ಮಂಗಳವಾರ, ಡಿಸೆಂಬರ್ 5, 2023
ಇಂದಿರಾ ಗಾಂಧಿ ಭದ್ರತಾ ಉಸ್ತುವಾರಿಯಾಗಿ ಸೇವೆ ಸಲ್ಲಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ಇಂದು ಮಿಜೋರಾಂ ನೂತನ ಸಿಎಂ ಸ್ಥಾನಕ್ಕೆ ಸಜ್ಜು..!-ಚೆನ್ನೈನಲ್ಲಿ ಭಾರಿ ಮಳೆ ; 5 ಮಂದಿ ಸಾವು - ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ!-ಮಣಿಪುರದಲ್ಲಿ ಮತ್ತೆ ಹಿಂಸಾಚಾರ ; 13 ಜನ ಸಾವು!-ಉದ್ಯಮಿಗೆ ವಂಚನೆ ಆರೋಪ ಪ್ರಕರಣ ; ಚೈತ್ರಾ ಸಹಿತ ಇಬ್ಬರಿಗೆ ಜಾಮೀನು ಮಂಜೂರು..!-ಲೋಕಸಭಾ ಚುನಾವಣೆ 2024: ಕಾಂಗ್ರೆಸ್ ನಿಂದ ಹರೀಶ್ ಕುಮಾರ್ ಅಥವಾ ರಮನಾಥ ರೈ ನಳಿನ್ ವಿರುದ್ಧ ಅಭ್ಯರ್ಥಿ ?-ಅರಬ್ಬಿ ಸಮುದ್ರಕ್ಕೆ ಇಳಿದಿದ್ದ 27 ಮೀನುಗಾರರಿದ್ದ ಬೋಟ್​ ನಾಪತ್ತೆ-Gold Rate : ದುಬಾರಿಯತ್ತ ಬಂಗಾರದ ಬೆಲೆ ; ಇಂದಿನ ಚಿನ್ನದ ದರ ಹೇಗಿದೆ?-8 ಬಾರಿ ಮೈಸೂರು ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಸಾವು; ಕಾಡಾನೆ ಸೆರೆ ಹಿಡಿಯುವ ವೇಳೆ ದುರ್ಘಟನೆ..!-ದಿವ್ಯಾಂಗರು, ಅಂಗವಿಕಲರ ಕಲ್ಯಾಣದ ಮಹತ್ವದ ವಿಷಯದ ಕುರಿತಂತೆ ಸರ್ಕಾರದ ಗಮನ ಸೆಳೆದ ವಿಧಾನ ಪರಿಷತ್ತು ಸದಸ್ಯ ಹರೀಶ್ ಕುಮಾರ್-ಪ್ರತಾಪ್ ಸಿಂಹರವರು ಸತತ ಎರಡು ಬಾರಿ ಗೆದ್ದಂತಹ ಮೈಸೂರು ಲೋಕಸಭಾ ಕ್ಷೇತ್ರ ಈ ಬಾರಿ ಜೆಡಿಎಸ್ ತೆಕ್ಕೆಗೆ..?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ನೀವು ಹೆದರಿಸದರೆ ಮಾತ್ರಕ್ಕೆ ನಾನು ಹೆದರಲ್ಲ ದೇವೇಗೌಡರಿಗೆ ಡಿಕೆಶಿ ಟಾಂಗ್!

Twitter
Facebook
LinkedIn
WhatsApp
ನೀವು ಹೆದರಿಸದರೆ ಮಾತ್ರಕ್ಕೆ ನಾನು ಹೆದರಲ್ಲ ದೇವೇಗೌಡರಿಗೆ ಡಿಕೆಶಿ ಟಾಂಗ್!

