ಸೋಮವಾರ, ಅಕ್ಟೋಬರ್ 2, 2023
Galaxy S23 FE: ಸ್ಯಾಮ್ಸಂಗ್ ಗ್ಯಾಲಕ್ಸಿ S23 ಎಫ್​ಇ ಸ್ಮಾರ್ಟ್​ಫೋನ್ ಅ.4 ರಂದು ಬಿಡುಗಡೆ!-ಜಿಂಬಾಬ್ವೆಯಲ್ಲಿ ವಿಮಾನ ಪತನ ; ಭಾರತದ ಕೋಟ್ಯದೀಶ್ವರ ಹಾಗೂ ಗಣಿ ಉದ್ಯಮಿ ಮತ್ತು ಅವರ ಪುತ್ರ ದುರ್ಮರಣ!-ಸಂಕ್ರಾಂತಿ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ; ಸಿಪಿ ಯೋಗೇಶ್ವರ್ ಬಾಂಬ್-ದಿಗ್ಗಜ ಮಾಜಿ ಓಟಗಾರ್ತಿ ಪಿ.ಟಿ ಉಷಾರವರ ರಾಷ್ಟ್ರೀಯ ದಾಖಲೆ ಸರಿಗಟ್ಟಿ ಪದಕ ಸುತ್ತಿಗೇರಿದ ವಿತ್ಯಾ!-ನೀವು ಹೆದರಿಸದರೆ ಮಾತ್ರಕ್ಕೆ ನಾನು ಹೆದರಲ್ಲ ದೇವೇಗೌಡರಿಗೆ ಡಿಕೆಶಿ ಟಾಂಗ್!-ಜಿಪಿಎಸ್ ಮ್ಯಾಪ್ ನೋಡಿ ಕಾರನ್ನು ಚಲಿಸುವುತ್ತಿರುವಾಗ ನದಿಗೆ ಬಿದ್ದು ಇಬ್ಬರು ವೈದ್ಯರು ಸಾವು ; ಮೂವರು ಪಾರು!-ಹೃದಯ ವಿದ್ರಾವಕ ಘಟನೆ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸೇರಿ 6 ಮಂದಿ ಹತ್ಯೆ-ಬೆಂಗಳೂರಿನ ಕಂಬಳಕ್ಕೆ ಹೇಗಿದೆ ತಯಾರಿ; ದಕ್ಷಿಣ ಕನ್ನಡ ಭಾಗದ 150 ಫುಡ್ ಸ್ಟಾಲ್ ಏರ್ಪಾಡು..!-ಪಿಯುಸಿಯಲ್ಲಿ ಅಂಕ ಕಡಿಮೆ ಬಂತೆಂದು ಮನನೊಂದು ಅಪಾರ್ಟ್‌ಮೆಂಟ್‌ನಿಂದ ಜಿಗಿದ ಬಾಲಕಿ ; ರಕ್ಷಣೆಗೆ ಧಾವಿಸಿದ ಯುವಕ - ಇಲ್ಲಿದೆ ವಿಡಿಯೋ-ಬರ್ತ್‌ಡೇ ಪಾರ್ಟಿಯಲ್ಲಿ ಡೆಕೋರೇಷನ್‌ಗೆ ಹಾಕಿದ್ದ ಹೀಲಿಯಂ ಬಲೂನ್‌ ಬ್ಲಾಸ್ಟ್‌ ; ಐವರು ಗಂಭೀರ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮಕ್ಕಳಲ್ಲಿ ಹೆಚ್ಚಾದ ಡೆಂಗ್ಯೂ ಜ್ವರ ; ಪೋಷಕರಿಗೆ ಆರೋಗ್ಯ ಇಲಾಖೆಯಿಂದ ಗೈಡ್ ಲೈನ್ಸ್

Twitter
Facebook
LinkedIn
WhatsApp
ಮಕ್ಕಳಲ್ಲಿ ಹೆಚ್ಚಾದ ಡೆಂಗ್ಯೂ ಜ್ವರ ; ಪೋಷಕರಿಗೆ ಆರೋಗ್ಯ ಇಲಾಖೆಯಿಂದ ಗೈಡ್ ಲೈನ್ಸ್

