ಮಂಗಳವಾರ, ಡಿಸೆಂಬರ್ 5, 2023
ಬೆಂಗಳೂರಿನ ಮನೆಯನ್ನೇ 100 ಕೋಟಿಗೆ ಅಡವಿಟ್ಟು ಸಿಬ್ಬಂದಿಗಳಿಗೆ ವೇತನ ನೀಡಿದ ಬೈಜೂಸ್ ಸಂಸ್ಥಾಪಕ!-ಅರ್ಜುನನ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ: ಪೊಲೀಸರಿಂದ ಲಾಠಿ ಚಾರ್ಜ್!-ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ: ದೂರು ದಾಖಲು!-ಕಾಲೇಜು ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!-ಕರ್ನಾಟಕ ಹೈಕೋರ್ಟ್ ಕಲಾಪದಲ್ಲಿ ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್..!-ಆಹಾರ ಧಾನ್ಯಗಳ ಮೂಟೆಯಡಿ ಸಿಲುಕಿ ಐವರು ಕಾರ್ಮಿಕರ ಸಾವು-ಸಿಐಡಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಫ್ರೆಡ್ರಿಕ್ಸ್ ಖ್ಯಾತಿಯ ನಟ ದಿನೇಶ್ ಫಡ್ನಿಸ್ ಹೃದಯಾಘಾತದಿಂದ ನಿಧನ.!-ನಾಯಿ ಬೊಗಳಿದಕ್ಕೆ ಗಲಾಟೆ; ಆ್ಯಸಿಡ್​ ಎರಚಿದ ದಂಪತಿ!-ಮರಕ್ಕೆ ಬಸ್ ಡಿಕ್ಕಿ 14 ಜನ ಸಾವು, 20 ಮಂದಿ ಗಾಯ-ಮುಂಬೈ ದಾಳಿಯ ಉಗ್ರನಿಗೆ ಪಾಕ್‌ ಜೈಲಿನಲ್ಲೇ ವಿಷ ಪ್ರಾಶನ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಹಿಂದೂ ಧರ್ಮ ಅವಹೇಳನ – ಕ್ಷಮೆ ಕೇಳಿದ ಪಾಕ್‌ ನಿರೂಪಕಿ

Twitter
Facebook
LinkedIn
WhatsApp
ಹಿಂದೂ ಧರ್ಮ ಅವಹೇಳನ – ಕ್ಷಮೆ ಕೇಳಿದ ಪಾಕ್‌ ನಿರೂಪಕಿ

ಇಸ್ಲಾಮಾಬಾದ್:‌ ಭಾರತ (India) ಮತ್ತು ಹಿಂದೂ ವಿರೋಧಿ (Anti Hindu) ಟ್ವೀಟ್‌ ಮಾಡಿದ್ದಕ್ಕೆ ಪಾಕಿಸ್ತಾನ (Pakistan) ಕ್ರೀಡಾ ಪತ್ರಕರ್ತೆ ಝೈನಾಬ್ ಅಬ್ಬಾಸ್‌ಳನ್ನು (Zainab Abbas) ಪಾಕಿಸ್ತಾನಕ್ಕೆ ಗಡಿಪಾರು ಮಾಡಲಾಗಿದೆ ಎಂಬ ಸುದ್ದಿ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಈ ಚರ್ಚೆಗಳು ಹುಟ್ಟಿಕೊಂಡ ನಾಲ್ಕು ದಿನಗಳ ಬಳಿಕ ಪಾಕ್‌ ನಿರೂಪಕಿ ಕ್ಷಮೆಯಾಚಿಸಿದ್ದಾಳೆ. ನನ್ನ ಅನಿರೀಕ್ಷಿತ ಹೇಳಿಕೆಗಳಿಂದ ನೋವುಂಟಾಗಿದ್ದರೆ ವಿಷಾದಿಸುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ ಎಂಬುದಾಗಿ ಆಕೆ ತನ್ನ ಟ್ವಿಟ್ಟರ್‌ (X) ಖಾತೆಯಲ್ಲಿ ಬರೆದುಕೊಂಡಿದ್ದಾಳೆ.

ನಾನು ತುಂಬಾ ಅದೃಷ್ಟಶಾಲಿ, ನನ್ನಿಷ್ಟದ ಕ್ರೀಡೆಯನ್ನ ನಿರೂಪಣೆ ಮಾಡುವುದಕ್ಕೆ ಹಾಗೂ ಅದಕ್ಕಾಗಿ ಪ್ರಯಾಣ ಮಾಡಲು ಅವಕಾಶ ಕೊಟ್ಟಿದ್ದಕ್ಕಾಗಿ ನಾನು ಕೃತಜ್ಞಳಾಗಿರುತ್ತೇನೆ. ಪ್ರತಿದಿನ ನಾನು ಎಲ್ಲರೊಟ್ಟಿಗೂ ಹರ್ಷದಿಂದಲೇ ಸಂವಾದ ಮಾಡುತ್ತಿದ್ದೇನೆ. ನನ್ನನ್ನ ಯಾರು ನಿರೂಪಣೆಯಿಂದ ತೆಗೆದುಹಾಕಿಲ್ಲ. ಗಡಿಪಾರು ಮಾಡಿರುವುದಾಗಿಯೂ ಹೇಳಿಲ್ಲ. ಆದ್ರೆ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದ ಕಾಮೆಂಟ್‌ಗಳನ್ನು ನೋಡಿ ವಿಚಲಿತಳಾದೆ. ಜೊತೆಗೆ ತುಂಬಾ ಭಯವೂ ಆಗಿತ್ತು. ನನ್ನ ಸುರಕ್ಷತೆಗೆ ಯಾವುದೇ ಆತಂಕ ಇಲ್ಲದಿದ್ದರೂ ನನ್ನ ಕುಟುಂಬ ಮತ್ತು ನನ್ನ ಸ್ನೇಹಿತರು ಆತಂಕಗೊಂಡಿದ್ದರು. ಆದ್ದರಿಂದ ನನಗೆ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಲು ಆಗಲಿಲ್ಲ. ಏನಾಯಿತು ಅಂತಾ ತಿಳಿದುಕೊಳ್ಳಲು ಸ್ವಲ್ಪ ಸಮಯ ಬೇಕಾಗಿತ್ತು ಎಂದು ಹೇಳಿದ್ದಾರೆ.

