ಬಿಗ್‌ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಆತ್ಮಹತ್ಯೆಗೆ ಯತ್ನ? ಕಾರಣವೇನು...!
ಬೆಂಗಳೂರು: ʻಬಿಗ್ ಬಾಸ್ʼ ಸೀಸನ್ 10 (Drone Prathap), ಹದಿಮೂರನೇ ವಾರಕ್ಕೆ ಕಾಲಿಟ್ಟಿದೆ. ಫಿನಾಲೆಗೆ ಕೆಲವೇ ದಿನ ಇರುವಾಗಲೇ ಹೊಸ ಆತಂಕಕಾರಿ ಸಂಗತಿಯೊಂದು ತಿಳಿದು ಬಂದಿದೆ. ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಅವರು ಆತ್ಮಹತ್ಯೆ ಯತ್ನಿಸಿದ್ದಾರೆ ಎಂಬ ವದಂತಿ ವೈರಲ್ ಆಗಿದೆ. ಆದರೀಗ ಈ ಬಗ್ಗೆ ಸ್ಪಷ್ಟನೆ ಕೂಡ ಕಲರ್ಸ್ ಕನ್ನಡ ಕೊಟ್ಟಿದೆ.
ʻಡ್ರೋನ್ ಪ್ರತಾಪ್ ಅವರದ್ದು ಸೂಸೈಡ್ ಅಟೆಂಪ್ಟ್ ಅಲ್ಲ. ಪ್ರತಾಪ್ ಅವರು ಎರಡು ದಿನದಿಂದ ಊಟ ಮಾಡಿರಲಿಲ್ಲ. ಹಾಗಾಗಿ ಫುಡ್ ಪಾಯಿಸನ್ ಆಗಿ ರಾತ್ರಿ ಆಸ್ಪತ್ರೆಗೆ ದಾಖಲಿಸಿದ್ದೆವು. ಇಂದು ಸಂಜೆ ವೇಳೆಗೆ ಬಿಗ್ ಬಾಸ್ ಮನೆಗೆ ಹಿಂದಿರುಗಲಿದ್ದಾರೆ. ಅವರು ಆರೋಗ್ಯವಾಗಿದ್ದಾರೆ. ಯಾವುದೇ ಆತಂಕವಿಲ್ಲʼʼಎಂದು ಕಲರ್ಸ್ ವಾಹಿನಿ ಸ್ಪಷ್ಟನೆ ಕೊಟ್ಟಿದೆ. ಮನೆಯಲ್ಲಿ ಕೆಲವು ವಿಚಾರದಲ್ಲಿ ಪ್ರತಾಪ್ ಬೇಸರಗೊಂಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸರಿಯಾಗಿ ಊಟ ಮಾಡಿರಲಿಲ್ಲ. ಖಾಲಿ ಹೊಟ್ಟೆಯಲ್ಲಿ ವಿಟಮಿನ್ ಮಾತ್ರೆ ಸೇವಿಸಿದ್ದರು ಎನ್ನಲಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್ (Prathap) ಅವರು ಆಗಾಗ ಸೈಲೆಂಟ್ ಆಗುತ್ತಾರೆ. ಕಷ್ಟದ ಸಂದರ್ಭದಲ್ಲಿ ಪ್ಯಾನಿಕ್ ಆಗುತ್ತಾರೆ ಎನ್ನುವ ಅಭಿಪ್ರಾಯವೂ ಅನೇಕರದ್ದು. ಇದೇ ವಿಚಾರ ಇಟ್ಟುಕೊಂಡು ಮನೆಯಲ್ಲಿ ಟಾಸ್ಕ್ನಿಂದ ಹೊರಗೆ ಇಡಲಾಗಿದೆ. ‘ನನಗೆ ಒಂದು ಚಾನ್ಸ್ ಕೊಟ್ಟರೆ ತಾನೇ ಗೊತ್ತಾಗೋದು. ಪದೇಪದೆ ಪ್ಯಾನಿಕ್ ಆಗ್ತೀಯಾ ಎಂದರೆ ಅದು ಎಷ್ಟು ಸರಿ’ ಎಂದು ಪ್ರತಾಪ್ ಅವರು ಸಂಗೀತಾ ಹಾಗೂ ನಮ್ರತಾನ ಪ್ರಶ್ನೆ ಮಾಡಿದ್ದಾರೆ. ಈ ಪ್ರೋಮೊ ಕೂಡ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.