ನಿನ್ನೆ ಸುದ್ದಿಗೋಷ್ಠಿಯಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು, ಮಿಸ್ಟರ್ ಡಿಕೆಶಿ ಯೂ ಕೆನ್ ನಾಟ್ ಮೇಡ್ ಪಾಲಿಟಿಕ್ಸ್. ನಾನಿನ್ನೂ ಬದುಕಿದ್ದೇನೆ, ನಮ್ಮ ಪಕ್ಷವನ್ನ ಏನೂ ಮಾಡಲು ಸಾಧ್ಯವಿಲ್ಲ ಎಂದು ಗುಡುಗಿದ್ದರು. ಇದೀಗ ಗೌಡರ ಗುಟುರ್‌ಗೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಚನ್ನಪಟ್ಟಣ ಜೆಡಿಎಸ್ ಮುಖಂಡರ ಕಾಂಗ್ರೆಸ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ನನಗೆ ದೇವೇಗೌಡರು ಕೂಡ ವಾರ್ನಿಂಗ್ ಕೊಟ್ಡಿದ್ದಾರೆ. ಮಿಸ್ಟರ್ ಡಿಕೆಶಿ ಈ ಆಟ ನಡೆಯಲ್ಲ ಅಂತ ವಾರ್ನಿಂಗ್ ಕೊಟ್ಟಿದ್ದಾರೆ. ಅವರ ಮಾತುಗಳು ನನಗೆ ಆಶೀರ್ವಾದ. ಆದರೆ ನಿಮ್ಮ ಪಾರ್ಟಿ ಮುಖಂಡರು, ನಿಮ್ಮ ಸುಪುತ್ರರು ಜನತಾ ದಳ ವಿಸರ್ಜನೆ ಮಾಡ್ತೀನಿ ಎಂದಾಗ ಕಾರ್ಯಕರ್ತರು ಎಲ್ಲಿಗೆ ಹೋಗಬೇಕು? ಎಂದು ಪ್ರಶ್ನಿಸಿದರು.

ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ನೀವು ಹೇಳಿದ್ರಿ. ರಾಜಕಾರಣ ಹಾವು ಏಣಿ ಆಟ, ಇದೊಂದು ಚೆಸ್ ಗೇಮ್. ಆದರೆ ಜನರಿಗೆ ಏನು ಸಂದೇಶ ಕೊಟ್ಟಿದ್ರೋ ಅದನ್ನು ಮುಗ್ದ ಜನ ನಂಬಿಕೊಂಡಿದ್ರು. ಹಿಂದೆ ಎಷ್ಟೆಲ್ಲ ಎಲೆಕ್ಷನ್‌ನಲ್ಲಿ ನೀವೇನು ಮಾಡಿದ್ರಿ ಬಿಜೆಪಿಯವರು ಏನು ಮಾಡಿದ್ರಿ ಗೊತ್ತಿದೆ. ನೀವು ಹೆದರಿಸಿದರೆ ಮಾತ್ರಕ್ಕೆ ಡಿಕೆ ಶಿವಕುಮಾರ್ ಹೆದರಲ್ಲ ಅನ್ನೋದು ನಿಮಗೂ ಗೊತ್ತಿದೆ ಎಂದು ತಿರುಗೇಟು ನೀಡಿದರು.

ಇನ್ನು, ನೀವು ಯಾರನ್ನು ಬೇಕಾದರೂ ಕಟ್ಟಿ ಹಾಕಿಕೊಳ್ಳಿ, ಹಿಡಿದಿಟ್ಟಿಕೊಳ್ಳಿ ಅಥವಾ ರೂಮ್ ಗಾದ್ರೂ ಹಾಕಿಕೊಳ್ಳಿ. ಆದರೆ ಮನೆ ಮನೆಗೆ ಹೋಗಿ ಕಾರ್ಯಕರ್ತರನ್ನು ನಾನು ನಮ್ರತೆಯಿಂದ ಕರೆದುಕೊಂಡು ಬರ್ತೇನೆ. ನಾನು 88ರಲ್ಲೂ ರಾಜಕಾರಣ ಮಾಡಿದ್ದೇನೆ, 89ರಲ್ಲೂ ರಾಜಕಾರಣ ಮಾಡಿದ್ದೇನೆ. ಸಾತನೂರಲ್ಲಿ ಏನು ಮಾಡಿದ್ದೇನೆ ಅನ್ನೋದು ಗೊತ್ತಿದೆ. ತೇಜಸ್ವಿನಿ ಏನು ಮಾತಾಡಿದ್ರು ಅನ್ನೋದು ಗೊತ್ತಿದೆ ಎಂದು ಹೇಳಿದರು.

