ಶನಿವಾರ, ಮಾರ್ಚ್ 15, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಕಿರಿಯರ ಏಷ್ಯಾಕಪ್ ವನಿತಾ ಹಾಕಿ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತ

Twitter
Facebook
LinkedIn
WhatsApp
Untitled 24

ಕಾ​ಕ​ಮಿ​ಗ​ಹ​ರಾ​(​ಜೂ.12​): ಕಿರಿಯ ಮಹಿ​ಳೆ​ಯರ ಏಷ್ಯಾ​ಕಪ್‌ ಹಾಕಿ ಟೂರ್ನಿ​ಯಲ್ಲಿ ಭಾರತ ಚೊಚ್ಚಲ ಬಾರಿ ಚಾಂಪಿ​ಯನ್‌ ಆಗಿ ಹೊರ​ಹೊ​ಮ್ಮಿ​ದೆ. 8ನೇ ಆವೃ​ತ್ತಿಯ ಟೂರ್ನಿಯ ದ.ಕೊರಿ​ಯಾ ವಿರು​ದ್ಧದ ರೋಚಕ ಫೈನ​ಲ್‌​ನಲ್ಲಿ 2-1 ಗೋಲು​ಗಳಿಂದ ಗೆಲುವು ಸಾಧಿ​ಸಿದ ಭಾರತ ವನಿ​ತೆ​ಯರು 31 ವರ್ಷ​ಗಳ ಪ್ರಶಸ್ತಿ ಬರ ನೀಗಿ​ಸಿ​ದರು. ಇದ​ರೊಂದಿಗೆ ದಾಖ​ಲೆಯ 5ನೇ ಬಾರಿ ಚಾಂಪಿ​ಯನ್‌ ಎನಿ​ಸಿ​ಕೊ​ಳ್ಳುವ ಕೊರಿಯಾ ಕನಸು ಭಗ್ನ​ಗೊಂಡಿತು. ಇತ್ತೀ​ಚೆ​ಗಷ್ಟೇ ಭಾರತ ಪುರು​ಷರ ತಂಡವೂ ಕಿರಿಯರ ಏಷ್ಯಾ​ಕ​ಪ್‌​ನಲ್ಲಿ ಚಾಂಪಿ​ಯನ್‌ ಎನಿ​ಸಿ​ಕೊಂಡಿ​ತ್ತು.

ಭಾನು​ವಾ​ರದ ಪಂದ್ಯ​ದಲ್ಲಿ ಭಾರತದ ಪರ ಅನ್ನು 22ನೇ ನಿಮಿ​ಷ​ದಲ್ಲಿ ಪೆನಾಲ್ಟಿಸ್ಟೊ್ರೕಕ್‌ ಮೂಲಕ ಗೋಲು ದಾಖ​ಲಿ​ಸಿ​ದರೂ, ಬಳಿಕ ಕೇವಲ 3 ನಿಮಿ​ಷ​ಗ​ಳಲ್ಲೇ ಕೊರಿಯಾ ಸಮ​ಬಲ ಸಾಧಿ​ಸಿತು. ಆದರೆ 41ನೇ ನಿಮಿ​ಷ​ದಲ್ಲಿ ನೀಲಂ ಹೊಡೆದ ಗೋಲು ಭಾರ​ತಕ್ಕೆ ಪ್ರಶಸ್ತಿ ತಂದು​ಕೊ​ಟ್ಟಿತು. ಭಾರತ ಈ ಮೊದಲು 2012ರಲ್ಲಿ ಫೈನಲ್‌ಗೇರಿ​ದ್ದರೂ, ಚೀನಾ ವಿರುದ್ಧ ಸೋತು ಪ್ರಶಸ್ತಿ ತಪ್ಪಿ​ಸಿ​ಕೊಂಡಿತ್ತು. 5 ಬಾರಿ ಸೆಮೀ​ಸ್‌​ನಲ್ಲೇ ಮುಗ್ಗ​ರಿ​ಸಿ​ತ್ತು.

ಗಣ್ಯರ ಅಭಿನಂದನೆ: ಕಿರಿಯ ಮಹಿಳೆಯರ ಏಷ್ಯಾಕಪ್‌ ಹಾಕಿ ಟೂರ್ನಿಯಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿರುವ ಭಾರತ ತಂಡದ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಟ್ವೀಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಭುವ​ನೇ​ಶ್ವ​ರ: 3ನೇ ಆವೃ​ತ್ತಿಯ ಇಂಟರ್‌ ಕಾಂಟಿ​ನೆಂಟಲ್‌ ಫುಟ್ಬಾಲ್‌ ಟೂರ್ನಿ​ಯಲ್ಲಿ ಫೈನಲ್‌ ಪ್ರವೇ​ಶಿ​ಸಲು ಎದುರು ನೋಡು​ತ್ತಿ​ರುವ ಆತಿ​ಥೇಯ ಭಾರತ, ಲೀಗ್‌ ಹಂತದ ತನ್ನ 2ನೇ ಪಂದ್ಯ​ದಲ್ಲಿ ಸೋಮ​ವಾರ ವಾನ​ವಾಟು ವಿರುದ್ಧ ಸೆಣ​ಸಲಿದೆ. ಮುಂಬ​ರುವ ಸ್ಯಾಫ್‌ ಚಾಂಪಿ​ಯ​ನ್‌​ಶಿ​ಪ್‌ನ ಸಿದ್ಧ​ತೆ​ಗಾಗಿ ನಡೆ​ಯು​ತ್ತಿ​ರುವ ಟೂರ್ನಿ​ಯಲ್ಲಿ ಭಾರತ ಶುಕ್ರ​ವಾರ ಮಂಗೋ​ಲಿಯಾ ವಿರುದ್ಧ ಗೆದ್ದು ಶುಭಾ​ರಂಭ ಮಾಡಿತ್ತು.

4 ತಂಡ​ಗಳ ನಡು​ವಿನ ಟೂರ್ನಿ​ಯಲ್ಲಿ ಸದ್ಯ ಭಾರತ 3 ಅಂಕ​ಗ​ಳೊಂದಿಗೆ 2ನೇ ಸ್ಥಾನ​ದ​ಲ್ಲಿದ್ದು, ಈ ಪಂದ್ಯ​ದಲ್ಲಿ ಗೆದ್ದರೆ ಅಗ್ರ-2 ಸ್ಥಾನ ಬಹು​ತೇಕ ಖಚಿ​ತ​ವಾ​ಗ​ಲಿದೆ. ವಾನ​ವಾಟು ಮೊದಲ ಪಂದ್ಯ​ದಲ್ಲಿ ಲೆಬ​ನಾನ್‌ ವಿರುದ್ಧ ಸೋತಿತ್ತು. ಸೋಮ​ವಾ​ರದ ಮತ್ತೊಂದು ಪಂದ್ಯ​ದಲ್ಲಿ ಲೆಬ​ನಾ​ನ್‌-ಮಂಗೋ​ಲಿಯಾ ಮುಖಾ​ಮುಖಿ​ಯಾ​ಗ​ಲಿವೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist