ತನ್ನ ಸಾವಿಗೆ ಅನೈತಿಕ ಸಂಬಂಧವಿರುವ ಮಹಿಳೆಯೇ ಕಾರಣವೆಂದು ವಾಟ್ಸಪ್ ಸ್ಟೇಟಸ್ ಹಾಕಿ ಆತ್ಮಹತ್ಯೆ!
ವಿಜಯಪುರ, (ಜುಲೈ 25): ವ್ಯಕ್ತಿಯೋರ್ವ ಆತ್ಮಹತ್ಯೆ (Suicide) ಮಾಡಿಕೊಳ್ಳುವುದಾಗಿ ವಾಟ್ಸಪ್ ಸ್ಟೇಟಸ್ ಹಾಕಿ ನೇಣಿಗೆ ಶರಣಾಗಿರುವ ಘಟನೆ ವಿಜಯಪುರ(Vijayapura) ಜಿಲ್ಲೆಯ ಸಿಂದಗಿ ತಾಲೂಕಿನ ಪಿ.ಹೆಚ್.ಬೂದಿಹಾಳ ಗ್ರಾಮದಲ್ಲಿ ನಡೆದಿದೆ. ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಹೆಸರು ಬರೆದಿಟ್ಟು ಶಿವಣ್ಣ ಚೌಧರಿ(40) ಎನ್ನುವಾತ ಪಿ.ಹೆಚ್.ಬೂದಿಹಾಳ ಗ್ರಾಮದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಸಾವಿಗೆ ಅನೈತಿಕ ಸಂಬಂಧವಿರುವ (illicit relationship) ಮಹಿಳೆಯೇ ಕಾರಣವೆಂದು ವಾಟ್ಸಪ್ ಸ್ಟೇಟಸ್ ನಲ್ಲಿ ಮಹಿಳೆ ಫೋಟೋ ಹಾಕಿ, ಗ್ರಾಮದ ಕೆಲವರ ಹೆಸರು ಉಲ್ಲೇಖಿಸಿದ್ದಾನೆ. ಅಲ್ಲದೇ ಆಕೆಗೆ ನೀಡಿರುವ ಹಣ ನನ್ನ ತನ್ನ ಮಕ್ಕಳಿಗೆ ಕೊಡಿಸಿ ಎಂದು ವಿಡಿಯೋ ಚಿತ್ರೀಕರಿಸಿ, ಡೆತ್ನೋಟ್ ಬರೆದಿಟ್ಟಿದ್ದಾನೆ.
ಮನೆಯವರ ವಿರೋಧ ಕಟ್ಟಿಕೊಂಡು ಆಕೆ ಜೊತೆಗಿದ್ದೆ, ಹಣವನ್ನೂ ನೀಡಿದ್ದೆ. ನನ್ನ ಬಳಿ ಹಣ ಖಾಲಿಯಾದ ಬಳಿಕ ನನ್ನನ್ನು ದೂರ ಮಾಡಿದಳೆ. ನನ್ನ ಮೂವರು ಮಕ್ಕಳು ಅನಾಥವಾದರೂ ಪರವಾಗಿಲ್ಲ, ಆಕೆಗೆ ಶಿಕ್ಷೆಯಾಗಬೇಕು. ನಾನು ಆಕೆಗೆ ನೀಡಿರುವ ಹಣ ನನ್ನ ಮಕ್ಕಳಿಗೆ ಕೊಡಿಸಿ ಎಂದು ಮನವಿ ಮಾಡಿರುವ ಶಿವಣ್ಣ, ಆಕೆ ಹಲವರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾನೆ.
