ಭಾರತದ ಅತಿ ಉದ್ದದ ಸಮುದ್ರ ಸೇತುವೆ 'ಅಟಲ್ ಸೇತು' ಇಂದು ಉದ್ಘಾಟನೆ; ಏನಿದರ ವೈಶಿಷ್ಟ?

ಮುಂಬಯಿ: ದೇಶದ ಅತಿ ಉದ್ದದ ಸಮುದ್ರ ಸೇತುವೆ ‘ಅಟಲ್ ಸೇತು’ವನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ (ಜ.12) ಉದ್ಘಾಟಿಸಲಿದ್ದಾರೆ. ‘ಮುಂಬಯಿ ಟ್ರಾನ್ಸ್ ಹಾರ್ಬರ್ ಲಿಂಕ್’ (ಎಂಟಿಎಚ್‌ಎಲ್) ಎಂದೂ ಕರೆಯಲ್ಪಡುವ ಈ ಸೇತುವೆ ಮುಂಬಯಿಯಿಂದ ನವಿಮುಂಬಯಿಗೆ 2 ಗಂಟೆಗೆ ಬದಲಾಗಿ ಕೇವಲ 20 ನಿಮಿಷಗಳಲ್ಲಿ ಪ್ರಯಾಣಿಸಲು ಜನರಿಗೆ ಅನುವು ಮಾಡಿಕೊಡಲಿದೆ.
ಮುಂಬಯಿನ ಸೆವ್ರಿಯಿಂದ, ರಾಯಗಢ ಜಿಲ್ಲೆಯ ನ್ಹಾವಾ ಶೆವಾವರೆಗೆ ಸೇತುವೆ ಪೂರ್ಣಗೊಂಡಿದೆ. 2016 ರಿಂದಲೇ ಅಟಲ್ ಸೇತುವೆ ನಿರ್ಮಾಣ ಕಾರ್ಯ ಪ್ರಾರಂಭಗೊಂಡಿತ್ತು. ಅಟಲ್ ಸೇತುವೆಯಿಂದಾಗಿ ಮುಂದಿನ 6 ವರ್ಷಗಳ ಅವಧಿಯಲ್ಲಿಖಾಸಗಿ ವಲಯದಿಂದ ಮೂಲಭೂತ ಸೌಕರ್ಯ ಕ್ಷೇತ್ರದಲ್ಲಿ 96 ಲಕ್ಷ ಕೋಟಿ ರೂ. ಹಣ ಹೂಡಿಕೆ ಹರಿದುಬರುವುದಾಗಿ ಕ್ರೈಸಿಲ್ ಮಾರುಕಟ್ಟೆ ಸಮೀಕ್ಷಾ ಸಂಸ್ಥೆ ವರದಿ ಮಾಡಿದೆ.
ಕ್ಷಾ, ಬೈಕುಗಳಿಗೆ ನಿರ್ಬಂಧ
ನೂತನ ಸೇತುವೆ ಮೇಲೆ ದ್ವಿಚಕ್ರ ವಾಹನಗಳು, ಮೊಪೆಡ್‌ಗಳು, ರಿಕ್ಷಾ ಮತ್ತಿತರ ಮೂರು ಚಕ್ರದ ವಾಹನಗಳು, ಟ್ರ್ಯಾಕ್ಟರ್‌ಗಳು ಸೇರಿದಂತೆ ನಿಧಾನಗತಿಯ ವಾಹನಗಳಿಗೆ ನಿಷೇಧ ಹೇರಲಾಗಿದೆ. ಎತ್ತಿನ ಗಾಡಿ ಮತ್ತು ಪ್ರಾಣಿಯಿಂದ ಎಳೆಯಲ್ಪಡುವ ಯಾವುದೇ ವಾಹನಕ್ಕೂ ನಿರ್ಬಂಧ ವಿಧಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಪೊಲೀಸರು ಈ ಮೇಲೆ ತಿಳಿಸಲಾದ ವಾಹನಗಳ ಪ್ರವೇಶವನ್ನು ನಿಷೇಧಿಸಿದ್ದಾರೆ.
