ಆ್ಯಪ್ನಲ್ಲಿ ಪರಿಚಯ, ಯುವತಿ ಮೇಲೆ ಇಬ್ಬರಿಂದ ಅತ್ಯಾಚಾರ: ಪ್ರಕರಣ ದಾಖಲು!
Dating App: ಗುರುಗ್ರಾಮ, ಜುಲೈ 26: ಡೇಟಿಂಗ್ ಆ್ಯಪ್ನಲ್ಲಿ (Dating App) ಭೇಟಿಯಾದ ವ್ಯಕ್ತಿಯು ಯುವತಿಯೊಬ್ಬಳನ್ನು ಹೋಟೆಲ್ಗೆ ಕರೆಸಿಕೊಂಡು ಅತ್ಯಾಚಾರವೆಸಗಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಯುವತಿಯನ್ನು ಭೇಟಿ ಮಾಡಬೇಕೆಂದು ಹೋಟೆಲ್ಗೆ ಕರೆಸಿಕೊಂಡ ವ್ಯಕ್ತಿಯು ಆತನ ಸ್ನೇಹಿತ ಜತೆ ಸೇರಿ ಅತ್ಯಾಚಾರವೆಸಗಿದ್ದಾನೆ.
ಮಹಿಳೆಯ ದೂರಿನ ಪ್ರಕಾರ, ಆಕೆ ಡೇಟಿಂಗ್ ಆ್ಯಪ್ ಮೂಲಕ ಆರೋಪಿಯನ್ನು ಭೇಟಿಯಾಗಿದ್ದಳು, ನಂತರ ಜೂನ್ 29 ರಂದು ಆಕೆಯನ್ನು ಆಹ್ವಾನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆ ಹೋಟೆಲ್ ತಲುಪಿದಾಗ, ಆತ ಏನೋ ತಿನ್ನಲು ಕೊಟ್ಟಿದ್ದ ಅದರಿಂದ ಆಕೆ ಪ್ರಜ್ಞೆ ಕಳೆದುಕೊಂಡಿದ್ದಳು. ಇದರ ಲಾಭ ಪಡೆದು ನನ್ನ ಮೇಲೆ ಅತ್ಯಾಚಾರವೆಸಗಿ ಕೃತ್ಯದ ವಿಡಿಯೋ ಕೂಡ ಮಾಡಿದ್ದಾರೆ. ಪ್ರಜ್ಞೆ ಬಂದ ನಂತರ ಆರೋಪಿಗಳು ಆಕೆಯ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಹೇಗೋ ಕಷ್ಟಪಟ್ಟು ಮನೆಗೆ ಮರಳಿದೆ ಈಗ ಪೊಲೀಸ್ ಠಾಣೆಗೆ ಬಂದಿದ್ದೇನೆ ಎಂದು ಯುವತಿ ತಿಳಿಸಿದ್ದಾಳೆ.
ಸೆಕ್ಟರ್ 50 ಪೊಲೀಸ್ ಠಾಣೆಯಲ್ಲಿ ಇಬ್ಬರು ಅಪರಿಚಿತ ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರದ ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎಸ್‌ಎಚ್‌ಒ ಪ್ರವೀಣ್ ಮಲಿಕ್ ಹೇಳಿದ್ದಾರೆ, ಈ ಕುರಿತು ತನಿಖೆ ನಡೆಯುತ್ತಿದೆ.
ಬೆಂಗಳೂರು: ಬಂಧಿತ ಶಂಕಿತ ಐವರು ಉಗ್ರರಲ್ಲಿ ಓರ್ವನ ಪ್ರಿಯತಮೆಯಿಂದ ಡ್ರಗ್ಸ್ ಸಪ್ಲೈ
ಬೆಂಗಳೂರು: ನಗರದಲ್ಲಿ ಬಂಧಿತ ಶಂಕಿತ ಐವರು ಉಗ್ರರ (Suspected Terrorists) ಬಂಧನ ಪ್ರಕರಣ ಮೊತ್ತೊಂದು ತಿರುವು ಪಡೆದುಕೊಂಡಿದೆ. ಶಂಕಿತ ಉಗ್ರರು ನಗರದಲ್ಲಿ ಸ್ಪೋಟ ನಡೆಸಲು ಸಂಚು ರೂಪಿಸಿದ್ದಲ್ಲದೆ, ಡ್ರಗ್ಸ್ (Drugs) ಕೂಡ ಸಪ್ಲೈ ಮಾಡುತ್ತಿದ್ದರು ಎಂಬ ಅಂಶ ಸಿಸಿಬಿ (CCB) ತನಿಖೆ ವೇಳೆ ಬಯಲಾಗಿದೆ. ಬಂಧಿತರ ಐವರು ಶಂಕಿತ ಉಗ್ರರ ಪೈಕಿ ಮುದಾಸಿರ್ ಹಾಗೂ ಉಮರ್ ಇಬ್ಬರು ಶಂಕಿತ ಉಗ್ರರರು ಡ್ರಗ್ಸ್ ಸಪ್ಲೈ ಮಾಡುತ್ತಿದ್ದರು.
ಸಿಸಿಬಿ ಪೊಲೀಸರು ಶಂಕತಿ ಉಗ್ರ ಮುದಾಸಿರ್ ಪ್ರಿಯತಮೆಯನ್ನು ವಿಚಾರಣೆಗೆ ಒಳಪಡಿಸಿದಾಗ ಈ ಅಂಶ ಬಯಲಾಗಿದೆ. ಹೌದು ಮುದಾಸಿರ್ ಪ್ರಿಯತಮೆ ಕೈಯಲ್ಲಿ ಡ್ರಗ್ಸ್ ಇಟ್ಟು ನಾನು ಹೇಳಿದವರಿಗೆ ಇದನ್ನು ಕೊಡು ಎಂದು ಹೇಳಿ ಹೋಗುತ್ತಿದ್ದನಂತೆ. ಇದರಂತೆ ಪ್ರಿಯತಮ ಮುದಾಸಿರ್ ಹೇಳಿದವರಿಗೆ ಗೆಳತಿ ಡ್ರಗ್ಸ್ ಕೊಡುತ್ತಿದ್ದಳು. ಇನ್ನು ಮುದಾಸಿರ್ ತಾನು ಬಂಧನವಾದ ದಿನವೂ ಗೆಳತಿಗೆ ಡ್ರಗ್ಸ್ ಕೊಟ್ಟು ಸಪ್ಲೈ ಮಾಡು ಎಂದಿದ್ದನಂತೆ.
ಇನ್ನು ಐವರು ಶಂಕಿತ ಉಗ್ರರ ಕಸ್ಟಡಿ ಅವಧಿ ಇಂದು (ಜು.26) ಮುಕ್ತಾಯವಾಗುವ ಹಿನ್ನೆಲೆ ಸಿಸಿಬಿ ಪೊಲೀಸರು ಆರೋಪಿಗಳನ್ನು ಕೋರ್ಟ್ಗೆ ಹಾಜರು ಪಡಿಸಲಿದ್ದಾರೆ. ನ್ಯಾಯಾಲಯದ ಮುಂದೆ ಪ್ರಕರಣದ ಗಂಭೀರತೆಯನ್ನು ವಿವರಿಸಿ ಮತ್ತೆ 7 ದಿನ ಕಸ್ಟಡಿಗೆ ಕೇಳಲು ಸಿದ್ದತೆ ನಡೆಸಿದ್ದಾರೆ.