ಮಣಿಪುರದಲ್ಲಿ ಮತ್ತೊಂದು ಕ್ರೂರ ಘಟನೆಯ ವಿಡಿಯೋ ವೈರಲ್; ವ್ಯಕ್ತಿಯ ತಲೆಯನ್ನು ಕತ್ತರಿಸಿ ಬಿದಿರಿನ ಬೇಲಿಗೆ ನೇತು ಹಾಕಿದ ದುಷ್ಕರ್ಮಿಗಳು!

ಇಂಫಾಲ್: ಮಣಿಪುರದಲ್ಲಿ (Manipur) ಇಬ್ಬರು ಮಹಿಳೆಯರನ್ನ ಬೆತ್ತಲೆಗೊಳಿಸಿ ಮೆರವಣಿಗೆ ( Manipur Women Paraded) ನಡೆಸಿದ ಪ್ರಕರಣ ಕಾವು ಪಡೆದುಕೊಂಡಿರುವ ಹೊತ್ತಿನಲ್ಲೇ ಮತ್ತೊಂದು ವೀಡಿಯೋ ರಾಜ್ಯದ ಜನರನ್ನ ಬೆಚ್ಚಿ ಬೀಳಿಸಿದೆ. ವ್ಯಕ್ತಿಯೊಬ್ಬನ ತಲೆಯನ್ನ ಕತ್ತರಿಸಿ ಬಿದಿರಿನ ಬೇಲಿಗೆ ನೇತು ಹಾಕಿದ್ದು, ಈ ಕುರಿತ ವೀಡಿಯೋ ಜಾಲತಾಣದಲ್ಲಿ (Social Media) ಭಾರೀ ಸದ್ದು ಮಾಡ್ತಿದೆ.
ಡೇವಿಡ್ ಥಿಕ್ ಎಂದು ಗುರುತಿಸಲಾದ ಕುಕಿ ವ್ಯಕ್ತಿಯ ತುಂಡರಿಸಿದ ತಲೆಯನ್ನು ಬಿಷ್ಣುಪುರ ಜಿಲ್ಲೆಯ ವಸತಿ ಪ್ರದೇಶದಲ್ಲಿ ಬಿದಿರಿನ ಬೇಲಿಗೆ ನೇತು ಹಾಕಿರುವ ಘಟನೆ ವೀಡಿಯೋದಲ್ಲಿ ಸೆರೆಯಾಗಿದೆ.
ಇದೇ ತಿಂಗಳ ಜುಲೈ 2ರಂದು ಮಧ್ಯಾಹ್ನ 12 ವೇಳೆಗೆ ನಡೆದ ಘರ್ಷಣೆಯಲ್ಲಿ ಡೇವಿಡ್ ಮೃತಪಟ್ಟಿದ್ದಾನೆ. ಈ ಘಟನೆಯಲ್ಲಿ ಒಟ್ಟು ಮೂವರು ಪ್ರಾಣ ಕಳೆದುಕೊಂಡಿದ್ದಾರೆ ಅನ್ನೋದು ತಿಳಿದುಬಂದಿದೆ. ವೀಡಿಯೋ ಬೆಳಕಿಗೆ ಬಂದ ನಂತರ ಮಣಿಪುರದಲ್ಲಿ ಮತ್ತೆ ಉದ್ವಿಗ್ನತೆ ಉಂಟಾಗಿದ್ದು, ಪ್ರತಿಭಟನೆ ಇನ್ನಷ್ಟು ಹಿಂಸಾತ್ಮಕ ರೂಪ ತಾಳುತ್ತಿದೆ.
ಮಣಿಪುರದ ಗುಡ್ಡಗಾಡು ಪ್ರದೇಶಗಳಲ್ಲಿ ಇಬ್ಬರು ಮಹಿಳೆಯರನ್ನ ಬೆತ್ತಲೆಯಾಗಿ ಮೆರವಣಿಗೆ ಮಾಡುವ ಎರಡು ತಿಂಗಳ ಹಳೆಯ ವೀಡಿಯೊ ಬುಧವಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಕಳೆದ ಮೇ 3 ರಂದು ಈಶಾನ್ಯ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಒಂದು ದಿನದ ನಂತರ ಕಾಂಗ್‌ಪೋಕ್ಪಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿತ್ತು.
