ಮೊಹಮ್ಮದ್ ಶಮಿ - ಬುಮ್ರಾ ಕೈಚಳಕ; ಇಂಗ್ಲೆಂಡ್ ವಿರದ್ಧ100 ರನ್ಗಳಿಂದ ಗೆದ್ದ ಭಾರತ
ಮೊಹಮ್ಮದ್ ಶಮಿ – ಬುಮ್ರಾ ಕೈಚಳಕ : ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಗೆಲುವಿನ ಓಟ ಮುಂದುವರಿದಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರದ್ಧವೂ ಗೆಲುವಿನ ಸಂಭ್ರಮ ಆಚರಿಸಿದೆ. ವಿಶ್ವಕಪ್’ನ 29 ನೇ ಪಂದ್ಯವು ಭಾರತ ಮತ್ತು ಇಂಗ್ಲೆಂಡ್ ನಡುವೆ ಲಕ್ನೋದ ಎಕಾನಾ ಸ್ಟೇಡಿಯಂನಲ್ಲಿ ನಡೆದಿದೆ. ಈ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದ್ದು, ಸೆಮಿಫೈನಲ್’ಗೆ ಬಹುತೇಕ ಲಗ್ಗೆ ಇಟ್ಟಿದೆ.
ಹೈವೋಲ್ಟೇಜ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಂಗ್ಲರು ರೋಹಿತ್ ಪಡೆಯ ಅಬ್ಬರಕ್ಕೆ 100 ರನ್ಗಳ ಹೀನಾಯ ಸೋಲು ಅನುಭವಿಸಿದೆ. ಇಂಗ್ಲೆಂಡ್ ತಂಡವನ್ನು 100 ರನ್ಗಳಿಂದ ಮಣಿಸಿದ ಟೀಂ ಇಂಡಿಯಾಕ್ಕೆ ಏಕದಿನ ವಿಶ್ವಕಪ್ನಲ್ಲಿ ಆಂಗ್ಲರ ವಿರುದ್ಧ ಇದು ದಾಖಲೆಯ ಗೆಲುವಾಗಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ವಿಶ್ವಕಪ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಸತತ ಸೋಲುಗಳಿಂದ ತತ್ತರಿಸಿರುವ ಇಂಗ್ಲೆಂಡ್ ಐದನೇ ಸೋಲಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಂಡಿದೆ.
ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು. ಭಾರತ ತಂಡ ನಿಗದಿತ 50 ಓವರ್’ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 229 ರನ್ ಗಳಿಸಲಷ್ಟೇ ಶಕ್ತವಾಯಿತು. ಇನ್ನು ನಾಯಕ ರೋಹಿತ್ ಶರ್ಮಾ 87 ರನ್’ಗಳ ಗರಿಷ್ಠ ಕೊಡುಗೆ ನೀಡಿದರು. ಇವರಲ್ಲದೆ ಸೂರ್ಯಕುಮಾರ್ ಯಾದವ್ 49 ರನ್ ಮತ್ತು ಕೆಎಲ್ ರಾಹುಲ್ 39 ರನ್ ಗಳಿಸಿದರು. ಇಂಗ್ಲೆಂಡ್ ಪರ ಡೇವಿಡ್ ವಿಲ್ಲಿ 3 ವಿಕೆಟ್ ಪಡೆದರೆ, ಕ್ರಿಸ್ ವೋಕ್ಸ್ ಮತ್ತು ಆದಿಲ್ ರಶೀದ್ ತಲಾ 2 ವಿಕೆಟ್ ಪಡೆದರು. ಮಾರ್ಕ್ ವುಡ್ ಕೂಡ ಒಂದು ವಿಕೆಟ್ ಪಡೆದರು.
ಇನ್ನು ಭಾರತದ ಪರ ಸ್ಪಿನ್ನರ್’ಗಳು ಮೋಡಿ ಮಾಡಿದ್ದು, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ ಕೈಚಳಕದಿಂದ ಟೀಂ ಇಂಡಿಯಾಗೆ ಗೆಲುವು ತಂದುಕೊಟ್ಟಿದ್ದಾರೆ.
ಡೇವಿಡ್ ಮಲನ್ 16 ರನ್‌ಗೆ ಔಟಾದರು.ಇತ್ತ ಜೋ ರೂಟ್ ಡಕೌಟ್ ಆದರು.. 30 ರನ್‌ಗೆ ಇಂಗ್ಲೆಂಡ್ 2 ವಿಕೆಟ್ ಕಳೆದುಕೊಂಡಿತು. ಇದರ ಬೆನ್ನಲ್ಲೇ ಬೆನ್ ಸ್ಟೋಕ್ಸ್ ಕೂಡ ಶೂನ್ಯ ಸುತ್ತಿದರು. ಜಾನಿ ಬೈರ್‌ಸ್ಟೋ ಕೇವಲ 14 ರನ್ ಸಿಡಿಸಿ ನಿರ್ಗಮಿಸಿದರು.ಜೋಸ್ ಬಟ್ಲರ್ 10 ಹಾಗೂ ಮೋಯಿನ್ ಆಲಿ 15 ರನ್ ಸಿಡಿಸಿ ಪೆವಿಲಿಯನ್ ಸೇರಿದರು.
ಮೊಹಮ್ಮದ್ ಶಮಿ 4 ವಿಕೆಟ್, ಜಸ್ಪ್ರೀತ್ ಬುಮ್ರಾ 3, ಕುಲ್ದೀಪ್ ಯಾದವ್ 2, ರವೀಂದ್ರ ಜಡೇಜಾ 1 ವಿಕೆಟ್ ಕಬಳಿಸಿದರು. ಈ ಮೂಲಕ ಇಂಗ್ಲೆಂಡ್ 34.5 ಓವರ್‌ಗಳಲ್ಲೇ ಆಲೌಟ್ ಆಗಿದೆ. ಭಾರತ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದರೆ, ಇಂಗ್ಲೆಂಡ್ ಕೊನೆಯ ಸ್ಥಾನದಲ್ಲೇ ಉಳಿದುಕೊಂಡಿದೆ.