ನಾನಂತೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ: ಜಗದೀಶ್ ಶೆಟ್ಟರ್...!
ಧಾರವಾಡ: ನಾನಂತೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನನಗೆ ಟಿಕೆಟ್ ಕೊಡುವ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಲೋಕಸಭೆ ತಯಾರಿ ಕುರಿತು ಕಾಂಗ್ರೆಸ್ ಸಭೆಗೂ ಮುಂಚೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಹಿನ್ನೆಲೆ ಕಾರ್ಯಕರ್ತರನ್ನು ಸೇರಿಸಿ ಮಾರ್ಗದರ್ಶನ ಮಾಡುವ ಸಭೆ ಇದು. ಜ. 10ಕ್ಕೆ ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದೆ. ಪಕ್ಷದ ರಾಜ್ಯಾಧ್ಯಕ್ಷರು, ಸಿಎಂ ಸಭೆ ನಡೆಸಲಿದ್ದಾರೆ.
ಲೋಕಸಭೆ ಚುನಾವಣೆ ಬಗ್ಗೆ ಸಭೆಯಲ್ಲಿ ಚರ್ಚೆ ಆಗಲಿದೆ. ಟಿಕೆಟ್ ಆಕಾಂಕ್ಷಿಗಳು, ಅಭ್ಯರ್ಥಿಗಳ ಬಗ್ಗೆ ಕೂಡ ಸಭೆಯಲ್ಲಿ ಚರ್ಚೆ ಆಗುತ್ತದೆ ಎಂದು ಹೇಳಿದ್ದಾರೆ.
ಅನಿವಾರ್ಯತೆ ಬಂದರೆ ಲೋಕಸಭೆಗೆ ಸಚಿವರೂ ಸ್ಪರ್ಧೆ ಮಾಡಬೇಕಾಗುತ್ತದೆ: ಪರಮೇಶ್ವರ್
ಬೆಂಗಳೂರು: ಅನಿವಾರ್ಯತೆ ಬಂದರೆ ಸಚಿವರು ಸಹ ಸ್ಪರ್ಧೆ ಮಾಡಬೇಕಾಗುತ್ತದೆ ಅಂತ ಸುರ್ಜೇವಾಲ ತಿಳಿಸಿದ್ದಾರೆಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಲೋಕಸಭೆ ಚುನಾವಣೆಗೆ ಸಚಿವರ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಿನ್ನೆಯ ಸಭೆಯಲ್ಲಿ ಆ ವಿಚಾರ ಚರ್ಚೆ ಆಗಿಲ್ಲ. ಆದರೆ ಸಚಿವರು ಸ್ಪರ್ಧೆ ಮಾಡೋ ಪರಿಸ್ಥಿತಿ ಬಂದರೆ ಸ್ಪರ್ಧಿಸಬೇಕಾಗುತ್ತದೆ ಅಂತ ಹೇಳಿದ್ದಾರೆ. ಕಳೆದ ಬಾರಿ ಕೃಷ್ಟಭೈರೇಗೌಡ ಸ್ಪರ್ಧೆ ಉದಾಹರಣೆ ಕೊಟ್ಟು ಹೇಳಿದ್ದಾರೆ ಅನ್ನೋ ಮೂಲಕ ಸಚಿವರ ಸ್ಪರ್ಧೆಗೆ ಸಂದೇಶ ಬಂದಿದೆ ಅನ್ನೋ ಮಾಹಿತಿ ನೀಡಿದ್ದಾರೆ.