ಇನ್ನು, ಈಗ ತಾವು ಎಷ್ಟೇ ವಾರ್ನಿಂಗ್ ಕೊಟ್ಟರೂ ಹೆದರಿಸಿದರೂ ಬೆದರಿಸಿದರೂ ತಮ್ಮ ಸುಪುತ್ರನ ಕ್ಷೇತ್ರದ ಮುಖಂಡರು ಕಾಂಗ್ರೆಸ್ ಜತೆ ಬಂದಿದ್ದಾರೆ ಎಂದು ಡಿಕೆಶಿ ಎಚ್‌ಡಿಡಿಗೆ ವ್ಯಂಗ್ಯವಾಗಿ ಟಾಂಗ್ ನೀಡಿದರು.

CP Yogeshwar: ಪೊಲಿಟಿಕಲ್ ಬಾಂಬ್ ಸಿಡಿಸಿದ ಸೈನಿಕ; ಡಿಕೆಶಿ ಎದುರಿಸಲು ಮೈತ್ರಿ ಅನಿವಾರ್ಯ ಎಂದ ಮಾಜಿ ಸಚಿವ

ರಾಮನಗರ: ಸಂಕ್ರಾಂತಿಗೆ ಕಾಂಗ್ರೆಸ್ ಸರ್ಕಾರ (Congress Government) ಪತನವಾಗಲಿದೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (Former Minister CP Yogeshwar) ಸ್ಫೋಟಕ ಹೇಳಿಕೆ ನೀಡಿದ್ದಾರೆ. ಗಾಂಧಿ ಜಯಂತಿ ಹಿನ್ನೆಲೆ ಇಂದು ಚನ್ನಪಟ್ಟಣ ಬಸ್ ನಿಲ್ದಾಣ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಿಪಿ ಯೋಗೇಶ್ವರ್ ಭಾಗಿಯಾಗಿದ್ದರು. ಕಾರ್ಯಕ್ರಮದ ಬಳಿಕ ಮಾತನಾಡಿದ ಸಿಪಿ ಯೋಗೇಶ್ವರ್, ಈ ಸರ್ಕಾರದಲ್ಲಿ ನಿರ್ದಿಷ್ಟ ಕೋಮುಗಳನ್ನ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಈ ವಿಚಾರ ಶಾಸಕರಿಗೂ ಅನ್ನಿಸುತ್ತಿದೆ. ಹಾಗಾಗಿಯೇ ಲಿಂಗಾಯಿತ ಸಿಎಂ ವಿಚಾರ ಪ್ರಸ್ತಾಪ ಆಗ್ತಿದೆ ಎಂದರು.

ಈ ಸರ್ಕಾರದಲ್ಲಿ ಶಾಸಕರಿಗೆ ಅಭಿವೃದ್ಧಿ ಕೆಲಸಗಳನ್ನು ಮಾಡಲು ಆಗ್ತಿಲ್ಲ. ಬಿಟ್ಟಿ ಸ್ಕೀಮ್ ಗಳಿಗೆ ಹಣ ಹೋಗ್ತಿದೆ, ಶಾಸಕರು ನಿರುದ್ಯೋಗಿಗಳಾಗಿದ್ದಾರೆ. 2024 ಕ್ಕೆ ಬೆ.ಗ್ರಾಮಾಂತರ ಬಿಜೆಪಿ ಪಾಲಾಗಲಿದ್ದು, ಸಂಸದದ ಡಿ.ಕೆ.ಸುರೇಶ್ ದುರಂಹಕಾರಕ್ಕೆ ಜನ ಉತ್ತರ ಕೊಡ್ತಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್​ನಲ್ಲಿ ಹೊಂದಾಣಿಕೆ ಇಲ್ಲ

ಕಾಂಗ್ರೆಸ್ ನಲ್ಲಿ ಹೊಂದಾಣಿಕೆ ಇಲ್ಲದ ಕಾರಣ ಸಿಎಂ ಮತ್ತು ಡಿಸಿಎಂ ಹುದ್ದೆಗೆ ಕಿತ್ತಾಟ ಶುರುವಾಗಿದೆ. ನನಗೆ 16 ಜನ ಕಾಂಗ್ರೆಸ್ ಶಾಸಕರು ಪರಿಚಯವಿದ್ದು, ಸಿಕ್ಕಾಗ ಮಾತನಾಡುತ್ತಿರುತ್ತೇವೆ. ಶಾಸಕರು ಸರ್ಕಾರದ ವಿರುದ್ಧ ಸಿಡಿದು ಹೊರಗೆ ಬರುತ್ತಾರೆ ಎಂದು ಭವಿಷ್ಯ ನುಡಿದರು.

ಮೈತ್ರಿ ಅನಿವಾರ್ಯ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎದುರಿಸಲು ಮೈತ್ರಿ ಅನಿವಾರ್ಯವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಧಮನಕಾರಿ ಆಡಳಿತ ಮಾಡ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ಆಪರೇಷನ್ ಹಸ್ತ ಅಂತ ಪ್ರಾರಂಭ ಮಾಡಿದ್ದಾರೆ. ಹಾಗಾಗಿ ಅವರನ್ನ ಎದುರಿಸಲು ಹೊಂದಾಣಿಕೆ ಆಗಿದೆ ಎಂದು ತಿಳಿಸಿದರು. ಮೈತ್ರಿಯಿಂದ ಬಿಜೆಪಿ-ಜೆಡಿಎಸ್ ಎರಡೂ ಪಕ್ಷಕ್ಕೂ ಅನುಕೂಲ ಆಗಲಿದೆ. ಮೈತ್ರಿ ಬಗ್ಗೆ ನಿನ್ನೆ ಜೆಡಿಎಸ್ ಸರ್ವಾನುಮತದ ಒಪ್ಪಿಗೆ ಪಡೆದಿದೆ ಎಂಬ ಮಾಹಿತಿ ನೀಡಿದರು.

ಮುಂದಿನ ವಾರ ಚನ್ನಪಟ್ಟಣ ಬಿಜೆಪಿ ಸ್ಥಳೀಯ ನಾಯಕರ ಸಭೆ ನಡೆಸುತ್ತೇವೆ. ಮೈತ್ರಿ ಬಗ್ಗೆ ಬೂತ್ ಮಟ್ಟದ ನಾಯಕರು, ಕಾರ್ಯಕರ್ತರಿಗೆ ಮನವರಿಕೆ ಮಾಡುತ್ತೇವೆ.ಬಳಿಕ ಜೆಡಿಎಸ್ ನಾಯಕರ ಜೊತೆ ಮತ್ತೊಂದು ಸಭೆ ಮಾಡಲಾಗುವುದು ಎಂದು ಹೇಳಿದರು.

ಅವಕಾಶ ಸಿಕ್ಕರೆ ಸ್ಪರ್ಧೆ

ಟಿಕೆಟ್ ಹಂಚಿಕೆ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು. ಬೆಂಗಳೂರು ಗ್ರಾಮಾಂತರ ವಿಚಾರದಲ್ಲಿ ಪಕ್ಷದ ವರಿಷ್ಠರು ಏನೇ ತೀರ್ಮಾನ ಮಾಡಿದ್ರೂ ಅದಕ್ಕೆ ಬದ್ಧನಾಗಿರುತ್ತೇನೆ. ಬಿಜೆಪಿಗೆ ಅವಕಾಶ ಸಿಕ್ಕಿದ್ರೆ, ನನ್ನನ್ನ ಚುನಾವಣೆಗೆ ನಿಲ್ಲಲು ಸೂಚಿಸಿದ್ರೆ ನಾನು ಸ್ಪರ್ಧೆ ಮಾಡ್ತೀನಿ ಎಂದು ಲೋಕಸಮರದ ಆಸೆಯನ್ನು ಹೊರ ಹಾಕಿದರು.

ಒಂದು ವೇಳೆ ಜೆಡಿಎಸ್ ಗೆ ಅವಕಾಶ ನೀಡಿದ್ರೆ ಅವರಿಗೆ ಸಪೋರ್ಟ್ ಮಾಡ್ತೀವಿ. ಮುಂದಿನ ರಾಜಕೀಯ ದೃಷ್ಟಿಯಿಂದ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎಂದು ಮಾಹಿತಿ ನೀಡಿದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