ಹಾಗೇ ಪಿ.ಹೆಚ್.ಬೂದಿಹಾಳ ಗ್ರಾಮದ ಕೆಲವರ ಹೆಸರು ಹೇಳಿರುವ ಶಿವಣ್ಣ ಚೌಧರಿ, ಸಿದ್ದು ವಾಲೀಕಾರ ಮಾಟಮಂತ್ರ ಮಾಡಿ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದಾರೆ. ಸಿದ್ದು ವಾಲೀಕಾರಗೆ ಮೊಹಮ್ಮದ್ ಸಾಬ್ ಫತೇಪುರ, ಬಾಬು ನಾಟಿಕಾರ, ಮಲಕಪ್ಪ ಸಹಾಯ ಮಾಡುತ್ತಿದ್ದಾರೆಂದು ವಿಡಿಯೋನಲ್ಲಿ ಹೇಳಿ ಬಳಿಕ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ಸ್ಥಳಕ್ಕೆ ಸಿಂದಗಿ ಠಾಣೆ ಪೊಲೀಸರ ಭೇಟಿ, ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.
ಪತ್ನಿ, ಅತ್ತೆ, ಮಾವನನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿ, 9 ತಿಂಗಳ ಮಗನೊಂದಿಗೆ ಪೊಲೀಸರಿಗೆ ಶರಣಾದ ವ್ಯಕ್ತಿ
ಕೌಟುಂಬಿಕ ಸಮಸ್ಯೆಗಳಿಂದಾಗಿ ಬೇಸತ್ತ ವ್ಯಕ್ತಿಯೊಬ್ಬ ತನ್ನ ಪತ್ನಿ , ಅತ್ತೆ ಹಾಗೂ ಮಾವನನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿ 9 ತಿಂಗಳ ಮಗನೊಂದಿಗೆ ಬಂದು ಪೊಲೀಸರಿಗೆ ಶರಣಾಗಿರುವ ಘಟನೆ ಅಸ್ಸಾಂನ ಗೋಲಾಘಾಟ್ನಲ್ಲಿ ನಡೆದಿದೆ. ಗೋಲಾಘಾಟ್ ಪಟ್ಟಣದ ಹಿಂದಿ ಸ್ಕೂಲ್ ರಸ್ತೆಯಲ್ಲಿರುವ ತನ್ನ ಅತ್ತೆಯ ಮನೆಯಲ್ಲಿ ಜಗಳವಾಡಿ, ನಂತರ ವ್ಯಕ್ತಿ ಮೂವರನ್ನು ಮಚ್ಚಿನಿಂದ ಕೊಂದಿದ್ದಾನೆ.
ಆರೋಪಿಯು ಈ ಮೊದಲು ಪತ್ನಿಯ ಮೇಲೆ ಹಲ್ಲೆ ನಡೆಸಿ ಜೈಲು ಪಾಲಾಗಿದ್ದ ಬಿಡುಗಡೆಯಾದ ಬಳಿಕ ಮತ್ತೆ ಮಾವನ ಮನೆಗೆ ಹೋಗಿ ಜಗಳವಾಡಿದ್ದ, ಕೋಪ ತಾರಕಕ್ಕೇರಿ ಕೊನೆಗೆ ಮೂವರನ್ನೂ ಹತ್ಯೆ ಮಾಡಿದ್ದಾರೆ.
ಅಪರಾಧ ಎಸಗಿದ ನಂತರ ಆರೋಪಿಯು ತನ್ನ ಒಂಬತ್ತು ತಿಂಗಳ ಮಗುವಿನೊಂದಿಗೆ ಗೋಲಘಾಟ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೃತರನ್ನು ಸಂಘಮಿತ್ರ ಘೋಷ್ ಮತ್ತು ಆಕೆಯ ಪೋಷಕರು ಸಂಜಿಬ್ ಘೋಷ್ ಮತ್ತು ಜುನು ಘೋಷ್ ಎಂದು ಗುರುತಿಸಲಾಗಿದೆ. ಕಾಜಿರಂಗ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯಾಗಿರುವ ಮಹಿಳೆಯ ಕಿರಿಯ ಸಹೋದರಿ ದಾಳಿಯ ಸಮಯದಲ್ಲಿ ಕುಟುಂಬದೊಂದಿಗೆ ವಿಡಿಯೋ ಕರೆಯಲ್ಲಿದ್ದಳು.