ನನ್ನ ಟ್ವೀಟ್‌ ಪೋಸ್ಟ್‌ಗಳಿಂದ ಯಾರ ಮನಸ್ಸಿಗಾದರೂ ನೋವುಂಟು ಮಾಡಿದ್ದರೆ, ತೀವ್ರವಾಗಿ ವಿಷಾದಿಸುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ. ಇದರೊಂದಿಗೆ ಸವಾಲಿನ ಸಮಯದಲ್ಲಿ ನನ್ನ ಬಗ್ಗೆ ಕಾಳಜಿ ವಹಿಸಿದ ಎಲ್ಲರಿಗೂ ಕೃತಜ್ಞಳಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಏನಿದು ವಿವಾದ?
ವಕೀಲ ವಿನೀತ್‌ ಜಿಂದಾಲ್‌ (Vineet Jindal) ಅವರು ದೆಹಲಿ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಭಾರತ ಮತ್ತು ಹಿಂದೂ ಧರ್ಮವನ್ನು ಅವಹೇಳನ ಮಾಡಿದ ಆರೋಪ ಹೊರಿಸಿ ಝೈನಾಬ್ ಅಬ್ಬಾಸ್‌ ವಿರುದ್ಧ ದೂರು ನೀಡಿದ್ದರು. ಅಷ್ಟೇ ಅಲ್ಲದೇ ಐಸಿಸಿ ವಿಶ್ವಕಪ್‌ (ICC World Cup) ನಿರೂಪಕಿ ಸ್ಥಾನದಿಂದ ಕೂಡಲೇ ತೆಗೆದುಹಾಕಬೇಕೆಂದು ಐಸಿಸಿ ಮತ್ತು ಬಿಸಿಸಿಐಗೆ ದೂರು ನೀಡಿದ್ದರು. ಈ ದೂರಿನ ಬೆನ್ನಲ್ಲೇ ಜೈನಾಬ್‌ಳನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಲಾಗಿತ್ತು. ಬಳಿಕ ಪಾಕಿಸ್ತಾನಿ ಕ್ರೀಡಾ ನಿರೂಪಕಿ ಝೈನಾಬ್ ಅಬ್ಬಾಸ್ ಅವರು ಸುರಕ್ಷತಾ ಕಾಳಜಿಯಿಂದ ಭಾರತದಿಂದ ನಿರ್ಗಮಿಸಿ, ದುಬೈನಲ್ಲಿದ್ದಾರೆ ಎಂದು ವರದಿಯಾಗಿತ್ತು.

ನಮ್ಮ ದೇಶ ಮತ್ತು ಹಿಂದೂ ಧರ್ಮವನ್ನು ಗೌರವಿಸುವವರಿಗೆ ಮಾತ್ರ ಅತಿಥಿ ದೇವೋ ಭವ. ಆದರೆ ನಮ್ಮ ಭೂಮಿಯಲ್ಲಿ ಭಾರತೀಯ ವಿರೋಧಿಗಳು ಸ್ವಾಗತಿಸುವುದಿಲ್ಲ ವಿನೀತ್‌ ಜಿಂದಾಲ್‌ ಬರೆದುಕೊಂಡಿದ್ದಾರೆ. ಈ ಹಿಂದೆ ಭಾರತ ವಿರೋಧಿಸಿ ಮಾಡಿದ ಟ್ವೀಟ್‌ ಗಳನ್ನು ಝೈನಾಬ್ ಅಬ್ಬಾಸ್ ಡಿಲೀಟ್‌ ಮಾಡಿದ್ದರೂ ಈಗ ವೈರಲ್‌ ಆಗುತ್ತಿದೆ. ಭಾರತದ ಕ್ರಿಕೆಟ್‌ ಅಭಿಮಾನಿಗಳು ಐಸಿಸಿ, ಬಿಸಿಸಿಐ ನಿರ್ಧಾರವನ್ನು ಸ್ವಾಗತಿಸಿದರೆ ಪಾಕಿಸ್ತಾನದ ಅಭಿಮಾನಿಗಳು ಭಾರತ ಸರ್ಕಾರವನ್ನು ದೂಷಣೆ ಮಾಡಲು ಆರಂಭಿಸಿದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