ಬೆಂಗಳೂರು : ದೇಶದಲ್ಲಿ ಕೊರೊನಾ(Coronavirus) ವೈರಸ್​ನಂತಹ ಪರಿಸ್ಥಿತಿ ಮತ್ತೆ ನಿರ್ಮಾಣವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಏಕೆಂದರೆ ವೈರಸ್​ಗಳ ಭೀತಿ ಶುರುವಾಗಿದೆ. ಕೇರಳದಲ್ಲಿ ನಿಫಾ ವೈರಸ್(Nipah Virus) ಕಾಟ ಹೆಚ್ಚಾಗಿದ್ದು, ಅಸ್ಸಾಂ, ಒಡಿಶಾ, ರಾಜಸ್ಥಾನ, ತಮಿಳುನಾಡಿನಲ್ಲಿ ಸ್ಕ್ರಬ್ ಟೈಫಸ್(Scrub Typhus) ಹಾವಳಿ ಜೋರಾಗಿದೆ. ಬೆಂಗಳೂರಿನಲ್ಲಿ ಡೆಂಗ್ಯೂ ಜ್ವರ(Dengue Fever) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರದಲ್ಲಿ ಕಳೆದ 17 ದಿನಗಳಲ್ಲಿ ದಾಖಲೆ ಮಟ್ಟದಲ್ಲಿ ಅಂದರೆ 3,018 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಕಳೆದ ಒಂದು ತಿಂಗಳಿನಿಂದ ಬೆಂಗಳೂರು ನಗರದಲ್ಲಿ ಗರಿಷ್ಠ ಡೆಂಗ್ಯೂ ದಾಖಲಾಗಿದ್ದು ಕಳೆದ ಮೂರು ವರ್ಷಗಳಲ್ಲಿಯೇ ದಾಖಲೆ ಪ್ರಮಾಣದಲ್ಲಿ ಕೇಸ್​ಗಳು ಪತ್ತೆಯಾಗಿವೆ.

 

ಬೆಂಗಳೂರು ನಗರದಲ್ಲಿ ಈ ವರ್ಷ ಜನವರಿಯಿಂದ ನಿನ್ನೆಯವರೆಗೂ(ಸೆ.17) 5,220 ಡೆಂಗ್ಯೂ ಕೇಸ್​ಗಳು ದಾಖಲಾಗಿವೆ. ರಾಜ್ಯದಲ್ಲಿ 3,965 ಡೆಂಗ್ಯೂ ಕೇಸ್​ಗಳು ದಾಖಲಾಗಿವೆ. ಒಟ್ಟು 9,185 ಡೆಂಗ್ಯೂ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಕಳೆದ ಮೂರು ವರ್ಷಗಳಲ್ಲಿಯೇ ಗರಿಷ್ಠ ಡೆಂಗ್ಯೂ ಕೇಸ್ ವರದಿಯಾಗಿದೆ. ಹೀಗಾಗಿ ಆರೋಗ್ಯ ಇಲಾಖೆಯು ಶಾಲಾ ಮಕ್ಕಳಿಗೆ ಹಾಗೂ ಪೋಷಕರಿಗೆ ಎಚ್ಚರಿಕೆಯಿಂದಿರಲು ಸೂಚಿಸಿದೆ.