ಟೋಲ್ ಶುಲ್ಕ
ನೂತನ ಅಟಲ್ ಸೇತುವೆ ಮೇಲೆ ಪ್ರಯಾಣಿಸುವ ವಾಹನಗಳು ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಒನ್ ವೇ ಟ್ರಿಪ್‌ಗೆ 250 ರೂ. ನಿಗದಿ ಪಡಿಸಲಾಗಿದ್ದರೆ, ಟೂ ವೇ ಟ್ರಿಪ್‌ಗೆ 375 ರೂ.ಗಳನ್ನು ನಿಗದಿಪಡಿಸಲಾಗಿದೆ. ಒಂದು ವರ್ಷದ ಬಳಿಕ ಟೋಲ್ ಶುಲ್ಕವನ್ನು ಪರಿಷ್ಕರಣೆಗೊಳಪಡಿಸುವುದಾಗಿ ಮಹಾರಾಷ್ಟ್ರ ಸರಕಾರ ತಿಳಿಸಿದೆ.
ಅಟಲ್ ಸೇತು ಪ್ರಮುಖ ಅಂಶಗಳು
- ಮುಂಬಯಿ- ನವಿಮುಂಬಯಿ ನಡುವೆ ಸಂಪರ್ಕ
- 22 ಕಿ.ಮೀ- ಸೇತುವೆಯ ಒಟ್ಟು ಉದ್ದ
- 5.5 ಕಿ.ಮೀ- ಭೂಭಾಗದಲ್ಲಿಹಾದು ಹೋಗಿರುವ ಸೇತುವೆ ಮಾರ್ಗ
- 22 ಕಿ.ಮೀ- ಸೇತುವೆಯ ಒಟ್ಟು ಉದ್ದ
- 5.5 ಕಿ.ಮೀ- ಭೂಭಾಗದಲ್ಲಿಹಾದು ಹೋಗಿರುವ ಸೇತುವೆ ಮಾರ್ಗ
- 6- ರಸ್ತೆ ಪಥ
- 15 ಮೀಟರ್- ಸಮುದ್ರಮಟ್ಟದಿಂದ ಸೇತುವೆಯ ಎತ್ತರ
- 100 ನಿಮಿಷಗಳು- ಸೇತುವೆಯಿಂದ ಉಳಿತಾಯವಾಗುವ ಪ್ರಯಾಣದ ಸಮಯ
- 70,000- ದಿನಂಪ್ರತಿ ನಿರೀಕ್ಷಿತ ವಾಹನಗಳ ಸಂಖ್ಯೆ
- 100 ವರ್ಷಗಳು- ಸೇತುವೆ ಜೀವಿತಾವಧಿ
ವೆಚ್ಚ ಎಷ್ಟು?
- 18,000 ಕೋಟಿ ರೂ.- ಯೋಜನಾ ವೆಚ್ಚ
- 1.7 ಲಕ್ಷ ಮೆಟ್ರಿಕ್ ಟನ್ ಉಕ್ಕು ಬಳಕೆ
- 5.04 ಲಕ್ಷ ಮೆಟ್ರಿಕ್ ಟನ್ ಸಿಮೆಂಟ್ ಬಳಕೆ
- 5403- ನಿರ್ಮಾಣದಲ್ಲಿಭಾಗಿಯಾದ ಎಂಜಿನಿಯರ್ ಮತ್ತು ಕಾರ್ಮಿಕರು
ವೇಗ ಮಿತಿ ಎಷ್ಟಿದೆ?
- 100 ಕಿ.ಮೀ ಪ್ರತಿ ಗಂಟೆಗೆ- 4 ಚಕ್ರ ವಾಹನಗಳ ಗರಿಷ್ಟ ವೇಗ ಮಿತಿ
- 40 ಕಿ.ಮೀ- ಸೇತುವೆ ಏರುವ ಮತ್ತು ಇಳಿಯುವ ಹಾದಿಯಲ್ಲಿನ ಗರಿಷ್ಟ ವೇಗಮಿತಿ