ಸೋಮವಾರ, ಮೇ 20, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Ind vs Aus ಟೆಸ್ಟ್ ಸರಣಿ ಜಯಿಸಿದ ಬೆನ್ನಲ್ಲೇ ಟೀಂ ಇಂಡಿಯಾಗಿನ್ನು ಏಕದಿನ ಸವಾಲು..!

Twitter
Facebook
LinkedIn
WhatsApp
fcjj4mvagamquvf 1 1662983030

ಮುಂಬೈ​(ಮಾ.15): ಆಸ್ಪ್ರೇ​ಲಿಯಾ ವಿರು​ದ್ಧದ ಮಹ​ತ್ವದ ಟೆಸ್ಟ್‌ ಸರ​ಣಿ​ಯನ್ನು 2-1 ಅಂತ​ರ​ದಲ್ಲಿ ಗೆದ್ದು​ಕೊಂಡಿ​ರುವ ಟೀಂ ಇಂಡಿಯಾ, ಇನ್ನು ಪ್ರವಾಸಿ ತಂಡದ ವಿರುದ್ಧ ಏಕ​ದಿನ ಸವಾ​ಲಿಗೆ ರೆಡಿ​ಯಾ​ಗ​ಲಿದೆ. ಭಾರ​ತ-ಆಸ್ಪ್ರೇ​ಲಿಯಾ ನಡುವೆ ಮಾ.17ರಿಂದ 3 ಪಂದ್ಯ​ಗಳ ಏಕ​ದಿನ ಸರಣಿ ಆರಂಭ​ವಾ​ಗ​ಲಿದ್ದು, ಕೆಲ ಆಟ​ಗಾ​ರರು ಈಗಾ​ಗಲೇ ಅಹ​ಮ​ದಾ​ಬಾ​ದ್‌​ನಿಂದ ಮುಂಬೈಗೆ ಆಗ​ಮಿ​ಸಿ​ದ್ದಾ​ರೆ.

ಮಂಗ​ಳ​ವಾರ ಮುಂಜಾನೆ ವಿರಾಟ್‌ ಕೊಹ್ಲಿ, ಶುಭ್‌​ಮ​ನ್‌ ಗಿಲ್‌, ರವೀಂದ್ರ ಜಡೇಜಾ ಸೇರಿ​ದಂತೆ ಪ್ರಮುಖರು ಮುಂಬೈಗೆ ಬಂದಿ​ಳಿ​ದಿದ್ದು, ಬುಧ​ವಾ​ರ​ದಿಂದ ಅಭ್ಯಾಸ ಆರಂಭಿ​ಸ​ಲಿ​ದ್ದಾರೆ. ಇತರೆ ಆಟ​ಗಾ​ರರು ಬುಧ​ವಾರ ತಂಡ ಕೂಡಿ​ಕೊ​ಳ್ಳುವ ನಿರೀ​ಕ್ಷೆ​ಯಿದೆ. ರೋಹಿತ್‌ ಶರ್ಮಾ ವೈಯ​ಕ್ತಿಕ ಕಾರ​ಣಕ್ಕೆ ಮೊದಲ ಪಂದ್ಯ​ಕ್ಕೆ ಗೈರಾ​ಗ​ಲಿದ್ದು, ಅವರ ಅನು​ಪ​ಸ್ಥಿ​ತಿ​ಯಲ್ಲಿ ಹಾರ್ದಿಕ್‌ ಪಾಂಡ್ಯ ತಂಡ ಮುನ್ನ​ಡೆ​ಸ​ಲಿ​ದ್ದಾರೆ. ಉಳಿ​ದೆ​ರಡು ಪಂದ್ಯ​ಗ​ಳಿಗೆ ರೋಹಿತ್‌ ತಂಡಕ್ಕೆ ಮರ​ಳ​ಲಿ​ದ್ದಾರೆ. ರವೀಂದ್ರ ಜಡೇಜಾ ದೀರ್ಘ ಕಾಲದ ಬಳಿಕ ಮತ್ತೆ ಏಕ​ದಿನ ಆಡ​ಲಿದ್ದು, ಜಯ್‌​ದೇವ್‌ ಉನಾ​ದ್ಕತ್‌ ಕೂಡಾ ತಂಡ​ದ​ಲ್ಲಿ​ದ್ದಾರೆ. 

No rest for King Kohli? Captain may opt to travel to West Indies, Bumrah  likely to get breather

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮಾರ್ಚ್ 17ರಿಂದ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಮೊದಲ ಏಕದಿನ ಪಂದ್ಯಕ್ಕೆ ಮುಂಬೈನ ವಾಂಖೇಡೆ ಮೈದಾನ ಆತಿಥ್ಯ ವಹಿಸಿದರೆ, ಮಾರ್ಚ್‌ 19ರಂದು ನಡೆಯಲಿರುವ ಎರಡನೇ ಪಂದ್ಯಕ್ಕೆ ವಿಶಾಖಪಟ್ಟಣಂ ಸಾಕ್ಷಿಯಾಗಲಿದೆ. ಇನ್ನು ಮೂರನೇ ಹಾಗೂ ಕೊನೆಯ ಪಂದ್ಯವು ಮಾರ್ಚ್‌ 22ರಂದು ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂ ಆತಿಥ್ಯ ವಹಿಸಲಿದೆ. 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಆಡಲಿರುವ ಕೊನೆಯ ಅಂತಾರಾಷ್ಟ್ರೀಯ ಈ ಸರಣಿ ಇದಾಗಲಿದೆ. 

ಶ್ರೇಯಸ್‌ ಅಯ್ಯರ್ ಬದಲು ಸಂಜು ಸ್ಯಾಮ್ಸನ್?

ಬೆನ್ನು ನೋವಿನ ಸಮಸ್ಯೆಗೆ ತುತ್ತಾಗಿರುವ ಶ್ರೇಯಸ್‌ ಅಯ್ಯರ್‌ ಏಕ​ದಿನ ಸರ​ಣಿಗೆ ಗೈರಾ​ಗ​ಲಿದ್ದು, ಅವರ ಬದಲು ಸಂಜು ಸ್ಯಾಮ್ಸ​ನ್‌​ರನ್ನು ತಂಡಕ್ಕೆ ಸೇರ್ಪಡೆಗೊಳಿ​ಸುವ ಸಾಧ್ಯತೆ ಇದೆ ಎಂದು ಹೇಳ​ಲಾ​ಗು​ತ್ತಿದೆ. ಕೆಲ ವರ​ದಿ​ಗಳ ಪ್ರಕಾರ ಬಿಸಿ​ಸಿಐ ಶ್ರೇಯಸ್‌ ಅಯ್ಯರ್ ಬದಲಿ ಆಟ​ಗಾ​ರ​ನಾಗಿ ಯಾರನ್ನೂ ಸೇರಿ​ಸಿ​ಕೊ​ಳ್ಳುವ ಸಾಧ್ಯ​ತೆ​ಯಿಲ್ಲ ಎಂದು ಗೊತ್ತಾ​ಗಿ​ದೆ.

India squad for T20 World Cup 2022: Ashish Nehra's squad | Team India: ಟಿ20  ವಿಶ್ವಕಪ್​ಗೆ 15 ಸದಸ್ಯರ ಬಲಿಷ್ಠ ತಂಡವನ್ನು ಹೆಸರಿಸಿದ ನೆಹ್ರಾ| TV9 Kannada

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಕ್ಕೆ ಭಾರತ ತಂಡ:

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಇಶಾನ್ ಕಿಶನ್ (WK), ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್ , ಯಜುವೇಂದ್ರ ಚಹಾಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಶಾರ್ದೂಲ್ ಠಾಕೂರ್, ಅಕ್ಸರ್ ಪಟೇಲ್, ಜೈದೇವ್‌ ಉನಾದ್ಕತ್‌.

ಪ್ಯಾಟ್‌ ಕಮಿನ್ಸ್‌ ಅಲ​ಭ್ಯ: ಸ್ಟೀವ್ ಸ್ಮಿತ್‌ಗೆ ನಾಯ​ಕ​ತ್ವ

ಪ್ಯಾಟ್‌ ಕಮಿನ್ಸ್‌ ಏಕ​ದಿನ ಸರ​ಣಿ​ಗೂ ಗೈರಾ​ಗ​ಲಿದ್ದು, ಆಸ್ಪ್ರೇ​ಲಿಯಾ ತಂಡ​ವನ್ನು ಸ್ಟೀವ್‌ ಸ್ಮಿತ್‌ ಮುನ್ನ​ಡೆ​ಸ​ಲಿ​ದ್ದಾರೆ. 2ನೇ ಟೆಸ್ಟ್‌ ಪಂದ್ಯದ ಬಳಿಕ ತಮ್ಮ ತಾಯಿಯ ಅನಾ​ರೋ​ಗ್ಯ ಹಿನ್ನೆ​ಲೆ​ಯಲ್ಲಿ ಕಮಿನ್ಸ್‌ ತವ​ರಿಗೆ ಹಿಂದಿ​ರು​ಗಿ​ದ್ದರು. 4ನೇ ಟೆಸ್ಟ್‌ ವೇಳೆ ಅವರ ತಾಯಿ ನಿಧ​ನ​ರಾ​ಗಿದ್ದು, ಹೀಗಾಗಿ ಏಕ​ದಿನ ಸರ​ಣಿ​ಗಾಗಿ ಅವರು ಭಾರ​ತಕ್ಕೆ ಮರ​ಳು​ತ್ತಿಲ್ಲ. ಅವರ ಅನು​ಪ​ಸ್ಥಿ​ತಿ​ಯಲ್ಲಿ ಸ್ಮಿತ್‌ ನಾಯ​ಕ​ನಾಗಿ ನೇಮ​ಕ​ಗೊಂಡಿ​ದ್ದಾರೆ. ಆದರೆ ಕಮಿನ್ಸ್‌ ಬದಲಿಗರಾಗಿ ಯಾರನ್ನೂ ತಂಡಕ್ಕೆ ಸೇರ್ಪ​ಡೆ​ಗೊ​ಳಿ​ಸಿಲ್ಲ. ಇದೇ ವೇಳೆ, ಟೆಸ್ಟ್‌ ಸರಣಿ ವೇಳೆ ಗಾಯ​ಗೊಂಡು ತವ​ರಿಗೆ ಮರ​ಳಿದ್ದ ಡೇವಿಡ್‌ ವಾರ್ನರ್‌ ತಂಡಕ್ಕೆ ಮರ​ಳ​ಲಿ​ದ್ದಾರೆ.

ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡ ಹೀಗಿದೆ ನೋಡಿ:

ಡೇವಿಡ್ ವಾರ್ನರ್‌, ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್ (ನಾಯಕ), ಶಾನ್ ಅಬ್ಬೋಟ್, ಆಸ್ಟನ್ ಏಗರ್, ಅಲೆಕ್ಸ್ ಕ್ಯಾರಿ, ಕ್ಯಾಮರೋನ್ ಗ್ರೀನ್, ಜೋಶ್ ಇಂಗ್ಲಿಶ್, ಮಾರ್ನಸ್ ಲಬುಶೇನ್, ಮಿಚೆಲ್ ಮಾರ್ಶ್‌, ಗ್ಲೆನ್‌ ಮ್ಯಾಕ್ಸ್‌ವೆಲ್, ಜೇ ರಿಚರ್ಡ್‌ಸನ್, ಮಿಚೆಲ್ ಸ್ಟಾರ್ಕ್‌, ಮಾರ್ಕಸ್‌ ಸ್ಟೋನಿಸ್, ಆಡಂ ಜಂಪಾ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