ವಿಡೀಯೋ ವೈರಲ್ ಆದ ಬಳಿಕ ರೊಚ್ಚಿಗೆದ್ದ ಜನ ಪ್ರತಿಭಟನೆಗೆ ಮುಂದಾಗಿದ್ದರು. ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದ ಮಣಿಪುರದ ತೌಬಲ್ ಜಿಲ್ಲೆಯ ನಾಂಗ್‌ಪೋಕ್ ಸೆಕ್ಮೈ ಪೊಲೀಸರು ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಕೇಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಗುರುವಾರ ಸಂಜೆ ವೇಳೆಗೆ ನಾಲ್ವರನ್ನ ಬಂಧಿಸಲಾಗಿತ್ತು. ಆದರೂ ಪ್ರತಿಭಟನಾಕಾರರ ಗುಂಪು ಪ್ರಮುಖ ಆರೋಪಿ ಮನೆಗೆ ಬೆಂಕಿ ಹಚ್ಚಿ ಸುಟ್ಟುಹಾಕಿತ್ತು.
ಬರೋಬ್ಬರಿ 77 ದಿನಗಳಿಂದ ಎರಡು ಪ್ರಮುಖ ಸಮುದಾಯಗಳ ನಡುವೆ ನಡೆಯುತ್ತಿರೋ ಸಂಘರ್ಷದ ಕಾರಣದಿಂದ ಮಣಿಪುರ ಎಂಬ ಪುಟ್ಟ ರಾಜ್ಯ ಹೊತ್ತಿ ಉರಿಯುತ್ತಿದೆ. ಈವರೆಗೂ ನೂರಾರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಖುದ್ದು ಸೇನೆ ಫೀಲ್ಡ್‌ಗೆ ಇಳಿದರೂ ಸಂಘರ್ಷ ಶಮನವಾಗಿಲ್ಲ. ದಿನೇ ದಿನೇ ಹಿಂಸಾಚಾರ ಹೆಚ್ಚಾಗುತ್ತಲೇ ಸಾಗಿದೆ. ಶಾಂತಿ ಎಂಬುದಿಲ್ಲಿ ಮರೀಚಿಕೆ ಆಗಿದೆ. ಇಂತಹ ಸಂದರ್ಭದಲ್ಲಿ ಮನುಕುಲ ತಲೆತಗ್ಗಿಸುವಂತಹ ವೀಡಿಯೋ ಒಂದು ಹೊರಬಂದಿತ್ತು. ಆದಿವಾಸಿ ಸಮುದಾಯದ ಇಬ್ಬರು ಮಹಿಳೆಯರನ್ನು ಸಂಪೂರ್ಣ ಬೆತ್ತಲೆ ಮಾಡಿದ ರಾಕ್ಷಸಿ ಗುಂಪೊಂದು, ಅವರನ್ನು ನೂರಾರು ಜನರ ಸಮ್ಮುಖದಲ್ಲಿ ಮೆರವಣಿಗೆ ಮಾಡಿತ್ತು. ಈ ದೃಶ್ಯಾವಳಿ ಇದು ಇಡೀ ದೇಶದ ಮನಕಲಕಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.
ಜೈಲಲ್ಲೇ ಡ್ರೈಫ್ರೂಟ್ಸ್, ಸ್ವೀಟ್ಸ್ ಮಾರುತ್ತಿದ್ದ ಉಗ್ರ – ಬೆಚ್ಚಿ ಬೀಳಿಸುವ ಅನೇಕ ರಹಸ್ಯಗಳು ಬಯಲು!
