IPL 2023: ಪಂಜಾಬ್ ಕಿಂಗ್ಸ್ ವಿರುದ್ಧ ಗುಜರಾತ್‌ಗೆ ರೋಚಕ ಗೆಲುವು
ಮೊಹಾಲಿ: ಮೊಹಾಲಿಯಲ್ಲಿ ನಡೆದ ಪಂಜಾಬ್ ಕಿಂಗ್ಸ್- ಗುಜರಾತ್ ಟೈಟನ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಗುಜರಾತ್ ತಂಡ ಪಂಜಾಬ್ ವಿರುದ್ಧ 6 ವಿಕೆಟ್ ಗಳ ಜಯ ಸಾಧಿಸಿದೆ.
ಶುಭ್ಮನ್ ಗಿಲ್ ಭರ್ಜರಿ ಅರ್ಧ ಶತಕದ ಬ್ಯಾಟಿಂಗ್ ಹಾಗೂ ಉತ್ತಮ ಬೌಲಿಂಗ್ ನೆರವಿನಿಂದ ಗುಜರಾತ್ ತಂಡ ಗೆದ್ದಿದೆ.
ಪಂಜಾಬ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿ ಎದುರಾಳಿ ತಂಡಕ್ಕೆ 154 ರನ್ ಗಳ ಗುರಿ ನೀಡಿತ್ತು. ರನ್ ಚೇಸಿಂಗ್ ನಲ್ಲಿ ಶುಭ್ಮನ್ ಗಿಲ್ (49 ಎಸೆತಗಳಲ್ಲಿ 67 ರನ್) ಹಾಗೂ ವೃದ್ಧಿಮಾನ್ ಸಾಹ ( 19 ಎಸೆತಗಳಲ್ಲಿ 30 ರನ್) ಗಳ 48 ರನ್ ಗಳ ಜೊತೆಯಾಟದ ಅಬ್ಬರದ ಬ್ಯಾಟಿಂಗ್ ಮೂಲಕ ಉತ್ತಮ ಆರಂಭ ಕಂಡುಕೊಂಡಿತು.
ಆದರೆ ಪಂಜಾಬ್ ತಂಡದ ಬೌಲರ್ ಗಳು ಈ ವೇಗಕ್ಕೆ ಕಡಿವಾಣ ಹಾಕುವ ಮೂಲಕ ಗುಜರಾತ್ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು. ಇನ್ನಿಂಗ್ಸ್ ಮಧ್ಯದಲ್ಲಿ ಸತತವಾಗಿ ವಿಕೆಟ್ ಕಳೆದುಕೊಂಡ ಗುಜರಾತ್ ತಂಡ ಒತ್ತಡಕ್ಕೆ ಸಿಲುಕಿತ್ತು. ಕೊನೆಯದಾಗಿ ಡೇವಿಡ್ ಮಿಲ್ಲರ್ (18 ಎಸೆತಗಳಲ್ಲಿ 17 ರನ್) ರಾಹುಲ್ ತೆವಾಟಿಯಾ (2 ಎಸೆತಗಳಲ್ಲಿ 5 ರನ್) ತಂಡ ಗೆಲುವು ಸಾಧಿಸಲು ನೆರವಾದರು.
ಪಂಜಾಬ್ ವಿರುದ್ಧದ ಈ ಗೆಲುವಿನಿಂದ ಗುಜರಾತ್ ತಂಡ ಐಪಿಎಲ್ ಅಂಕಪಟ್ಟಿಯಲ್ಲಿ 6 ನೇ ಸ್ಥಾನದಲ್ಲಿದೆ.