ಸೋಮವಾರ, ಡಿಸೆಂಬರ್ 23, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಭಾರತದ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಸಮೀಪಿಸಿಲ್ಲ ಎಂದ ಚೀನಾದ ಉನ್ನತ ವಿಜ್ಞಾನಿ..!

Twitter
Facebook
LinkedIn
WhatsApp
ಭಾರತದ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಸಮೀಪಿಸಿಲ್ಲ ಎಂದ ಚೀನಾದ ಉನ್ನತ ವಿಜ್ಞಾನಿ..!

ಹೊಸದಿಲ್ಲಿ: ಭಾರತ ಮತ್ತು ಚೀನಾಗಳ ನಡುವಿನ ಚಕಮಕಿ ಈಗ ಬಾಹ್ಯಾಕಾಶ ರೇಸ್‌ಗೂ (space race) ತಲುಪಿದೆ. ಚಂದ್ರಯಾನ 3ರ (Chandrayaan 3) ಲ್ಯಾಂಡಿಂಗ್ ಸೈಟ್ ಚಂದ್ರನ ದಕ್ಷಿಣ ಧ್ರುವದಲ್ಲಿಲ್ಲ (South pole) ಎಂದು ಚೀನಾದ ಉನ್ನತ ವಿಜ್ಞಾನಿಯೊಬ್ಬರು ಹೇಳಿದ್ದಾರೆ.

ಕಳೆದ ತಿಂಗಳು ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯುವುದರೊಂದಿಗೆ (moon landing), ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಮೊದಲ ದೇಶವೆನಿಸಿತ್ತು. ಜತೆಗೆ ಈ ವಿಚಾರದಲ್ಲಿ ಚೀನಾವನ್ನೂ ಹಿಂದೆ ಹಾಕಿತ್ತು. ಇದು ಚೀನಾವನ್ನು ಕೆರಳಿಸಿದೆ.

ಚೈನೀ ಭಾಷೆಯ ಸೈನ್ಸ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಚೀನಾದ ಚಂದ್ರನ ಪರಿಶೋಧನಾ ಕಾರ್ಯಕ್ರಮದ ಪಿತಾಮಹ ಎಂದು ಶ್ಲಾಘಿಸಲ್ಪಟ್ಟ ಓಯಾಂಗ್ ಜಿಯುವಾನ್ ಎಂಬ ವಿಜ್ಞಾನಿ ಭಾರತದ ಸಾಧನೆಯನ್ನು ಸಂಶಯಿಸಿದ್ದಾರೆ. 69 ಡಿಗ್ರಿ ದಕ್ಷಿಣ ಅಕ್ಷಾಂಶದಲ್ಲಿರುವ ಚಂದ್ರಯಾನ-3 ಲ್ಯಾಂಡಿಂಗ್ ಸೈಟ್ ದಕ್ಷಿಣ ಧ್ರುವಕ್ಕೆ ಹತ್ತಿರದಲ್ಲಿಲ್ಲ. 88.5 ಮತ್ತು 90ರ ನಡುವೆ ದಕ್ಷಿಣ ಧ್ರುವ ಇದೆಯೆಂದು ವ್ಯಾಖ್ಯಾನಿಸಬಹದುಉ ಎಂದಿದ್ದಾರೆ.

ಭೂಮಿಯ ಮೇಲೆ, 69 ಡಿಗ್ರಿ ದಕ್ಷಿಣವು ಅಂಟಾರ್ಕ್ಟಿಕ್ ವೃತ್ತದೊಳಗೆ ಇರುತ್ತದೆ. ಆದರೆ ಚಂದ್ರನಲ್ಲಿ ಇದು ದಕ್ಷಿಣ ಧ್ರುವಕ್ಕೆ ಹೆಚ್ಚು ಹತ್ತಿರದಲ್ಲಿದೆ. ಚಂದ್ರಯಾನ-3 ಧ್ರುವ ಪ್ರದೇಶದಿಂದ 619 ಕಿಲೋಮೀಟರ್ (385 ಮೈಲುಗಳು) ದೂರದಲ್ಲಿದೆ ಎಂದು ಒಯಾಂಗ್ ಹೇಳಿದರು.

ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್ ನಂತರ, ಬೀಜಿಂಗ್ ಮೂಲದ ಹಿರಿಯ ಬಾಹ್ಯಾಕಾಶ ತಜ್ಞ ಪಾಂಗ್ ಝಿಹಾವೊ ಅವರು ಕೂಡ ಚೀನಾವು ಇದಕ್ಕಿಂತ ಉತ್ತಮ ತಂತ್ರಜ್ಞಾನವನ್ನು ಹೊಂದಿದೆ ಎಂದು ಹೇಳಿದ್ದರು.

“ಚೀನಾದ ಬಾಹ್ಯಾಕಾಶ ಕಾರ್ಯಕ್ರಮವು 2010ರಲ್ಲಿ ಚಾಂಗ್ಇ-2 ಅನ್ನು ಉಡಾವಣೆ ಮಾಡಿದ ನಂತರ ತನ್ನ ಆರ್ಬಿಟರ್‌ ಹಾಗೂ ಲ್ಯಾಂಡರ್‌ಗಳನ್ನು ನೇರವಾಗಿ ಭೂಮಿಯಿಂದ ಚಂದ್ರನ ಕಕ್ಷೆಗೆ ಕಳುಹಿಸುವ ಸಾಮರ್ಥ್ಯವನ್ನು ಹೊಂದಿದೆ. ಭಾರತದ ಉಡಾವಣಾ ವಾಹನಗಳ ಸಾಮರ್ಥ್ಯ ಸೀಮಿತ. ಚೀನಾ ಬಳಸಿದ ಎಂಜಿನ್ ಕೂಡ ಹೆಚ್ಚು ಸುಧಾರಿತವಾಗಿದೆ” ಎಂದು ಜಿಹಾವೊ ಹೇಳಿದ್ದರು.

ಆದರೂ ಭಾರತದ ಚಂದ್ರಯಾನ-3 ಇತರ ಬಾಹ್ಯಾಕಾಶ ನೌಕೆಗಳಿಗಿಂತ ಹೆಚ್ಚು ದಕ್ಷಿಣಕ್ಕೆ ಹೋಗಿದೆ. ಪ್ರಸ್ತುತ ಇಸ್ರೋ (ISRO) ಚಂದ್ರಯಾನ 3ರ ವಿಕ್ರಮ್ ಲ್ಯಾಂಡರ್ (Vikram lander) ಮತ್ತು ಪ್ರಗ್ಯಾನ್ ರೋವರ್‌ನೊಂದಿಗೆ (Pragyan rover) ಮರಳಿ ಸಂಪರ್ಕ ಸ್ಥಾಪಿಸಲು ಕಾಯುತ್ತಿದೆ. ಅಕ್ಟೋಬರ್ 6ರಂದು ಚಂದ್ರನ ಮೇಲೆ ಮುಂದಿನ ಸೂರ್ಯಾಸ್ತವಾಗುವವರೆಗೆ ಯಂತ್ರವನ್ನು ಪುನರುಜ್ಜೀವಗೊಳಿಸುವ ಪ್ರಯತ್ನಗಳನ್ನು ಮುಂದುವರಿಸಿದೆ.

2019ರಲ್ಲಿ ಚಂದ್ರನಲ್ಲಿ ಮೊದಲ ಬಾರಿಗೆ ಇಳಿದ ಚೀನಾದ ಚಾಂಗ್ 4, ದಕ್ಷಿಣಕ್ಕೆ 45 ಡಿಗ್ರಿಗಳನ್ನು ಮುಟ್ಟಿತು. 1968ರಲ್ಲಿ 41 ಡಿಗ್ರಿ ದಕ್ಷಿಣದಲ್ಲಿ NASAದ ಸರ್ವೇಯರ್ 7 ಚಂದ್ರನನ್ನು ತಲುಪಿತ್ತು. ನಾಸಾದ ಅಪೊಲೊ ಕಾರ್ಯಕ್ರಮ ಕೊನೆಗೊಂಡ ಅರ್ಧ ಶತಮಾನದ ಬಳಿಕ ಚಂದ್ರನ ಮೇಲೆ ಮತ್ತೆ ಗಗನಯಾತ್ರಿಗಳನ್ನು ಕಳುಹಿಸುವ ಯೋಜನೆಗಳಿಗಾಗಿ US ಮತ್ತು ಚೀನಾ ಎರಡೂ ಚಿಂತಿಸುತ್ತಿವೆ.

 

ಭಾರತ ವಿರುದ್ಧ ಪಾಕ್ ಕುತಂತ್ರ; ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆ ಹಿಂದೆ ಐಎಸ್‌ಐ ಕೈವಾಡ

ನವದೆಹಲಿ: ಉಗ್ರ ಪೋಷಣೆ, ಉಗ್ರರ ದಾಳಿಗೆ ಸಹಕಾರ ನೀಡುವ ಮೂಲಕ ಭಾರತದ ಜತೆ ವ್ಯಾಪಾರ, ಸಹಕಾರ, ದ್ವಿಪಕ್ಷೀಯ ನೆರವಿನಿಂದ ವಂಚಿತವಾಗಿರುವ ಪಾಕಿಸ್ತಾನವು (Pakistan) ಭಾರತ ಜತೆಗೆ ಮಾತುಕತೆ ನಡೆಸಲು ಜಾಗತಿಕ ಮಟ್ಟದಲ್ಲಿ ಲಾಬಿ ನಡೆಸುತ್ತಿದೆ. ನಾವು ಮಾತುಕತೆಗೆ ಸಿದ್ಧ ಎಂದು ಜಾಗತಿಕ ವೇದಿಕೆಗಳಲ್ಲಿಯೂ ಹೇಳಿಕೊಳ್ಳುತ್ತಿದೆ. ಆದರೆ, ಭಾರತದ ವಿರುದ್ಧ ಕುತಂತ್ರ ಮಾಡುವ ಬುದ್ಧಿಯನ್ನು ಮಾತ್ರ ಪಾಕಿಸ್ತಾನ ಬಿಟ್ಟಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ (Hardeep Singh Nijjar) ಹತ್ಯೆಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ವರದಿಯೊಂದರಿಂದ ತಿಳಿದುಬಂದಿದೆ. ಭಾರತದ ವಿರುದ್ಧ ಷಡ್ಯಂತ್ರದ ಭಾಗವಾಗಿಯೇ ಪಾಕಿಸ್ತಾನ ಇಂತಹ ಕೃತ್ಯ (Nijjar Killing) ಎಸಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳೇ ತಿಳಿಸಿವೆ.

“ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ಹಿಂದೆ ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ (ISI) ಕೈವಾಡವಿದೆ. ಕೆನಡಾದಲ್ಲಿ ರಾಹತ್‌ ರಾವ್‌ ಹಾಗೂ ತಾರಿಕ್‌ ಕಿಯಾನಿ ಎಂಬುವರು ಐಸಿಸ್‌ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಭಾರತದಲ್ಲಿ ಅಪರಾಧ ಎಸಗಿ ಕೆನಡಾಗೆ ತೆರಳುವವರಿಗೂ ಇವರು ನೆರವು ನೀಡುತ್ತಿದ್ದಾರೆ. ಅಷ್ಟೇ ಅಲ್ಲ, ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಗೂ ಇವರೇ ಪ್ಲಾನ್‌ ರೂಪಿಸಿದ್ದಾರೆ. ಭಾರತದ ವಿರುದ್ಧ ಕೆನಡಾದಲ್ಲಿ ಪಾಕಿಸ್ತಾನ ಕುತಂತ್ರ ಮಾಡುತ್ತಿದೆ” ಎಂದು ತಿಳಿದುಬಂದಿದೆ.

“ಹರ್ದೀಪ್‌ ಸಿಂಗ್‌ ನಿಜ್ಜರ್‌ ತುಂಬ ಎಚ್ಚರದಿಂದ ಇರುತ್ತಿದ್ದ. ಆತನಿಗೆ ಹೆಚ್ಚಿನ ಪ್ರಮಾಣದಲ್ಲಿ ಭದ್ರತೆ ಇರುತ್ತಿತ್ತು. ಆತನ ವಸತಿ, ಪ್ರಯಾಣ ಸೇರಿ ಹಲವು ವಿಷಯಗಳಲ್ಲಿ ಭಾರಿ ಗೌಪ್ಯತೆ ಇರುತ್ತಿತ್ತು. ಹಾಗಾಗಿ, ಸಾಮಾನ್ಯರಿಗೆ ಆತನ ಬಗ್ಗೆ ಯಾವುದೇ ಸುಳಿವು ಇರುತ್ತಿರಲಿಲ್ಲ. ಆದರೆ, ಹರ್ದೀಪ್‌ ಸಿಂಗ್‌ ನಿಜ್ಜರ್‌ ಚಲನವಲನ ಸೇರಿ ಹಲವು ಮಾಹಿತಿ ರಾಹತ್‌ ರಾವ್‌ ಹಾಗೂ ತಾರಿಕ್‌ ಕಿಯಾನಿಗೆ ಇತ್ತು. ನಿಜ್ಜರ್‌ ಮನೆಯ ಬಳಿಯೇ ಪಾಕಿಸ್ತಾನದ ಐಎಸ್‌ಐ ಅಧಿಕಾರಿಗಳು ವಾಸವಿದ್ದರು. ಇವರೇ ನಿಜ್ಜರ್‌ ಹತ್ಯೆಗೆ ಸಂಚು ರೂಪಿಸಿದ್ದಾರೆ” ಎಂದು ಮೂಲಗಳು ತಿಳಿಸಿವೆ.

ಜೂನ್‌ 18ರಂದು ಕೆನಡಾದಲ್ಲಿ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಗೀಡಾಗಿದ್ದಾನೆ. ಇದರ ಹಿಂದೆ ಭಾರತದ ಏಜೆಂಟರ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಆರೋಪ ಕೂಡ ಮಾಡಿದ್ದಾರೆ. ಹೀಗೆ, ಕೆನಡಾವನ್ನು ಭಾರತದ ವಿರುದ್ಧ ಎತ್ತಿಕಟ್ಟಲು ಪಾಕಿಸ್ತಾನದ ಐಎಸ್‌ಐ ಇಂತಹ ಕುತಂತ್ರ ಮಾಡಿದೆ. ಆದರೆ, ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ಆರೋಪವನ್ನು ತಿರಸ್ಕರಿಸುವ ಭಾರತ, ಆರೋಪಗಳಿಗೆ ಸಾಕ್ಷ್ಯ ಕೊಡಿ ಎಂದು ತಿರುಗೇಟು ನೀಡಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈಗ ಭಾರತ ಹಾಗೂ ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಶುರುವಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist