ಇಬ್ಬರು ಜನರಲ್ ಸೇರಿ 11 ಮಂದಿ ಸಾವು.!
ಡಮಾಸ್ಕಸ್: ಸಿರಿಯಾದ ರಾಜಧಾನಿಯಲ್ಲಿರುವ ಇರಾನಿನ ರಾಯಭಾರ (Iran Embassy) ಕಚೇರಿ ಮೇಲೆ ಇಸ್ರೇಲ್ (Israel) ದಾಳಿ ಮಾಡಿದ್ದು, ಘಟನೆಯಲ್ಲಿ 8 ಮಂದಿ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ದಾಳಿಯಲ್ಲಿ ಅನೆಕ್ಸ್ ಕಟ್ಟಡವನ್ನು ಹೊಡೆದುರುಳಿಸಿದ್ದರಿಂದ 8 ಮಂದಿ ಹತರಾಗಿದ್ದಾರೆ. ಸಿರಿಯಾದ ಅಧಿಕೃತ ಸುದ್ದಿ ಸಂಸ್ಥೆ SANA ಪ್ರಕಾರ, ಇಸ್ರೇಲಿ ದಾಳಿಯು ಡಮಾಸ್ಕಸ್‌ನ ಇರಾನ್ ಕಾನ್ಸುಲೇಟ್ ಕಟ್ಟಡವನ್ನು ಗುರಿಯಾಗಿಸಿಕೊಂಡಿದೆ. ರಾಯಭಾರ ಕಚೇರಿಯ ಪಕ್ಕದಲ್ಲಿರುವ ಕಟ್ಟಡ, ಅನೆಕ್ಸ್ ಅನ್ನು ನೆಲಸಮಗೊಳಿಸಲಾಗಿದೆ. ಬಾಂಬ್ ಸ್ಫೋಟದ ಸ್ಥಳವನ್ನು ಸುದ್ದಿ ಸಂಸ್ಥೆಗಳು ಖಚಿತಪಡಿಸಿವೆ.
ಅನೆಕ್ಸ್ ಕಟ್ಟಡವನ್ನು ಸಂಪೂರ್ಣವಾಗಿ ನಾಶಗೊಂಡಿದ್ದು, ರಾಯಭಾರಿಯು ಹಾನಿಗೊಳಗಾಗಲಿಲ್ಲ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಡಮಾಸ್ಕಸ್‌ನಲ್ಲಿರುವ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ರಾಯಭಾರಿ ಹುಸೇನ್ ಅಕ್ಬರಿ ಮತ್ತು ಅವರ ಕುಟುಂಬಕ್ಕೆ ಇಸ್ರೇಲಿ ದಾಳಿಯಲ್ಲಿ ಯಾವುದೇ ಹಾನಿಯಾಗಿಲ್ಲ ಎಂದು ಇರಾನ್‌ನ ನೂರ್ ಸುದ್ದಿ ಸಂಸ್ಥೆ ಹೇಳಿದೆ.
ಆಕ್ರಮಿತ ಗೋಲನ್ ಹೈಟ್ಸ್‌ನ ದಿಕ್ಕಿನಿಂದ ಇಸ್ರೇಲಿ ವಿಮಾನಗಳು ಕಾನ್ಸುಲೇಟ್ ಕಟ್ಟಡವನ್ನು ಗುರಿಯಾಗಿಸಿಕೊಂಡಡು ದಾಳಿ ಮಾಡಿವೆ ಎಂದು ಸಿರಿಯನ್ ರಕ್ಷಣಾ ಸಚಿವಾಲಯ ತಿಳಿಸಿದೆ ಎಂದು ಬಿಬಿಸಿ ವರದಿ ಮಾಡಿದೆ. ಸಿರಿಯಾದ ವಾಯು ರಕ್ಷಣಾ ಪಡೆಗಳು ಅವರು ಉಡಾವಣೆ ಮಾಡಿದ ಕೆಲವು ಕ್ಷಿಪಣಿಗಳನ್ನು ಹೊಡೆದುರುಳಿಸಿದವು, ಆದರೆ ಇತರ ಕ್ಷಿಪಣಿಗಳು ಇಡೀ ಕಟ್ಟಡವನ್ನು ನಾಶಪಡಿಸಿದವು ಎಂದು ಸಚಿವಾಲಯ ಹೇಳಿದೆ.