ಬಂಟ್ವಾಳದ ಸರಕಾರಿ ಆಸ್ಪತ್ರೆ ನೀರಪಾದೆಯಲ್ಲಿ ವಿಶಿಷ್ಟವಾದ ಜಪಾನ್ ಮಾದರಿಯ ಮಿವವಾಕಿ ಕಾಡು ಉದ್ಘಾಟನೆ
ಸರಕಾರಿ ಆಸ್ಪತ್ರೆ ನೀರಪಾದೆ ಬಾಳ್ತಿಲ ಗ್ರಾಮ ಬಂಟ್ವಾಳ ತಾಲೂಕು. ಔಷದಿ ಸಸ್ಯಗಳ ಆಯುರ್ವೇದ ವನ ಹಾಗೂ ಪಶ್ಚಿಮ ಘಟ್ಟದ ಸಸ್ಯ ಸಂಕುಲಗಳ ಜಪಾನ್ ಮಾದರಿಯ ಮಿಯಾವಕಿ ಕಾಡು ಉದ್ಘಾಟನೆ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದಲ್ಲಿ ಆಸ್ಪತ್ರೆ ಯ ಡಾಕ್ಟರ್ ರೋಷನಿ ಪೂಂಜಾ ಡಾ ಶಶಿಕಲಾ ಹಾಗೂ ಸಿಬ್ಬಂದಿ ವರ್ಗ, ನೀರಪಾದೆ ಶಾಲಾ ಅಧ್ಯಾಪಕರಾದ ಸಂತೋಷ್ ತುಂಬೆ, ಯುವ ರೈತ ಘಟಕದ ಜಿಲ್ಲಾ ಗೌವ್ರವಾಧ್ಯಕ್ಷ ಸುರೇಂದ್ರ ಕೊರ್ಯ, ferd ಟ್ರಸ್ಟ್ ಸದಸ್ಯರು ಭಾಗವಹಿಸಿದ್ದರು. ಕಾಪು ಆಸ್ಪತ್ರೆಗೆ ವರ್ಗಾವಣೆಗೊಂಡ ಪರಿಸರ ಪ್ರೇಮಿ ಈ ವನ ಹಾಗೂ ಮಿಯಾವಕಿ ಕಾಡು ನಿರ್ಮಾಣದ ರೂವಾರಿ ಡಾ ರೋಷನಿ ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ ಕಾರ್ಯಕ್ರಮ ಟ್ರಸ್ಟ್ ವತಿಯಿಂದ ನಡೆಸಲಾಯಿತು.
ಈ ವನ ಹಾಗೂ ಮಿಯಾವಕಿ ಕಾಡು ನಿರ್ಮಾಣದ ಸುರಕ್ಷಾ ಬೇಲಿಗೆ ಪರದೆಯ ಮೊತ್ತವನ್ನು KT (lakshmi ಗಣೇಶ್ ) ಹೋಟೆಲ್ ಮಾಲಕರಾದ ರಾಜೇಂದ್ರ ಹೊಳ್ಳರವರು ನೀಡಿದ್ದನ್ನು ಸ್ಮರಿಸಿಕೊಳ್ಳಲಾಯಿತು. ಔಷದಿ ವನದಲ್ಲಿ ಸುಮಾರು 100 ವಿಧದ ಗಿಡಗಳಿದ್ದರೆ. ಮಿಯಾವಕಿ ಕಾಡಿನಲ್ಲಿ ಸುಮಾರು 160 ವಿಧದ 250 ಗಿಡಗಳು ನೆಡಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯ: ಕುಮಾರ ಪರ್ವತ ಚಾರಣಕ್ಕೆ ಆನ್ಲೈನ್ ಬುಕ್ಕಿಂಗ್
ಕುಕ್ಕೆ ಸುಬ್ರಹ್ಮಣ್ಯ:ಕುಕ್ಕೆ ಸುಬ್ರಹ್ಮಣ್ಯದ ಕುಮಾರ ಪರ್ವತ ಚಾರಣಕ್ಕೆ ಫೆಬ್ರವರಿ 1ರಿಂದ ನಿಷೇಧ ಹೇರಲಾಗಿದೆ.
ಮುಂದಿನ ಅಕ್ಟೋಬರ್ ಅಥವಾ ಮುಂದಿನ ಆದೇಶದ ಬಳಿಕ ಆರಂಭವಾಗುವ ಚಾರಣ ಪ್ರವೇಶಕ್ಕೆ ಸಂಪೂರ್ಣ ಆನ್ಲೈನ್ ಬುಕ್ಕಿಂಗ್ ಮೂಲಕವೇ ಪ್ರವೇಶಕ್ಕೆ ವ್ಯವಸ್ಥೆ ಮಾಡುವ ಬಗ್ಗೆ ಅರಣ್ಯ ಇಲಾಖೆ ಯೋಜನೆ ರೂಪಿಸಲಿದೆ.
ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಕುಮಾರ ಪರ್ವತ ಚಾರಣಕ್ಕೆ ಒಂದೇ ದಿನ ಸಾವಿರಕ್ಕಿಂತ ಅಧಿಕ ಸಂಖ್ಯೆಯ ಚಾರಣಿಗರು ಆಗಮಿಸಿದ್ದರು.
ಈ ಬಗ್ಗೆ ಪರಿಸರ ಪ್ರೇಮಿಗಳು ತೀವ್ರ ಅಸಮಾಧಾನ ಹಾಗೂ ಆತಂಕ ವ್ಯಕ್ತಪಡಿಸಿದ್ದರು. ಮಾತ್ರವಲ್ಲ ಸಾವಿರಾರು ಸಂಖ್ಯೆಯ ಚಾರಣಿಗರ ಆಗಮನದಿಂದ ನಿಯಂತ್ರಣ ಹಾಗೂ ಅರಣ್ಯ ಇಲಾಖೆ ಸಿಬಂದಿಗೆ ತಪಾಸಣೆ ಮಾಡಿ ಬಿಡುವುದು ಸವಾಲಾಗುತ್ತದೆ.
ಈ ನಿಟ್ಟಿನಲ್ಲಿ ಕುಮಾರ ಪರ್ವತ ಚಾರಣವನ್ನು ಮುಂದಿನ ಅವಧಿಯಿಂದ ಆನ್ಲೈನ್ ಬುಕ್ಕಿಂಗ್ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.