IPL 2023: ಪಂದ್ಯದ ವೇಳೆ ಹೊಡೆದಾಡಿಕೊಂಡ ಅಭಿಮಾನಿಗಳು: ವಿಡಿಯೋ ವೈರಲ್
ನವದೆಹಲಿ: ಐಪಿಎಲ್ ನ 40ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ 2 ಅಂಕ ಪಡೆದುಕೊಂಡಿದೆ. ಡೆಲ್ಲಿ ತಂಡ ಕೊನೆಯ ಸ್ಥಾನದಲ್ಲಿ ಮುಂದುವರೆದಿದೆ.
ತನ್ನ ಮೆಚ್ಚಿನ ತಂಡದ ಪಂದ್ಯವನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದಾರೆ. ಸಿಕ್ಸರ್, ಬೌಂಡರಿಗಳ ಆಟವನ್ನು ನೋಡುತ್ತಾ ಖುಷಿಯಲ್ಲಿದ್ದ ಪ್ರೇಕ್ಷಕರು ಹೊಡೆದಾಡಿಕೊಂಡ ಘಟನೆ ನಡೆದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅತ್ತ ಪಂದ್ಯ ನಡೆಯುತ್ತಿರುವಾಗಲೇ ಇತ್ತ ಪ್ರೇಕ್ಷಕರ ಗ್ಯಾಲರಿಯೊಂದರಲ್ಲಿ 5-6 ಮಂದಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕೆಳಗೆ ಬಿದ್ದರೂ ತುಳಿದು ಜಗಳವಾಡಿಕೊಂಡಿದ್ದಾರೆ. ಈ ರೀತಿ ಆಗಲು ಕಾರಣವೇನು ಎನ್ನುವುದು ಮಾತ್ರ ಇದುವರೆಗೂ ತಿಳಿದಿಲ್ಲ.
ಅಕ್ಕಪಕ್ಕ ಜನರಿದ್ದರೂ, ಗುಂಪಿನ ಜಗಳವನ್ನು ತಡೆಯುವ ಪ್ರಯತ್ನವನ್ನು ಯಾರು ಮಾಡಿಲ್ಲ. ಘಟನೆಯ ವಿಡಿಯೋ ಟ್ವಿಟರ್ ಬಳಕೆದಾರರಾದ ಮುಫದ್ದಲ್ ವೋಹ್ರಾ ಅವರು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
A fight took place between fans in Delhi during their match against SRH. pic.twitter.com/MYPj6dqejb
— Mufaddal Vohra (@mufaddal_vohra) April 30, 2023