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಶಂಕಿತ ಉಗ್ರರ ಬಂಧನ ಪ್ರಕರಣದಲ್ಲಿ ಬಗೆದಷ್ಟು ರಹಸ್ಯಗಳು ಬಯಲಾಗುತ್ತಿವೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಲಷ್ಕರ್-ಎ-ತೊಯ್ಬಾ (LET) ಉಗ್ರ ನಸೀರ್ ಬಗ್ಗೆ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಅಧಿಕಾರಿಗಳು ಮತ್ತಷ್ಟು ರಹಸ್ಯಗಳನ್ನ ಬಯಲಿಗೆಳೆದಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದುಕೊಂಡೇ ಉಗ್ರ ನಸೀರ್ ದಿನಕ್ಕೆ 4-5 ಸಾವಿರ ದುಡ್ಡು ಸಂಪಾದನೆ ಮಾಡುತ್ತಿದ್ದ. ಬಟ್ಟೆ, ಡ್ರೈ ಫ್ರೂಟ್ಸ್, ಸ್ವೀಟ್ಸ್ ಮಾಡುತ್ತಿದ್ದ. ಉಗ್ರರಿಗೆ ನಿಗದಿಯಾಗಿರೊ ಹೈ ಸೆಕ್ಯುರಿಟಿ ಸೆಲ್ ಬಿಟ್ಟು ಬೇರೆ ಕಡೆ ಸಹ ಓಡಾಟ ನಡೆಸುತ್ತಿದ್ದ ನಸೀರ್ ವಿಚಾರಣಾಧೀನ ಕೈದಿಗಳನ್ನ ತನ್ನ ರೂಮಿಗೆ ಹಾಕಿಸಿಕೊಂಡು ಬಿಸಿನೆಸ್ ಮಾಡ್ತಿದ್ದ. ಹೊರಗಡೆಯಿಂದ ಡ್ರೈ ಫ್ರೂಟ್ಸ್, ಬಟ್ಟೆ ತರಿಸಿಕೊಂಡು ಜೈಲಿನ ಖೈದಿಗಳಿಗೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡ್ತಿದ್ದ ಎಂಬ ಅನೇಕ ರಹಸ್ಯಗಳು ಬಯಲಾಗಿದೆ.
45 ಸಜೀವ ಗುಂಡುಗಳು ಪತ್ತೆ: ತನಿಖೆ ಚುರುಕುಗೊಳಿಸಿರುವ ಸಿಸಿಬಿ ಅಧಿಕಾರಿಗಳು (CCB Officers) ಶಂಕಿರಿಂದ 45 ಸಜೀವ ಗುಂಡುಗಳನ್ನ ಪತ್ತೆ ಮಾಡಿ ಸೀಜ್ ಮಾಡಿದ್ದಾರೆ. 45 ಗುಂಡುಗಳ ಪೈಕಿ 15 ಸಜೀವ ಗುಂಡುಗಳು ಪೊಲೀಸರು ಬಳಸುವ ಗುಂಡುಗಳು ಎಂದು ತಿಳಿದುಬಂದಿದೆ. .303 ಹಾಗೂ .9 ಎಂಎಂನ ಸಜೀವ ಗುಂಡುಗಳು ಪತ್ತೆಯಾಗಿದ್ದು, ಪೊಲೀಸರಿಗೂ ತಲೆಬಿಸಿಯಾಗಿದೆ. ಹೌದು. ಪತ್ತೆಯಾದ ಗುಂಡುಗಳಲ್ಲಿ .303 ಹಾಗೂ .9 ಎಂಎಂ ನ ಸಜೀವ ಗುಂಡುಗಳು ಪೊಲೀಸರು ಹಾಗೂ ಮಿಲಿಟರಿ ಅಧಿಕಾರಿಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಬಿಎಸ್‌ಎಫ್, ಐಟಿಬಿಪಿ, ಸಿಐಎಸ್‌ಎಫ್ ನಂತಹ ಅರೆಸೇನಾ ಪಡೆಗಳು ಕೂಡ ಈ ಬುಲೆಟ್‌ಗಳನ್ನ ಬಳಕೆ ಮಾಡುತ್ತವೆ.
ಈ ಬುಲೆಟ್‌ಗಳು ಶಂಕಿತರ ಕೈ ಸೇರಿರೋದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಮಾವೋವಾದಿಗಳು ಹಾಗೂ ಪೊಲೀಸರ ಸಂಘರ್ಷದಲ್ಲಿ ಈ ಗುಂಡುಗಳು ಕಳುವಾಗಿರಬಹುದಾ? ಅಥವಾ ಎಲ್ಲಾದರೂ ಪೊಲೀಸರಿಂದ ದರೋಡೆ ಮಾಡಿರಬಹುದಾ? ಅಥವಾ ಪೊಲೀಸ್ ಇಲಾಖೆಯವರೇ ಬುಲೆಟ್‌ಗಳನ್ನ ಮಾರಾಟ ಮಾಡಿರಬಹುದಾ? ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿವೆ.