ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ನಿಜಕ್ಕೂ ಮ್ಯಾನೇಜರ್ ಮೋಸ ಮಾಡಿದ್ನಾ?: ಸತ್ಯ ಬಿಚ್ಚಿಟ್ಟ ನಟಿ ರಶ್ಮಿಕಾ ಮಂದಣ್ಣ

Twitter
Facebook
LinkedIn
WhatsApp
338238359 1256396148327106 2498429480303963691 n

ಶ್ಮಿಕಾ ಮಂದಣ್ಣ (Rashmika Mandanna) ವಾರದಿಂದ ಇದೊಂದು ಸುದ್ದಿಯಿಂದ ಲೈಮ್‌ಲೈಟಿನಲ್ಲಿದ್ದರು. ಹಲವು ವರ್ಷಗಳಿಂದ ಇವರ ಬಳಿ ಮ್ಯಾನೇಜರ್ (Manager) ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಮೋಸ (Cheating)  ಮಾಡಿದ್ದಾನೆ ಎನ್ನುವುದು ಸುದ್ದಿಯ ಸಾರವಾಗಿತ್ತು. ಸುಮಾರು ಎಂಬತ್ತು ಲಕ್ಷ ರೂಪಾಯಿ ಲಪಟಾಸಿದ್ದಕ್ಕೆ ಮ್ಯಾನೇಜರ್‌ನನ್ನು ಕಿತ್ತು ಬಿಸಾಕಿದ್ದಾರೆ ರಶ್ಮಿಕಾ ಅನ್ನೋ ಸುದ್ದಿ ಹರಿದಾಡುತ್ತಿತ್ತು.

201383210 349616583202135 3186287952263156387 n

ಒಂದರ ಹಿಂದೊಂದು ಬಾಲಿವುಡ್ ಸಿನಿಮಾ ಒಪ್ಪಿಕೊಳ್ಳುತ್ತಿರುವ ರಶ್ಮಿಕಾ ಈಗ ಸಿಕ್ಕಾಪಟ್ಟೆ ಬಿಜಿ ಬಿಜಿ. ಇದನ್ನೆಲ್ಲ ನೋಡಿಕೊಳ್ಳಲು ಒಂದೊಂದಕ್ಕೆ ಒಬ್ಬೊಬ್ಬ ಕೆಲಸಗಾರರು ಇದ್ದಾರೆ. ಹೈದ್ರಾಬಾದ್, ಮುಂಬೈಗೆ ರಶ್ಮಿಕಾ ಓಡಾಡುತ್ತಿದ್ದಾರೆ. ಈ ನಡುವೆ ಇದೊಂದು ಸಮಾಚಾರ ಎಲ್ಲರಲ್ಲೂ ಕುತೂಹಲ ಮೂಡಿಸಿತು. ರಶ್ಮಿಕಾ ಬಳಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಭರ್ತಿ ಎಂಬತ್ತು ಲಕ್ಷ ರೂಪಾಯಿ ಮೋಸ ಮಾಡಿದ್ದಾನೆ. ಅಂದರೆ ನುಂಗಿ ಹಾಕಿದ್ದಾನೆ. ಅದಕ್ಕಾಗಿ ಅವನನ್ನು ಕಿತ್ತು ಹಾಕಿದ್ದಾರೆ ರಶ್ಮಿಕಾ. ಇದು ಎಲ್ಲ ಮಾಧ್ಯಮದಲ್ಲಿ ಸುದ್ದಿಯಾಯಿತು. ಪೊಲೀಸು, ಕೇಸು, ಕೋರ್ಟು ಇತ್ಯಾದಿಯನ್ನು ಪಕ್ಕಕ್ಕಿಟ್ಟು ರಶ್ಮಿಕಾ ತಣ್ಣಗೆ ಕೆಲಸ ಮುಗಿಸಿದ್ದಾರೆ ಎಂದು ಹೇಳಲಾಗಿತ್ತು.

291126706 590350115795446 8028710357057744699 n

ಅಯ್ಯೋ.. ಕೇಳಿದ್ದರೆ ರಶ್ಮಿಕಾ ಸಾಲ ಕೊಡುತ್ತಿರಲಿಲ್ಲಾವಾ? ಅಷ್ಟು ನಂಬಿಕೆ ಇಟ್ಟಿದ್ದ ಹುಡುಗಿಗೆ ಹೀಗೆ ಮಾಡೋದಾ? ಅವನ್ಯಾವನೋ ಪಕ್ಕಾ ಕಳ್ಳನೇ ಇರಬೇಕು. ಹೀಗಂತ ಎಲ್ಲರೂ ಮಾತಾಡಿಕೊಂಡರು. ಅದನ್ನೇ ನಿಜ ಎಂದು ನಂಬಿದ್ದರು. ಆದರೆ ಅದೇ ರಶ್ಮಿಕಾ ಆಪ್ತರು ಇನ್ನೊಂದು ರೀತಿ ವಿಷಯ ಬಿಚ್ಚಿಟ್ಟಿದ್ದರು. ಮ್ಯಾನೇಜರ್ ನಮ್ಮಲ್ಲಿ ಇದ್ದದ್ದು ನಿಜ. ಆದರೆ ಆತ ಯಾವುದೇ ಮೋಸ ಮಾಡಿಲ್ಲ. ಎಂಬತ್ತು ಲಕ್ಷದ ಕತೆಯಂತೂ ಸುಳ್ಳೆ ಸುಳ್ಳು. ಆತನ ಅವಧಿ ಮುಗಿದಿತ್ತು. ಜೊತೆಗೆ ಆತ ಇನ್ನೇನೊ ಹೊಸ ಕೆಲಸ ಕಂಡುಕೊಂಡಿದ್ದ. ಈ ಕಾರಣಕ್ಕೆ ಇಬ್ಬರೂ ಮಾತಾಡಿ ದೂರವಾಗಿದ್ದಾರೆ ಅಷ್ಟೇ ಎಂದು ಹೇಳಿದ್ದರು.

ಹೀಗಾಗಿ ಎರಡರಲ್ಲಿ ಯಾವುದು ನಿಜ? ಯಾವುದು ಸುಳ್ಳು? ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲವಲ್ಲ? ಮಾಧ್ಯಮಕ್ಕೆ ಸಿಕ್ಕ ಮಾಹಿತಿ ಸುಳ್ಳಾ? ಎಲ್ಲವೂ ಬರೀ ಪ್ರಶ್ನೆಗಳೇ. ಇದಕ್ಕೆ ರಶ್ಮಿಕಾ ಯಾವುದೇ ಪ್ರತಿಕ್ರಿಯೆ  (Reaction)ಕೊಟ್ಟಿರಲಿಲ್ಲ. ಇದೀಗ ಎಂಬತ್ತು ಲಕ್ಷ ರೂಪಾಯಿ ಮೋಸ ಮತ್ತು ಮ್ಯಾನೇಜರ್ ಕುರಿತಾಗಿ ಸ್ವತಃ ರಶ್ಮಿಕಾ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಮ್ಯಾನೇಜರ್ ಮೋಸ ಮಾಡಿದ್ದಾರೆ ಎನ್ನುವುದು ಸುಳ್ಳು. ಸ್ವತಂತ್ರವಾಗಿ ಕೆಲಸ ಮಾಡಲು ಮ್ಯಾನೇಜರ್ ಬಯಸಿದ್ದರು. ಸೌಹಾರ್ದಯುತವಾಗಿ ಇಬ್ಬರೂ ಬೇರ್ಪಟ್ಟಿದ್ದೇವೆ. ಹಬ್ಬಿರುವ ಸುದ್ದಿ ಸುಳ್ಳು. ನಾವು ಚೆನ್ನಾಗಿಯೇ ಇದ್ದೇವೆ. ಯಾವುದೇ ಮೋಸ ಆಗಿಲ್ಲ ಮತ್ತು ಮಾಡಿಲ್ಲ ಎನ್ನುವ ಅರ್ಥದಲ್ಲಿ ರಶ್ಮಿಕಾ ಪೋಸ್ಟ್ ಮಾಡಿದ್ದಾರೆ.

42161707 677487589295216 4040342560743358464 n

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist