ಲೋಕಸಭೆ ಚುನಾವಣೆಗೆ ನಾನು ಸ್ಪರ್ಧೆ ಮಾಡೇ ಮಾಡ್ತೀನಿ ; ಶೋಭಾ ಕರಂದ್ಲಾಜೆ
ಮಂಗಳೂರು : ಸದ್ಯ ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಗದ್ದಲ ಜೋರಾಗಿಯೇ ಇದೆ. ಕರಾವಳಿಯಲ್ಲಿಯೂ ಚುನಾವಣೆಯ ಬಿಸಿ ಜೋರಾಗಿಯೇ ಇದೆ. ಅದರಲ್ಲೂ ಉಡುಪಿ – ಚಿಕ್ಕಮಗಳೂರು ಕ್ಷೇತ್ರ ಬಹಳ ಕಗ್ಗಂಟಾಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳಲ್ಲೂ ‘ಗೋ ಬ್ಯಾಕ್’ ಸದ್ದು ಜೋರಾಗಿದೆ.
ಕಾಂಗ್ರೆಸ್ ಕಾರ್ಯಕರ್ತರು ಜಯಪ್ರಕಾಶ್ ಹೆಗ್ಡೆ ಬೇಡ ಎನ್ನುತ್ತಿದ್ದರೆ, ಇತ್ತ ಬಿಜೆಪಿ ಶೋಭಾ ಕರಂದ್ಲಾಜೆ ಬೇಡ ಎನ್ನುತ್ತಿದ್ದಾರೆ. ಈ ನಡುವೆ ಸಂಸದೆ ಶೋಭಾ ಕರಂದ್ಲಾಜೆ ಮಾತ್ರ ತಮ್ಮ ಕ್ಷೇತ್ರ ಬಿಟ್ಟು ಕೊಡಲು ಸಿದ್ಧರಿಲ್ಲ. ಸ್ಪರ್ಧೆ ಮಾಡೇ ಮಾಡ್ತೀನಿ ಎಂದಿದ್ದಾರೆ.
ಉಡುಪಿ ಚಿಕ್ಕಮಗಳೂರು ಕ್ಷೇತ್ರ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಗೋಬ್ಯಾಕ್ ಶೋಭಾ ಎನ್ನುವ ಅಭಿಮಾನ ತೀವ್ರಗೊಳ್ಳುತ್ತಿದೆ. ಶೋಭಾಗೆ ಈ ಬಾರಿ ಟಿಕೇಟ್ ಸಿಗಲ್ವಾ? ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು. ಇದೀಗ ಇದಕ್ಕೆ ಉತ್ತರ ನೀಡಿರುವ ಶೋಭಾ ಕರಂದ್ಲಾಜೆ, ನಾನು ಸ್ಪರ್ಧೆ ಮಾಡೇ ಮಾಡ್ತೀನಿ ಎಂದಿದ್ದಾರೆ.
ಬಿಳಿನೆಲೆ ಸಿಪಿಸಿಆರ್‌ಐ ಕಾರ್ಯಕ್ರಮದಲ್ಲಿ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ ಅವರು, ಗೆಲ್ಲುವ ಸೀಟುಗಳಿಗೆ ಎಲ್ಲೆಡೆ ಪೈಪೋಟಿ ಇದ್ದೇ ಇರುತ್ತದೆ. ಟಿಕೆಟ್ ಕೇಳುವಾಗ ಗೊಂದಲಗಳು ಮೂಡುವುದು ಸಹಜ ಎಂದಿದ್ದಾರೆ