ಡ್ರೋನ್ ಪ್ರತಾಪ್ಗೆ ಲೀಗಲ್ ನೋಟಿಸ್ ಕಳುಹಿಸಿದ ಡಾ. ಪ್ರಯಾಗ್!
ಬಿಗ್‌ಬಾಸ್ ಕನ್ನಡದ 10ನೇ ಆವೃತ್ತಿಯಲ್ಲಿರುವ ಪ್ರಬಲ ಸ್ಪರ್ಧಿ ಡ್ರೋನ್ ಪ್ರತಾಪ್ಗೆ (Drone Prathap) ಸಂಕಷ್ಟವೊಂದು ಎದುರಾಗಿತ್ತು. ಬಿಬಿಎಂಪಿ ಅಧಿಕಾರಿಯಾಗಿರುವ ಪಶುವೈದ್ಯ ಡಾ. ಪ್ರಯಾಗ್ ಎಚ್ ಎಸ್ ಅವರು ಕಾನೂನು ನೋಟಿಸ್ ಕಳುಹಿಸಿದ್ದರು. ತಮ್ಮ ಬಗ್ಗೆ ಅನಗತ್ಯ ಆರೋಪಗಳನ್ನು ಮಾಡಿರುವ ಡ್ರೋನ್ ಪ್ರತಾಪ್ ನೋಟಿಸ್ ತಲುಪಿದ ಒಂದು ತಿಂಗಳ ಒಳಗೆ ಬಹಿರಂಗ ಹಾಗೂ ಲಿಖಿತ ಕ್ಷಮೆ ಕೋರದೆ ಹೋದರೆ ಮಾನನಷ್ಟ ಮೊಕದ್ದಮೆಯನ್ನು ಹೂಡುವುದಾಗಿ ಅವರು ವಕೀಲರ ಮೂಲಕ ನೋಟಿಸ್ ಕಳುಹಿಸಿದ್ದರು.
ವಿವಾದಿತ ಕನ್ನಡ ರಿಯಾಲಿಟಿ ಶೋ ಬಿಗ್ಬಾಸ್ನ ಸ್ಪರ್ಧಿಯಾಗಿರುವ ನೀವು, ಜನರ ಅನುಕಂಪ ಗಳಿಸುವ ಹಾಗೂ ಪ್ರಚಾರ ಪಡೆಯುವ ಉದ್ದೇಶದಿಂದ ನನ್ನ ಮೇಲೆ ಅನಗತ್ಯ ಆರೋಪಗಳನ್ನು ಮಾಡಿದ್ದೀರಿ. ಕೊರೊನಾ ಕಾಲದಲ್ಲಿ ನೋಡಲ್ ಅಧಿಕಾರಿಯಾಗಿ ಕೆಲಸ ಮಾಡಿದ್ದ ನನ್ನ ಮೇಲೆ, ಹಲ್ಲೆ ಮಾಡಿರುವ ಆರೋಪ ಮಾಡಿದ್ದೀರಿ. ಎಲ್ಲವೂ ಸತ್ಯಕ್ಕೆ ದೂರವಾಗಿರುವ ವಿಚಾರ. ವಾಸ್ತವದಲ್ಲಿ ಕ್ವಾರಂಟೈನ್ ನಿಯಮಗಳನ್ನು ನೀವು ಉಲ್ಲಂಘಿಸಿರುವ ಬಗ್ಗೆ ನಮ್ಮ ಬಳಿಕ ಸೂಕ್ತ ದಾಖಲೆಗಳು ಇವೆ. ಇಂಥದ್ದರಲ್ಲಿ ನನ್ನ ಮೇಲೇಯೇ ಆರೋಪ ಮಾಡಿರುವ ನಿಮ್ಮ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದೇನೆ. ಕ್ಷಮೆ ಕೋರದ ಹೊರತು ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಡಾ. ಪ್ರಯಾಗ್ ಅವರು ನೋಟಿಸ್ನಲ್ಲಿ ತಿಳಿದ್ದರು.