ಯಡಿಯೂರಪ್ಪನವರ ಹೃದಯ ಬಗೆದರೆ..? ಶೋಬಕ್ಕ ಹಾಗೂ ಮಕ್ಕಳು ಎಂದ ಈಶ್ವರಪ್ಪನವರ ಬೆಂಬಲಿಗರು!
ಶಿವಮೊಗ್ಗ: ಬಿಜೆಪಿ ಲೋಕಸಭಾ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಈಗಾಗಲೇ ಘೋಷಿಸಿದ್ದು, ಪುತ್ರನಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನಲೆ ತೀವ್ರ ಬೇಸರಗೊಂಡಿರುವ ಕೆಎಸ್ ಈಶ್ವರಪ್ಪ(KS Eshwarappa), ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ.
(ಮಾ,15) ಶಿವಮೊಗ್ಗದ (Shivamogga) ಬಂಜಾರ ಕನ್ವೆನ್ಷನ್ ಹಾಲ್ನಲ್ಲಿ ಮಾತನಾಡಿದ ಅವರು, ‘ಸ್ವತಂತ್ರವಾಗಿ ಸ್ಪರ್ಧಿಸಿ ನಾನು ಮೋದಿ, ಬಿಜೆಪಿ ವಿರುದ್ಧ ಹೋಗುತ್ತಿಲ್ಲ. ಪಕ್ಷ ಒಂದು ಕುಟುಂಬದ ಕೈಯಲ್ಲಿ ಸಿಲುಕಿರುವುದನ್ನು ಬಿಡಿಸಲು ಸ್ಪರ್ಧೆ ಮಾಡುತ್ತೇನೆ. ನೊಂದ ಪಕ್ಷದ ಕಾರ್ಯಕರ್ತರ ಧ್ವನಿಯಾಗಿ ಸ್ಪತಂತ್ರವಾಗಿ ಸ್ಪರ್ಧಿಸುವೆ. ನನ್ನಿಂದಲೇ ಎನ್ನುವವರ ವಿರುದ್ಧ ಚುನಾವಣಾ ಕಣಕ್ಕೆ ಇಳಿಯುತ್ತಿದ್ದೇನೆ ಎಂದರು. ಇದೇ ವೇಳೆ ನನ್ನ ಹೃದಯಲ್ಲಿ ಮೋದಿ ಇದ್ದಾರೆ ಎನ್ನುವಾಗ ಯಡಿಯೂರಪ್ಪನವರ ಹೃದಯ ಬಗೆದರೆ ಶೋಬಕ್ಕ ಹಾಗೂ ಮಕ್ಕಳು ಇದ್ದಾರೆ ಎಂದು ಈಶ್ವರಪ್ಪನವರ ಬೆಂಬಲಿಗರು ಹೇಳಿದರು.
ಬಿಜೆಪಿಯನ್ನು ಕಟ್ಟಿ ಬೆಳೆಸಿದವರಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರು ಕೂಡ ಒಬ್ಬರು: ಮಾಜಿ ಸಿಎಂ ಬೊಮ್ಮಾಯಿ
ಹಾವೇರಿ, ಮಾರ್ಚ್ 15: ಬಿಜೆಪಿಯನ್ನು ಕಟ್ಟಿ ಬೆಳೆಸಿದವರಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರು ಕೂಡ ಒಬ್ಬರು. ಈಶ್ವರಪ್ಪನವರು ಶಿಸ್ತಿನ ಸಿಪಾಯಿ, ಅವರ ಜತೆ ನಾನು ಮಾತನಾಡುವೆ. ಬಿಜೆಪಿ ಟಿಕೆಟ್ ವರಿಷ್ಠರ ತೀರ್ಮಾನ, ಯಾರಿಗೂ ಮೋಸ ಮಾಡಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪ ಅವರಿಗೆ ಎಲ್ಲಾ ಗೊತ್ತಿದೆ. ನಾನು ಏನು ಹೇಳಿದ್ದೆ? ಪಾರ್ಲಿಮೆಂಟರಿ ಬೋರ್ಡ್ನಲ್ಲಿ ಏನು ಹೇಳಿದ್ದೆ ಎಲ್ಲಾ ಅವರಿಗೆ ಗೊತ್ತಿದೆ ಎಂದು ಹೇಳಿದ್ದಾರೆ.
ನನ್ನ ಹೆಸರು ಪಾರ್ಲಿಮೆಂಟರಿ ಬೋರ್ಡ್ನಲ್ಲಿ ಕೂಡ ಫೈನಲ್ ಆಗಿರಲಿಲ್ಲ. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಬೇರೆಯವರಿಗೆ ಅವಕಾಶ ಕೊಡಿ ಎಂದಿದ್ದೆ. ಪಿಎಂ, ನಡ್ಡಾಜಿ, ಗೃಹ ಸಚಿವರು ತಿಳಿಸಿದ ಬಳಿಕ ನಿರ್ಧಾರ ಮಾಡಬೇಕಾಯಿತು. ಅನಿವಾರ್ಯ ಇದೆ ನೀನು ಸ್ಪರ್ಧಿಸು ಎಂದು ಪ್ರಧಾನಿ, ವರಿಷ್ಠರು ಹೇಳಿದರು. ಹೀಗಾಗಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಬೊಮ್ಮಾಯಿ ಎದುರೇ ಕೈ ಕೈ ಮಿಲಾಯಿಸಿ ಕಾರ್ಯಕರ್ತರು
ಲೋಕಸಭಾ ಟಿಕೆಟ್ ಸಿಕ್ಕ ಬಳಿಕ ಮೊದಲ ಬಾರಿ ಜಿಲ್ಲಾ ಕಚೇರಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಿದ್ದರು. ಈ ವೇಳೆ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ನಡುವೆ ಗಲಾಟೆ ಉಂಟಾಗಿದೆ. ಬಸವರಾಜ ಬೊಮ್ಮಾಯಿ ಬರುತ್ತಿದ್ದಂತೆ ತಳ್ಳಾಟ ನೂಕಾಟ ಮಾಡಲಾಗಿದೆ. ಹಾವೇರಿ ಗ್ರಾಮಾಂತರ ಬಿಜೆಪಿ ಘಟಕದ ಅಧ್ಯಕ್ಷ ವೆಂಕಟೇಶ್ ನಾರಾಯಣಿ ಬದಲಾವಣೆಗೆ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಅರವಿಂದ ಬೆಲ್ಲದ್ ಎದುರೇ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು, ಚೇರ್ ಕಿತ್ತುಗೆದು, ಕಿತ್ತಾಡಿ, ಟೇಬಲ್ ಗುದ್ದಿ ಆಕ್ರೋಶ ಹೊರ ಹಾಕಿದರು. ಗಲಾಟೆ ಜೋರಾಗುತ್ತಿದ್ದಂತೆ ಕಚೇರಿಯಿಂದ ಬೊಮ್ಮಾಯಿ ಹೊರ ನಡೆದರು.