ವಿಮಾನದಲ್ಲಿ ಸಹಪ್ರಯಾಣಿಕ ವೈದ್ಯೆಗೆ ಲೈಂಗಿಕ ಕಿರುಕುಳ; ಪ್ರೊಫೆಸರ್ ಅರೆಸ್ಟ್
ಮುಂಬಯಿ: ದೆಹಲಿ-ಮುಂಬೈ ವಿಮಾನದಲ್ಲಿ ವೈದ್ಯೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ 47 ವರ್ಷದ ಪ್ರಾಧ್ಯಾಪಕನನ್ನು ಬಂಧಿಸಲಾಗಿದೆ.
ಬುಧವಾರ ಮುಂಜಾನೆ 5.30 ರ ಸುಮಾರಿಗೆ ದೆಹಲಿಯಿಂದ ಹೊರಟ ವಿಮಾನದಲ್ಲಿ ಪಾಟ್ನಾ ಮೂಲದ ಪ್ರಾಧ್ಯಾಪಕ ಶ್ರೀವಾಸ್ತವ್ ಮತ್ತು ದೆಹಲಿಯ ವೈದ್ಯೆ ಪರಸ್ಪರ ಪಕ್ಕದಲ್ಲಿ ಕುಳಿತಿದ್ದರು.ವಿಮಾನದಲ್ಲಿ ಸಹಪ್ರಯಾಣಿಕ ಪ್ರಯಾಣದ ವೇಳೆ ಶ್ರೀವಾಸ್ತವ್ ಅವರು ಉದ್ದೇಶಪೂರ್ವಕವಾಗಿ ತನ್ನನ್ನು ಅನುಚಿತವಾಗಿವಿಮಾನದಲ್ಲಿ ಸಹಪ್ರಯಾಣಿಕ ಸ್ಪರ್ಶಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಈ ವೇಳೆ ಇಬ್ಬರು ಸಹ ಪ್ರಯಾಣಿಕರ ನಡುವೆ ಮಾತಿನ ಚಕಮಕಿ ನಡೆದಿದೆ. ವಿಮಾನಯಾನ ಸಿಬ್ಬಂದಿ ಮಧ್ಯಪ್ರವೇಶಿಸಿ, ಪರಿಸ್ಥಿತಿ ತಿಳಿಗೊಳಿಸಿದರು. ವಿಮಾನವು ಇಳಿದ ನಂತರ ಅಧಿಕಾರಿಗಳು ಇಬ್ಬರೂ ಪ್ರಯಾಣಿಕರನ್ನು ಸಹಾರ್ ಪೊಲೀಸ್ ಠಾಣೆಗೆ ಕರೆದೊಯ್ದರು. ಅಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಮತ್ತು ವೈದ್ಯರ ಹೇಳಿಕೆಯನ್ನು ದಾಖಲಿಸಲಾಗಿದೆ.
ಪ್ರೊಫೆಸರ್ ರೋಹಿತ್ ಶ್ರೀವಾಸ್ತವ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಮತ್ತು ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀವಾಸ್ತವ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಹೆಣ್ಣಿನ ನಮ್ರತೆಯನ್ನು ಆಕ್ರೋಶಗೊಳಿಸುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲ) ಮತ್ತು 354 ಎ (ಲೈಂಗಿಕ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
‘ಎಫ್ಐಆರ್ ದಾಖಲಾದ ನಂತರ, ಶ್ರೀವಾಸ್ತವ್ ಅವರನ್ನು ಬಂಧಿಸಲಾಯಿತು, ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.
ಟೇಕಾಫ್ ಬಳಿಕ ರನ್ ವೇನಲ್ಲಿ ಟಯರ್ ಭಾಗಗಳು ಪತ್ತೆ – ದೆಹಲಿಗೆ ವಿಮಾನ ವಾಪಸ್
ನವದೆಹಲಿ: ವಿಮಾನ ಟೇಕಾಫ್ ಆದ ಬಳಿಕ ಅದರ ಟಯರ್ನ ಭಾಗಗಳು ರನ್ವೇಯಲ್ಲಿ ಪತ್ತೆಯಾದ ಘಟನೆ ದೆಹಲಿಯಲ್ಲಿ ನಡೆದಿದೆ. ಇದನ್ನೂ ಗಮನಿಸಿದ ವಿಮಾನ ನಿಲ್ದಾಣದ ಸಿಬ್ಬಂದಿ ಕೂಡಲೇ ಎಟಿಸಿಗೆ ಮಾಹಿತಿ ನೀಡಿದ್ದಾರೆ. ಬಳಿಕ ವಿಮಾನವನ್ನು ವಾಪಸ್ ಮರಳುವಂತೆ ಸೂಚನೆ
ಏರ್ ಇಂಡಿಯಾ (Air India) ವಿಮಾನ (Flight) ದೆಹಲಿಯಿಂದ (Delhi) ಪ್ಯಾರಿಸ್ಗೆ (Paris) ತೆರಳುತ್ತಿತ್ತು. ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಟೈರ್ನ ಭಾಗಗಳು ರನ್ ವೇಯಲ್ಲಿ ಕಾಣಿಸಿದೆ. ಬಳಿಕ ದೆಹಲಿ ಏರ್ ಟ್ರಾಫಿಕ್ ಕಂಟ್ರೋಲ್ (ATC) ನೀಡಿದ ಮಾಹಿಯ ಆಧಾರದ ಮೇಲೆ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ.
ಪ್ರಯಾಣಿಕರಿಗೆ ಆದ ಅನಾನುಕೂಲತೆಗಾಗಿ ಏರ್ ಇಂಡಿಯಾ ವಿಷಾದ ವ್ಯಕ್ತಪಡಿಸಿದೆ. ಪ್ರಯಾಣಿಕರ ಸುರಕ್ಷತೆಗೆ ಏರ್ ಇಂಡಿಯಾ ಮೊದಲ ಆದ್ಯತೆ ನೀಡುತ್ತದೆ. ಇದಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.