ವಿಮಾನದ ಬಾತ್ರೂಮ್ ನಲ್ಲಿ ಕುಸಿದು ಬಿದ್ದು ಪೈಲೆಟ್ ಸಾವು ವಿಮಾನ ತುರ್ತು ಲ್ಯಾಂಡಿಂಗ್!

ಪನಾಮ: ವಿಮಾನದ ಬಾತ್ರೂಮ್ನಲ್ಲಿ ಪೈಲಟ್ ಕುಸಿದು ಬಿದ್ದು ಪ್ರಾಣ ಬಿಟ್ಟ ಪರಿಣಾಮ ವಿಮಾ ತುರ್ತು ಲ್ಯಾಂಡಿಂಗ್ ಆದ ಘಟನೆ ಅಮೆರಿಕಾದ ಪನಾಮದಲ್ಲಿ ನಡೆದಿದೆ. ಖಾಸಗಿ ಪ್ಲೈಟೊಂದರಲ್ಲಿ ಈ ಘಟನೆ ನಡೆದಿದೆ. ಮಿಯಾಮಿಯಿಂದ ಚಿಲಿಗೆ ಹೊರಟಿದ್ದ ಈ ಖಾಸಗಿ ಫ್ಲೈಟ್ನಲ್ಲಿ 271 ಜನರಿದ್ದರು. ಮೃತ ಪೈಲಟ್ನ್ನು ಇವಾನ್ ಅಂದೂರ್ ಎಂದು ಗುರುತಿಸಲಾಗಿದೆ ಎಂದು ಇಂಡಿಪೆಂಡೆಂಟ್ ಪತ್ರಿಕೆ ವರದಿ ಮಾಡಿದೆ.
ಈ ವಿಮಾನದವೂ ಲಾಟಾಮ್ ಏರ್ಲೈನ್ಸ್ಗೆ (LATAM Airlines flight)ಸೇರಿದ್ದಾಗಿದ್ದು, ವಿಮಾನವೂ ಮಿಯಾಮಿ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಮೂರು ಗಂಟೆಯ ನಂತರ ಅವರಿಗೆ ಪೈಲಟ್ ಅಸ್ವಸ್ಥಗೊಂಡಿದ್ದು, ವಿಮಾನದ ಬಾತ್ರೂಮ್ನಲ್ಲೇ ಕುಸಿದು ಬಿದ್ದಿದ್ದಾರೆ. ಅವರಿಗೆ ವಿಮಾನದ ಸಿಬ್ಬಂದಿ ತುರ್ತು ಚಿಕಿತ್ಸೆ ನೀಡಿದರಾದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ, ಹೀಗಾಗಿ ಸಹ ಪೈಲಟ್ ವಿಮಾನವನ್ನು ತುರ್ತು ಲ್ಯಾಂಡಿಗ್ ಮಾಡಿದ್ದಾರೆ.
ವಿಮಾನವು ಪನಾಮ ಸಿಟಿಯ ಟೊಕುಮೆನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದ ಕೂಡಲೇ ವೈದ್ಯಕೀಯ ತಜ್ಷರು ಪೈಲಟ್ನ್ನು ಪರಿಶೀಲಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರು ಸಾವನ್ನಾಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಮೃತ ಪೈಲಟ್ ಇವಾನ್ ಅಂದೌರ್ (Ivan Andaur) ಅವರು 25 ವರ್ಷಗಳ ಅನುಭವ ಹೊಂದಿದ್ದ ಬಹಳ ಅನುಭವಿ ಪೈಲಟ್ ಆಗಿದ್ದರು.
ಈ ಬಗ್ಗೆ ಲ್ಯಾಟಮ್ ಏರ್ಲೈನ್ಸ್ ಪ್ರಕಟಣೆ ಹೊರಡಿಸಿದ್ದೆ. ‘ನಿನ್ನೆ ಮಿಯಾಮಿಯಿಂದ ಸ್ಯಾಂಟಿಯಾಗೊಗೆ ಹೊರಟಿದ್ದ ಫ್ಲೈಟ್ LA505 ನ ಕಮಾಂಡ್ ಸಿಬ್ಬಂದಿಯ ಮೂವರು ಸದಸ್ಯರಲ್ಲಿ ಒಬ್ಬರಿಗೆ ವೈದ್ಯಕೀಯ ತುರ್ತುಸ್ಥಿತಿ ಉಂಟಾದ ಕಾರಣ ಪನಾಮದ ಟೊಕುಮೆನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ( Tocumen International Airport) ವಿಮಾನ ತುರ್ತಾಗಿ ಇಳಿಯುವಂತಾಯ್ತು. ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ವಿಮಾನ ನಿಲ್ದಾಣದ ತುರ್ತು ಸೇವಾ ಸಿಬ್ಬಂದಿ ಸಹಾಯಕ್ಕೆ ಧಾವಿಸಿ ಬಂದರೂ ಪೈಲಟ್ ಜೀವ ಉಳಿಸಲಾಗಲಿಲ್ಲ ಎಂದು ಏರ್ಲೈನ್ಸ್ ತಿಳಿಸಿದೆ.
