Ishwar Malpe: ಮಡಿಕೇರಿಯಿಂದ ನಾಪತ್ತೆಯಾಗಿದ್ದ ಇಬ್ಬರು ಯುವತಿಯರು ಮಲ್ಪೆಯಲ್ಲಿ ನೀರುಪಾಲು; ಈಶ್ವರ್ ಮಲ್ಪೆಯಿಂದ ಓರ್ವ ಯುವತಿ ರಕ್ಷಣೆ!
ಉಡುಪಿ, ಆ.6: ಮಡಿಕೇರಿ(Madikeri)ಯಿಂದ ನಾಪತ್ತೆಯಾಗಿದ್ದ ಇಬ್ಬರು ಯುವತಿಯರು ಮಲ್ಪೆ(Malpe) ಬಳಿ ನೀರುಪಾಲಾಗಿದ್ದು, ಓರ್ವ ಯುವತಿ ಸಾವನನಪ್ಪಿದರೆ, ಮತ್ತೊರ್ವ ಯುವತಿಯನ್ನು ರಕ್ಷಿಸಿದ ಘಟನೆ ನಡೆದಿದೆ. ಮಡಿಕೇರಿ ಮೂಲದ ಮಾನ್ಯ ಮೃತ ರ್ದುದೈವಿ. ಇನ್ನು ಬದುಕುಳಿದ ಯಶಸ್ವಿನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ಮಡಿಕೇರಿಯಿಂದ ಈ ಹುಡುಗಿಯರು ನಾಪತ್ತೆಯಾಗಿದ್ದರು. ಈ ಕುರಿತು ಮಡಿಕೇರಿ ಠಾಣೆಯಲ್ಲಿ ಇಬ್ಬರು ಕಾಣೆಯಾಗಿರುವ ದೂರು ದಾಖಲಾಗಿತ್ತು. ಇದೀಗ ಮಲ್ಪೆ ಬಳಿ ನಿನ್ನೆ(ಆ.6)ತಡರಾತ್ರಿ ಭಾರಿ ಅಲೆಗಳ ಹೊಡೆತಕ್ಕೆ ಇಬ್ಬರು ಯುವತಿಯರು ಸಮುದ್ರ ಪಾಲಾಗಿದ್ದರು. ಕೂಡಲೇ ಆಪತ್ಬಾಂಧವ ಸಿಬ್ಬಂದಿ ಈಶ್ವರ್ ಎಂಬುವವರು ಓರ್ವ ಯುವತಿಯನ್ನು ರಕ್ಷಣೆ ಮಾಡಿದ್ದು, ಮತ್ತೊರ್ವ ಯುವತಿ ಅಲೆಗಳ ಹೊಡೆತಕ್ಕೆ ಮೃತಪಟ್ಟಿದ್ದಾರೆ.
ಚಂದ್ರಯಾನ-3: ಯಶಸ್ವಿಯಾಗಿ ಚಂದ್ರನ ಕಕ್ಷೆ ಸೇರಿದ ಇಸ್ರೋ ನೌಕೆ, ಭಾನುವಾರ ಮತ್ತೊಂದು ಅಗ್ನಿ ಪರೀಕ್ಷೆ!
ನವದೆಹಲಿ: ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಮತ್ತೊಂದು ಯಶಸ್ವಿ ಹೆಜ್ಜೆಯನ್ನಿಟ್ಟಿದ್ದು, ಚಂದ್ರಯಾನ-3 ನೌಕೆಯು ಇಂದು ಯಶಸ್ವಿಯಾಗಿ ಚಂದ್ರನ ಕಕ್ಷೆಯೊಳಗೆ ಪ್ರವೇಶ ಮಾಡಿದೆ.
ಹೌದು.. ದೇಶದ ಮಹತ್ವಾಕಾಂಕ್ಷೆಯ ‘ಚಂದ್ರಯಾನ- 3’ ಮತ್ತೊಂದು ಮಹತ್ವದ ಹೆಜ್ಜೆ ಕ್ರಮಿಸಿದ್ದು, ಚಂದ್ರನ ಅಂಗಳದಲ್ಲಿ ಕಾಲಿರಿಸುವ ಪ್ರಯತ್ನದಲ್ಲಿ ಇನ್ನೊಂದು ಹಂತವನ್ನು ಯಶಸ್ವಿಯಾಗಿ ಪೂರೈಸಿದೆ. ಚಂದ್ರಯಾನ- 3 ನೌಕೆಯು ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಸೇರ್ಪಡೆಯಾಗಿದ್ದು, ಸ್ವತಃ ಇಸ್ರೋ ಮಾಹಿತಿ ನೀಡಿದೆ. ಶನಿವಾರ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಇಸ್ರೋ, ‘ಭೂಮಿಯಿಂದ ಉಡಾವಣೆಯಾದ ಚಂದ್ರಯಾನ ನೌಕೆಯು, ಈಗ ತನ್ನ ಉದ್ದೇಶಿದ ಗುರಿಯಾದ ಚಂದ್ರನ ಕಕ್ಷೆಯನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಪ್ರವೇಶಿಸುವ ಮೂಲಕ ಮತ್ತೊಂದು ಹಂತವನ್ನು ಸಫಲವಾಗಿ ಪೂರ್ಣಗೊಳಿಸಿದಂತಾಗಿದೆ. ಇದು ಇಸ್ರೋದ ಯೋಜನೆಯ ಮತ್ತೊಂದು ಯಶಸ್ಸಾಗಿದೆ ಎಂದು ಹೇಳಿದೆ.
ಲೂನಾರ್ ಆರ್ಬಿಟ್ ಇನ್ಸರ್ಷನ್ (ಎಲ್‌ಒಐ) ಅಥವಾ ಚಂದ್ರನ ಕಕ್ಷೆ ಸೇರ್ಪಡೆ ಯೋಜನೆಯು ಯಶಸ್ವಿಯಾಗಿ ಪೂರ್ಣಗೊಂಡಿದೆ. ಚಂದ್ರಯಾನದ ಎಲ್ಲಾ ವ್ಯವಸ್ಥೆಗಳೂ ಆರೋಗ್ಯಪೂರ್ಣವಾಗಿವೆ. ಬೆಂಗಳೂರಿನ ಐಎಸ್‌ಟಿಆರ್‌ಎಸಿಯ ಮಿಷನ್ ಆಪರೇಷನ್ ಕಾಂಪ್ಲೆಕ್ಸ್‌ನಿಂದ (ಎಂಓಎಕ್ಸ್) ಚಂದ್ರನಿಗೆ ಅತಿ ಸಮೀಪದ ಕಕ್ಷೆಯ ಭಾಗವಾದ ಪೆರಿಲೂನ್‌ನಿಂದ ರೆಟ್ರೋ ಬರ್ನಿಂಗ್ (ರಾಕೆಟ್‌ಗಳನ್ನು ಉಡಾವಣೆ ಮಾಡಿದ ದಿಕ್ಕಿನ ವಿರುದ್ಧ ಭಾಗದಿಂದ ರಾಕೆಟ್ ಉರಿಸುವುದು) ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಇಸ್ರೋ ಹೇಳಿದೆ.
Chandrayaan-3 Mission:
— ISRO (@isro) August 5, 2023
“MOX, ISTRAC, this is Chandrayaan-3. I am feeling lunar gravity ?”
?
Chandrayaan-3 has been successfully inserted into the lunar orbit.
A retro-burning at the Perilune was commanded from the Mission Operations Complex (MOX), ISTRAC, Bengaluru.
The next… pic.twitter.com/6T5acwiEGb