ಆಂಧ್ರ ಪ್ರದೇಶದಲ್ಲಿ ಭೀಕರ ಅಪಘಾತ - ಓರ್ವ ಮೃತ್ಯು, ಉಚ್ಚಿಲದ ವ್ಯಕ್ತಿಗೆ ಗಂಭೀರ ಗಾಯ
Twitter
Facebook
LinkedIn
WhatsApp

ಪಡುಬಿದ್ರಿ, ಜೂ 08 : ಆಂಧ್ರಪ್ರದೇಶದ ವಿಜಯವಾಡ-ಗುಂಟೂರು ರಾಷ್ಟ್ರೀಯ ಹೆದ್ದಾರಿ ಟೋಲ್‌ಗೇಟ್ ಬಳಿ ಮೀನಿನ ಕಂಟೇನರ್ ಮತ್ತು ಸರಕು ಲಾರಿಯ ಮಧ್ಯೆ ನಡೆದ ಅಪಘಾತದಲ್ಲಿ ಉಚ್ಚಿಲ ಮೂಲದ ವ್ಯಕ್ತಿ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ಗಾಯಾಳುವನ್ನು ಮೀನಿನ ಲಾರಿಯ ಚಾಲಕ ಉಚ್ಚಿಲ ಬಡಾ ಗ್ರಾಮದ ಭಾಸ್ಕರ ನಗರದ ನಿವಾಸಿ ಬಶೀರ್ ಎಂದು ಗುರುತಿಸಲಾಗಿದೆ.
ಇನ್ನು ಸರಕು ಲಾರಿಯ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು,
ಘಟನೆಯ ಸಂಪೂರ್ಣ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.
ಬಶೀರ್‌ನ ಸಂಬಂಧಿಕರು ಉಚ್ಚಿಲ ಬಡಾ ಗ್ರಾಮದಿಂದ ಆಂಧ್ರಪ್ರದೇಶಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.