ನಡೆದಿರುವ ಈ ದುರಂತದಿಂದ ನಮಗೂ ನೋವಾಗಿದೆ. ಅಕಾಲಿಕವಾಗಿ ಸಾವಿಗೀಡಾದ ನಮ್ಮ ಉದ್ಯೋಗಿಯ ಕುಟುಂಬಕ್ಕೆ ನಾವು ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇವೆ. ಸಮರ್ಪಣೆ, ವೃತ್ತಿಪರತೆ ಮತ್ತು ಸಮರ್ಪಣೆಯಿಂದ ಕೂಡಿದ್ದ ಅವರ 25 ವರ್ಷಗಳ ವೃತ್ತಿಜೀವನ ಹಾಗೂ ಅವರು ನೀಡಿದ ಅಮೂಲ್ಯ ಸೇವೆಗೆ ನಾವು ಕೃತಜ್ಞರಾಗಿರುತ್ತೇವೆ. ಹಾರಾಟದ ಸಮಯದಲ್ಲಿ ಅವರ ಜೀವ ಉಳಿಸಲು ಸಾಕಷ್ಟು ಪ್ರಯತ್ನ ಮಾಡಲಾಯ್ತಾದ್ರೂ ಸಾಧ್ಯವಾಗಲಿಲ್ಲ ಎಂದು ಪ್ರಕಟಣೆ ಹೇಳಿದೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಮೃತರಾದ ಪೈಲಟ್ ಅಂಡೂರ್ ಅವರಿಗೆ 56 ವರ್ಷ ವಯಸ್ಸಾಗಿತ್ತು.
Chandrayaan – 3: ಚಂದ್ರನ ಮೇಲೆ ಕಾಲಿಡಲು ಇನ್ನೊಂದೇ ಹೆಜ್ಜೆ ಬಾಕಿ: ನೌಕೆಯಿಂದ ಬೇರ್ಪಟ್ಟ ವಿಕ್ರಂ ಲ್ಯಾಂಡರ್
ನವದೆಹಲಿ (ಆಗಸ್ಟ್ 17, 2023): ಭಾರತದ ಚಂದ್ರಯಾನ – 3 ಮಿಷನ್ಗೆ ದೊಡ್ಡ ಯಶಸ್ಸು ಸಿಕ್ಕಿದ್ದು, ವಿಕ್ರಂ ಲ್ಯಾಂಡರ್ ನೌಕೆಯಿಂದ ಯಶಸ್ವಿಯಾಗಿ ಬೇರ್ಪಟ್ಟಿದೆ. ಈ ಮೂಲಕ ವಿಕ್ರಂ ಲ್ಯಾಂಡರ್ ಚಂದ್ರನತ್ತ ಕಾಲಿಡಲು ಇನ್ನೊಂದೇ ಹೆಜ್ಜೆ ಬಾಕಿ ಇದೆ. ನೌಕೆಯಿಂದ ಬೇರ್ಪಟ್ಟ ವಿಕ್ರಮ್ ಲ್ಯಾಂಡರ್ ಇನ್ನು ಚಂದ್ರನ ಮೇಲೆ ಲ್ಯಾಂಡ್ ಆಗುವತ್ತ ಹೆಜ್ಜೆ ಇಟ್ಟಿದೆ. ಮುಂದಿನ ಬುಧವಾರ ಅಂದರೆ, ಆಗಸ್ಟ್ 23, 2023 ಕ್ಕೆ ಚಂದ್ರನ ಮೇಲೆ ಕಾಲಿಡುವ ನಿರೀಕ್ಷೆ ಇದೆ.
ಬೇರ್ಪಟ್ಟ ನಂತರ, ಪೆರಿಲುನ್ (ಚಂದ್ರನ ಸಮೀಪ ಬಿಂದು) 30 ಕಿಲೋಮೀಟರ್ ಮತ್ತು ಅಪೋಲುನ್ (ಚಂದ್ರನಿಂದ ದೂರದ ಬಿಂದು) 100 ಕಿ.ಮೀ. ಇರುವ ಕಕ್ಷೆಯಲ್ಲಿ ಇರಿಸಲು ಲ್ಯಾಂಡರ್ “ಡೀಬೂಸ್ಟ್” (ನಿಧಾನಗೊಳಿಸುವ ಪ್ರಕ್ರಿಯೆ) ಒಳಗಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಕಕ್ಷೆಯಿಂದ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸಾಫ್ಟ್ ಲ್ಯಾಂಡಿಂಗ್ ಅನ್ನು ಆಗಸ್ಟ್ 23 ರಂದು ಪ್ರಯತ್ನಿಸಲಾಗುವುದು ಎಂದು ಇಸ್ರೋ ಹೇಳಿದೆ.
ಒಮ್ಮೆ ಚಂದ್ರನ ಮೇಲೆ ಕಾಲಿಟ್ಟ ಬಳಿಕ ಲ್ಯಾಂಡರ್ ಪ್ರಗ್ಯಾನ್ ರೋವರ್ನ ಫೋಟೋ ತೆಗೆಯುತ್ತದೆ. ಇದು ಚಂದ್ರನ ಮೇಲ್ಮೈಯಲ್ಲಿ ಭೂಕಂಪನ ಚಟುವಟಿಕೆಯನ್ನು ಅಧ್ಯಯನ ಮಾಡಲು ತನ್ನ ಉಪಕರಣಗಳನ್ನು ನಿಯೋಜಿಸುತ್ತದೆ ಎಂದೂ ತಿಳಿದುಬಂದಿದೆ.