ಮಂಗಳವಾರ, ಅಕ್ಟೋಬರ್ 3, 2023
ಹ್ಯುಂಡೈನ ಎಲ್ಲ ಮಾದರಿಯ ಕಾರುಗಳಲ್ಲಿ ಇನ್ನು ಮುಂದೆ ಆರು ಏರ್​ಬ್ಯಾಗ್​ಗಳು ನೀಡುವುದಾಗಿ ಘೋಷಿಸಿದ ಹ್ಯುಂಡ್ಯೆ!-ಉಳ್ಳಾಲ: ಅಬ್ಬಕ್ಕ ಪ್ರತಿಮೆ ಎದುರು ಪುಂಡಾಟ; ಯುವಕರಿಗೆ ನೋಟಿಸ್-ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಚಿನ್ನ ಸೀಝ್ ; ಚಿನ್ನವನ್ನು ಎಲ್ಲೆಲ್ಲಿ ಬಚ್ಚಿಟ್ಟು ತಂದಿದ್ದಾರೆ ಗೊತ್ತೆ..!-ನನ್ನ ಮೇಲೆ ಹೈಕಮಾಂಡ್ ಗೆ ಪ್ರೀತಿ ಜಾಸ್ತಿ; ಅದಕ್ಕೆ ನಾನೇನು ಮಾತನಾಡಿದರೆ ನೋಟಿಸ್ ಕೊಡುತ್ತಾರೆ !-ಕೇರಳ : ಚರ್ಚ್ ಪಾದ್ರಿ ಬಿಜೆಪಿ ಸೇರ್ಪಡೆ ; ಕರ್ತವ್ಯದಿಂದ ಅಮಾನತು!-ಮಹಾರಾಷ್ಟ್ರ : ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ದಿನ 12 ನವಜಾತ ಶಿಶುಗಳು ಸೇರಿ 24 ಮಂದಿ ಸಾವು!-ಒಂದೇ ಧರ್ಮವಿದೆ; ಅದು ಸನಾತನ ಧರ್ಮ - ಯೋಗಿ ಆದಿತ್ಯನಾಥ್-ಕಾಪು : ಆಲದ ಮರ ಉರುಳಿ ಬಿದ್ದು ಓರ್ವ ಸಾವು ; ಇಬ್ಬರಿಗೆ ಗಾಯ!-Gold Rate : ಇಳಿಕೆ ಕಂಡ ಚಿನ್ನದ ಬೆಲೆ ; 10 ಗ್ರಾಂ ಚಿನ್ನ - ಬೆಳ್ಳಿಯ ದರ ಇವತ್ತೆಷ್ಟಿದೆ!-ರಸ್ತೆ ಬದಿ ಮಲಗಿದ್ದ 10 ಮಂದಿ ಕಾರ್ಮಿಕರ ಮೇಲೆ ಹರಿದ ಟ್ರಕ್ ; 5 ಮಂದಿ ಮೃತ್ಯು - ಐವರು ಗಂಭೀರ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

IND vs NZ 3rd ODI: ಇಂದು ಭಾರತ-ನ್ಯೂಜಿಲೆಂಡ್ ತೃತೀಯ ಏಕದಿನ: ಕ್ಲೀನ್​ಸ್ವೀಪ್​ನತ್ತ ರೋಹಿತ್ ಚಿತ್ತ

Twitter
Facebook
LinkedIn
WhatsApp
download 2 4

ಈಗಾಗಲೇ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಭಾರತ (India vs New Zealand) ಕೈವಶ ಮಾಡಿಕೊಂಡಿದೆ. ಹೈದರಾಬಾದ್​ನಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) 12 ರನ್​ಗಳ ಜಯ ಸಾಧಿಸಿತ್ತು. ಬಳಿಕ ರಾಪ್​ಪುರದಲ್ಲಿ ಬಿರುಗಾಳಿ ಎಬ್ಬಿಸಿದ ಭಾರತೀಯ ಬೌಲರ್​ಗಳು ದ್ವಿತೀಯ ಪಂದ್ಯದಲ್ಲೂ 8 ವಿಕೆಟ್​ಗಳ ಅಮೋಘ ಗೆಲುವು ಸಾಧಿಸಿ ಮೂರು ಪಂದ್ಯಗಳ ಏಕದಿನದಲ್ಲಿ 2-0 ಮುನ್ನಡೆ ಪಡೆದುಕೊಂಡು ಸರಣಿ ಕೈವಶ ಮಾಡಿಕೊಂಡಿದೆ. ಇದೀಗ ಉಭಯ ತಂಡಗಳು ಮೂರನೇ ಏಕದಿನಕ್ಕೆ ಸಜ್ಜಾಗಿದೆ. ಇಂದು ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಅಂತಿಮ ತೃತೀಯ ಏಕದಿನ ಪಂದ್ಯ ಆಯೋಜಿಸಲಾಗಿದೆ.

India Vs New Zealand 3rd ODI - Indore Live Preview & Commentary | IND Vs NZ  2023 Series Live - YouTube

ಇಂದೋರ್​ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೂರನೇ ಏಕದಿನ ಪಂದ್ಯ ನಡೆಯಲಿದೆ. ಮಧ್ಯಾಹ್ನ 1:30ಕ್ಕೆ ಮ್ಯಾಚ್ ಆರಂಭವಾಗಲಿದ್ದು, 1 ಗಂಟೆಗೆ ಟಾಸ್ ಪ್ರಕ್ರಿಯೆ ಏರ್ಪಡಿಸಲಾಗಿದೆ. ರೋಹಿತ್ ಪಡೆ ಈ ಕೊನೆಯ ಪಂದ್ಯವನ್ನೂ ಗೆದ್ದು ಸರಣಿ ಕ್ಲೀನ್​ಸ್ವೀಪ್ ಮಾಡುವ ಗುರಿ ಹೊಂದಿದ್ದರೆ, ಇತ್ತ ಕಿವೀಸ್ ಪಡೆ ಕನಿಷ್ಠ ಒಂದು ಪಂದ್ಯವನ್ನಾದರೂ ಜಯಿಸಿ ಮಾನ ಉಳಿಸಿಕೊಳ್ಳಲು ಹೋರಾಟ ನಡೆಸಬೇಕಿದೆ.

IND vs NZ 3rd ODI: इंदौर में कल आखिरी मुकाबला, क्लीन स्वीप के इरादे से  उतरेगी टीम इंडिया - IND vs NZ 3rd ODI preview Team India will play the last  match

ಈಗಾಗಲೇ ಸರಣಿ ವಶಪಡಿಸಿಕೊಂಡಿರುವ ಭಾರತ ತಂಡದ ಪ್ಲೇಯಿಂಗ್ ಇಲೆವೆನ್​ನಲ್ಲಿ ಕೆಲವು ಪ್ರಮುಖ ಬದಲಾವಣೆ ನಿರೀಕ್ಷಿಸಲಾಗಿದೆ. ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ನಾಯಕ ರೋಹಿತ್ ಶರ್ಮಾ ಕೂಡ ರೆಸ್ಟ್ ಮೊರೆ ಹೋದರೆ ಅಚ್ಚರಿ ಪಡಬೇಕಿಲ್ಲ. ಹೀಗಾಗಿ ಟೀಮ್ ಇಂಡಿಯಾ ಆಡುವ ಬಳಗದಲ್ಲಿ ಹೊಸ ಮುಖಗಳು ಕಾಣುವುದು ಖಚಿತ.

ವಿಶೇಷ ಎಂದರೆ ಇಂದೋರ್‌ನಲ್ಲಿ ಟೀಮ್ ಇಂಡಿಯಾ ಒಂದು ವಿಶೇಷ ದಾಖಲೆ ಮಾಡುವ ಅವಕಾಶ ಹೊಂದಿದೆ. ಅದೆನೆಂದರೆ, ಇದುವರೆಗೆ ಹೋಳ್ಕರ್ ಸ್ಟೇಡಿಯಂನಲ್ಲಿ 5 ಏಕದಿನ ಪಂದ್ಯಗಳು ನಡೆದಿದ್ದು, ಈ ಐದು ಪಂದ್ಯಗಳಲ್ಲಿಯೂ ಟೀಂ ಇಂಡಿಯಾ ಜಯ ಸಾಧಿಸಿದೆ. ಈಗ ನಡೆಯುವ 6ನೇ ಏಕದಿನ ಪಂದ್ಯದಲ್ಲೂ ಗೆಲುವ ಸಾಧಿಸಿದರೆ, ಈ ಮೈದಾನದಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನೂ ಗೆದ್ದ ದಾಖಲೆಯನ್ನು ಟೀಮ್ ಇಂಡಿಯಾ ಬರೆಯಲಿದೆ.

ಭಾರತ ಸಂಭಾವ್ಯ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರಜತ್ ಪಟಿದಾರ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಥಾಕೂರ್, ಕುಲ್ದೀಪ್ ಯಾದವ್, ಉಮ್ರಾನ್ ಮಲಿಕ್, ಶಾರ್ದೂಲ್ ಠಾಕೂರ್.

ನ್ಯೂಜಿಲೆಂಡ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್: ಫಿನ್ ಅಲೆನ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಹೆನ್ರಿ ಶಿಪ್ಲಿ, ಮಿಚೆಲ್ ಸ್ಯಾಂಟ್ನರ್, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