ಮಕ್ಕಳಲ್ಲಿ ಹೆಚ್ಚಾದ ಆರೋಗ್ಯ ಸಮಸ್ಯೆ

ಕೇರಳದಲ್ಲಿ ನಿಫಾ ವೈರಸ್ ಕಾಟ ಶುರುವಾಗಿದೆ. ಅಸ್ಸಾಂ, ಒಡಿಶಾ, ರಾಜಸ್ಥಾನ, ತಮಿಳುನಾಡಿನ ಕೆಲ ಭಾಗದಲ್ಲಿ ಸ್ಕ್ರಬ್ ಟೈಫಸ್ ಹಾವಳಿ ಜೋರಾಗಿದೆ. ಇನ್ನು ಬೆಂಗಳೂರಿನ ಮಕ್ಕಳಲ್ಲಿ ಡೆಂಗ್ಯೂ ಹಾವಳಿ ಶುರುವಾಗಿದೆ. ಈ ಹಿನ್ನಲೆ ಶಾಲೆಗಳು ಹಾಗೂ ಮಕ್ಕಳಿಗೆ ಎಚ್ಚರಿಕೆಯಿಂದಿರಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಮಕ್ಕಳ ಆರೋಗ್ಯದ ಬಗ್ಗೆ ಕೇರ್ ತಗೆದುಕೊಳ್ಳುವಂತೆ ಪೋಷಕರಿಗೆ ಸೂಚನೆ ನೀಡಲಾಗಿದೆ. ಕಳೆದ ಕೆಲವು ದಿನಗಳಿಂದ ರಾಜಧಾನಿ ಬೆಂಗಳೂರಿನ ಮಕ್ಕಳಲ್ಲಿ ಕೆಮ್ಮು, ಹೊಟ್ಟೆ ನೋವು, ಚಳಿ ಜ್ವರ, ವೈರಲ್ ಫೀವರ್, ಮೈ- ಕೈ ನೋವು, ತಲೆನೋವು, ನ್ಯೂಮೋನಿಯಾ ಹೆಚ್ಚಾಗಿ ಕಂಡು ಬರುತ್ತಿದೆ. ಮಕ್ಕಳಲ್ಲಿ ಡೆಂಗ್ಯೂ ಜೊತೆಗೆ ಬೇರೆ ಬೇರೆ ವೈರಸ್​ಗಳ ಕಾಟ ಶುರುವಾಗಿದೆ.

ಮಕ್ಕಳ ಬಗ್ಗೆ ಎಚ್ಚರ ವಹಿಸಲು ಆರೋಗ್ಯ ಇಲಾಖೆ ಸೂಚನೆ

  • ಇನ್ನು ಮಕ್ಕಳಲ್ಲಿ ತೀವ್ರ ಜ್ವರ, ಕೆಮ್ಮು, ನೆಗಡಿ ಇದ್ರೆ ಶಾಲೆಗೆ ಕಳಿಸದಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
  • ಮಕ್ಕಳಿಗೆ ಡೆಂಗ್ಯೂ ನಿಂದ ದೂರ ಇಡಲು ಸೊಳ್ಳೆ ಕಾಟ ತಪ್ಪಿಸುವಂತೆ ಸಲಹೆ ನೀಡಿದೆ.
  • ಶಾಲೆಗೆ ಬರುವ ಮಕ್ಕಳಿಗೆ ಕೆಲ ದಿನಗಳ ವರೆಗೂ ಕೈ ಕಾಲು ಮುಚ್ಚುವ ಬಟ್ಟೆ ಧರಿಸುವಂತೆ ಸೂಚಿಸಲಾಗಿದೆ.
  • ಕೈ ಹಾಗೂ ಕಾಲು ಭಾಗಕ್ಕೆ ಯಾವುದಾದ್ರೂ ಲೋಶನ್ ಕ್ರೀಮ್ ಗಳ ಬಳಕೆ ಮಾಡುವಂತೆ ಸೂಚಿಸಿದೆ
  • ಮಕ್ಕಳಿಗೆ ಸಣ್ಣ ಜ್ವರ ಕಾಣಿಸಿಕೊಂಡ್ರೂ ನಿರ್ಲಕ್ಷ್ಯವಹಿಸದಂತೆ ಆರೋಗ್ಯ ಇಲಾಖೆ ಪೋಷಕರಿಗೆ ಎಚ್ಚರಿಕೆಯಿಂದಿರಲು ತಿಳಿಸಿದೆ.
  • ಡೆಂಗ್ಯೂ ಶಾಕ್ ಗೆ ಮಕ್ಕಳು ಹೋಗದಂತೆ ನೋಡಿಕೊಳ್ಳುವಂತೆ ಎಚ್ಚರಿಕೆ ವಹಿಸಲು ಸೂಚಿಸಿದೆ.
  • ಇತರೆ ವೈರಸ್ ಗಳ ಬಗ್ಗೆ ಕೂಡಾ ಜಾಗೃತಿವಹಿಸುವಂತೆ ಸೂಚನೆ. ಹೀಗೆ ಶಾಲಾ ಮಕ್ಕಳು ಹಾಗೂ ಪೋಷಕರಿಗೆ ಮಕ್ಕಳ ಆರೋಗ್ಯದ ಬಗ್ಗೆ ಸೂಕ್ತ ಎಚ್ಚರಿಕೆಗೆ ಆರೋಗ್ಯ ಇಲಾಖೆ ನಿರ್ದೇಶನ ನೀಡಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