ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಅಂತರಾಷ್ಟ್ರೀಯ ಮಹಿಳಾ ಕಬ್ಬಡಿ ಕ್ರೀಡಾಪಟು ಬೆಂಗಳೂರಿನಲ್ಲಿ ಆತ್ಮಹತ್ಯೆ!

Twitter
Facebook
LinkedIn
WhatsApp
ಅಂತರಾಷ್ಟ್ರೀಯ ಮಹಿಳಾ ಕಬ್ಬಡಿ ಕ್ರೀಡಾಪಟು ಬೆಂಗಳೂರಿನಲ್ಲಿ ಆತ್ಮಹತ್ಯೆ!

ಬೆಂಗಳೂರು (ಅ.26): ಅಂತಾರಾಷ್ಟ್ರೀಯ ಮಹಿಳಾ ಕಬಡ್ಡಿ ಕ್ರೀಡಾಪಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಅರಿಶಿನಕುಂಟೆ ಆದರ್ಶನಗರದ ನಿವಾಸದಲ್ಲಿ ಧನಲಕ್ಷ್ಮೀ (25) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 

 

ಸ್ನೇಹಿತರೊಂದಿಗೆ ಮೈಸೂರು ದಸರಾ ನೋಡಿಕೊಂಡು ಬಂದಿದ್ದ ಧನಲಕ್ಷ್ಮೀಯವರು ಮನೆಯ ರೂಂನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಧನಲಕ್ಷ್ಮೀಯವರ ತಂದೆ ಹಾಗೂ ಸಹೋದರ ಇದ್ದಾಗಲೇ ಈ ಘಟನೆ ನಡೆದಿದೆ. ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕೆ.ತಿಮ್ಮಲಾಪುರ ನಿವಾಸಿಯಾಗಿರುವ ಧನಲಕ್ಷ್ಮೀ ಕಳೆದ 5 ವರ್ಷದಿಂದ ನೆಲಮಂಗಲದ ಅರಿಶಿನಕುಂಟೆಯ ಆದರ್ಶನಗರದಲ ಬಾಡಿಗೆ ಮನೆಯಲ್ಲಿ ವಾಸವಿದ್ದರು. 

ಅಂತಾರಾಷ್ಟ್ರೀಯ ಮಟ್ಟದಲ್ಲಿ 3 ಬಾರಿ ಕಬ್ಬಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಧನಲಕ್ಷ್ಮೀಯವರು ಕಾಡುಗೋಡಿಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸ್ನೇಹಿತರ ಜೊತೆಗೆ ಮೈಸೂರು ದಸರಾ ನೋಡಿಕೊಂಡು ಬಂದಿದ್ದ ಧನಲಕ್ಷ್ಮೀಯವರು ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೋಷಕರು ನೀಡಿದ ದೂರಿನ ಮೇರೆಗೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಮೈಸೂರು: ಬಹಿರ್ದೆಸೆಗೆ ತೆರಳಿದ್ದ ವೇಳೆ ಆನೆ ದಾಳಿ, ವ್ಯಕ್ತಿ ಸ್ಥಳದಲ್ಲೇ ಸಾವು

ಮೈಸೂರು, ಅ.27: ಮೈಸೂರಿನಲ್ಲಿ ಕಾಡು ಪ್ರಾಣಿ‌ ಮಾನವ ಸಂಘರ್ಷ ಮುಂದುವರೆದಿದೆ (Mysuru Elephant Attack). ಆನೆ ತುಳಿತಕ್ಕೆ ಹಾಡಿ‌ ನಿವಾಸಿ ವಸಂತ್(36) ಬಲಿಯಾಗಿದ್ದಾರೆ (Death). ಹುಣಸೂರು ತಾಲೂಕು ವೀರನಹೊಸಹಳ್ಳಿ ಬಳಿ ಘಟನೆ ನಡೆದಿದೆ. ಮೃತ ವಸಂತ್ ಅವರು ಬಹಿರ್ದೆಸೆಗೆ ಹೋಗಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆ. ಸದ್ಯ ಸ್ಥಳಕ್ಕೆ ಹಿರಿಯ ಅರಣ್ಯ ಇಲಾಖೆ‌‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆನೆ ಬಾಲ ಅರ್ಧ ಕಟ್ ಮಾಡಿದ ಕಿಡಿಗೇಡಿಗಳು

ಶಿವಮೊಗ್ಗದಿಂದ ತೀರ್ಥಹಳ್ಳಿ ಮಾರ್ಗವಾಗಿ ಹತ್ತು ಕಿಲೋಮೀಟರ್ ಕ್ರಮಿಸಿದರೆ ಸಿಗುವ ಸಕ್ರೆಬೈಲು ಕ್ಯಾಂಪ್ ಆನೆ ಪಳಗಿಸುವಲ್ಲಿ ಹಾಗೂ ಸಾಕುವಲ್ಲಿ ಖ್ಯಾತಿ ಪಡೆದಿದೆ. ಮಲೆನಾಡಿನ ಪ್ರಮುಖ ಪ್ರವಾಸಿ ತಾಣವೂ ಆಗಿದೆ. ಆದರೆ ಇಲ್ಲೊಂದು ಅಹಿರಕತ ಘಟನೆ ನಡೆದಿರುವುದು ನಿಜಕ್ಕೂ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಆದರೆ ಅರಣ್ಯ ಇಲಾಖೆ ಮಾತ್ರ ಈ ಘಟನೆಯನ್ನು ಸಣ್ಣ ಘಟನೆ ಎನ್ನುವ ಮೂಲಕ ಸುಮ್ಮನಾಗಿದೆ.

ಶಿವಮೊಗ್ಗ ತಾಲೂಕಿ ಸಕ್ರೆಬೈಲು ಆನೆ ಬಿಡಾರ. ಪ್ರವಾಸಿಗರ ಪಾಲಿಗೆ ಸ್ವರ್ತ ಇದ್ದಂತೆ. ಆನೆಗಳ ತುಂಟಾಟ ಮತ್ತು ತುಂಗಾ ನದಿ ಹಿನ್ನೀರಿನ ಸೌಂದರ್ಯದ ಜೊತೆ ಹಚ್ಚು ಹಸಿರಿನಿಂದ ಕೂಡಿದ ಕಾಡು ಪ್ರದೇಶ. ಇಂತಹ ಸಕ್ರೆಬೈಲು ಆನೆ ಬಿಡಾರದಲ್ಲಿ ಹತ್ತಾವರು ಮಾವುತರು, ಕಾವಾಡಿಗರು, ಅರಣ್ಯ ಸಿಬ್ಬಂದಿ, ಅರಣ್ಯ ಅಧಿಕಾರಿಗಳು ಸಾಕಾಣೆಗಳ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಇಷ್ಟೊಂದು ಆರೈಕೆ ಮತ್ತು ನಿಗಾ ನಡುವೆ ಸಕ್ರೆಬೈಲು ಆನೆಬಿಡಾರದಲ್ಲಿ ದೊಡ್ಡ ಪ್ರಮಾದ ನಡೆದು ಹೋಗಿದೆ. ಸಕ್ರೆಬೈಲಿನ ಹೆಣ್ಣಾನೆ ಭಾನುಮತಿ ಹದಿನೆಂಟು ತಿಂಗಳ ಗರ್ಭಿಣಿ (ಆನೆ ಪ್ರಸವ ಸಮಯ ಸರಾಸರಿ 24 ತಿಂಗಳು).

ತುಂಗಾ ತೀರದಲ್ಲಿ ಎಂದಿನಂತೆ ಸ್ನಾನ ಮಾಡಿಸಿ ಕಾಡಿಗೆ ಮೇಯಲು ಬಿಟ್ಟಾಗ ಹಾದಿಯಲ್ಲಿ ರಕ್ತ ಚೆಲ್ಲಿತ್ತು. ಮರಿ ಹಾಕಿ ಬಿಡ್ತೇನೋ ಎಂಬ ಖುಷಿಯಿಂದ ಆನೆ ಜಾಡು ಹಿಡಿದು ಹೊರಟ ಸಿಬ್ಬಂದಿಗೆ ಕಂಡಿದ್ದು ತುಂಡಾಗಿ ನೇತಾಡುತ್ತಿದ್ದ ಆನೆ ಬಾಲ. ಯಾರೋ ಕಿಡಿಗೇಡಿಗಳು ಹರಿತದ ಆಯುಧದಿಂದ ಒಂದೇ ಏಟಿಗೆ ಬಾಲ ಜೋತಾಡುವಂತೆ ಹೊಡೆದಿದ್ದರು. ಘಟನೆ ಕುರಿತು ಅರಣ್ಯ ಇಲಾಖೆಯ ಸಿಬ್ಬಂದಿ ಈ ರೀತಿಯಲ್ಲಿ ವಿವರಣೆ ಕೊಟ್ಟಿದ್ದಾರೆ. ಆದ್ರೆ ಇಷ್ಟೊಂದು ಜನರ ನಡುವೆ ಭಾನುಮತಿ ಆನೆ ಮೇಲೆ ಅಟ್ಯಾಕ್ ಮಾಡಿದ್ದು ಯಾರು.. ಯಾಕೇ ಎನ್ನುವುದು ಮಾತ್ರ ಗೌಪ್ಯವಾಗಿದೆ. ಅರಣ್ಯ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಇದೊಂದು ಸಣ್ಣ ಘಟನೆ ಅಂತಾ ಉತ್ತರ ನೀಡುತ್ತಿದ್ದಾರೆ. ವನ್ಯಜೀವಿ ಕಾಯ್ದೆಗಳು ಎಷ್ಟೊಂದು ಕಠಿಣವಾಗಿವೆ. ಈ ನಡುವೆ ಆನೆ ಮೇಲೆ ದಾಳಿ ಆದರೂ ಅರಣ್ಯ ಅಧಿಕಾರಿಗಳು ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಡಿಎಫ್ ಓ (ವನ್ಯಜೀವಿ ವಿಭಾಗ) ಪ್ರಸನ್ನ ಕೃಷ್ಣ ಪಟಗಾರ್ ಅವರ ಪ್ರಕಾರ ಆನೆ ಬಾಲ ಅರ್ಧ ಇಂಚಷ್ಟೇ ಕಟ್ ಆಗಿದೆ. ಕಟ್ ಆದ ದೇಹದ ಭಾಗಕ್ಕೆ ಸ್ಟಿಚ್ ಮಾಡಲಾಗಿದೆ. ಸದ್ಯ ಭಾನುಮತಿ ಆರೋಗ್ಯ ಚೆನ್ನಾಗಿದೆ. ಯಾವುದೇ ಸಮಸ್ಯೆ ಇಲ್ಲ. ಆದರೆ ಯಾರು ಮಾಡಿದರು ಎಂದು ಕಂಡು ಹಿಡಿಯಲು ತನಿಖೆಗೆ ಆದೇಶ ನೀಡಿದ್ದೇನೆ ಎಂದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist