ನಾನು ಲಿಯೋ ಸಿನಿಮಾದಲ್ಲಿ ತ್ರಿಶಾ ಜತೆ ಬೆಡ್‌ರೂಮ್ ಸೀನ್ ಇರುತ್ತದೆ ಎಂದು ಭಾವಿಸಿದ್ದೆ ; ಕೀಳುಮಟ್ಟದ ಹೇಳಿಕೆ ನೀಡಿದ ಖಳನಟ..!
ಚೆನ್ನೈ: ತಮಿಳು ನಟ ಮನ್ಸೂರ್ ಅಲಿ ಖಾನ್ ಅವರು ನಟಿ ತ್ರಿಶಾ ಕೃಷ್ಣನ್ ಅವರ ಕುರಿತು ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ವಿವಾದದ ಕೇಂದ್ರ ಬಿದ್ದು ಆಗಿದ್ದಾರೆ. “ನಾನು ಲಿಯೋ ಸಿನಿಮಾದಲ್ಲಿ ತ್ರಿಶಾ ಜತೆ ಅತ್ಯಾಚಾರದ ದೃಶ್ಯ ಮಾಡಬೇಕಿತ್ತು” ಎಂದು ಮನ್ಸೂರ್ ಅಲಿ ಖಾನ್ (Mansoor Ali Khan) ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ನಟನಿಗೆ ಗಣ್ಯರಿಂದ ಹಿಡಿದು ಸಾಮಾನ್ಯರವರೆಗೆ ಚಾಟಿ ಬೀಸಿದ್ದಾರೆ. ತ್ರಿಶಾ ಕೃಷ್ಣನ್ (Trisha Krishnan) ಕೂಡ ಈ ಕುರಿತು ಪ್ರತಿಕ್ರಿಯಿಸಿದ್ದು, “ಇನ್ನೆಂದೂ ಮನ್ಸೂರ್ ಅಲಿ ಖಾನ್ ಜತೆ ನಟಿಸುವುದಿಲ್ಲ” ಎಂದು ಘೋಷಿಸಿದ್ದಾರೆ.
ಮನ್ಸೂರ್ ಅಲಿ ಖಾನ್ ಹೇಳಿದ್ದೇನು?
“ನಾನು ಲಿಯೋ ಸಿನಿಮಾದಲ್ಲಿ ತ್ರಿಶಾ ಅವರ ಜತೆ ನಟಿಸುತ್ತೇನೆ ಎಂದಾಗ ಖುಷಿಯಾಯಿತು. ಬೇರೆ ನಟಿಯರ ಜತೆ ಇದ್ದಂತೆ ತ್ರಿಶಾ ಅವರ ಜತೆಗೂ ಒಂದು ಬೆಡ್‌ರೂಮ್ ಸೀನ್ ಇರುತ್ತದೆ ಎಂದು ಭಾವಿಸಿದ್ದೆ. ನಾನು ತುಂಬ ರೇಪ್ ದೃಶ್ಯಗಳಲ್ಲಿ ನಟಿಸಿರುವ ಕಾರಣ ಇದೆಲ್ಲ ನನಗೆ ಏನೂ ಅನಿಸುವುದಿಲ್ಲ. ಆದರೆ, ಸಿನಿಮಾ ತಂಡದವರು ಕಾಶ್ಮೀರದಲ್ಲಿ ಶೂಟಿಂಗ್ ಮಾಡುವ ವೇಳೆ ನನಗೆ ತ್ರಿಶಾ ಅವರನ್ನು ತೋರಿಸಲೇ ಇಲ್ಲ” ಎಂದು ಹೇಳಿದ್ದರು. ಇದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.
The thing about men like Mansoor Ali Khan - they have always been talking like this. Never been condemned, with other men in power, money and influence laughing along; eeyy aamaa da macha correct ra maccha sorta thing. Robo Shankar said something on how he wants allowed to touch… pic.twitter.com/ZkRb2qxmMl
— Chinmayi Sripaada (@Chinmayi) November 18, 2023
ತಿರುಗೇಟು ಕೊಟ್ಟ ತ್ರಿಶಾ ಕೃಷ್ಣನ್
ಮನ್ಸೂರ್ ಅಲಿ ಖಾನ್ ವಿರುದ್ಧ ತ್ರಿಶಾ ಕೃಷ್ಣನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಮನ್ಸೂರ್ ಅಲಿ ಖಾನ್ ಅವರು ಇತ್ತೀಚೆಗೆ ನನ್ನ ಬಗ್ಗೆ ಅಸಭ್ಯವಾಗಿ ಮಾತನಾಡಿದ ವಿಡಿಯೊ ನೋಡಿದೆ. ಇಂತಹ ಕೀಳು ಅಭಿರುಚಿಯ, ಸ್ತ್ರೀದ್ವೇಷದಿಂದ ಕೂಡಿರುವ, ತುಚ್ಚ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ನಾನು ಇಂತಹ ವ್ಯಕ್ತಿಯ ಜತೆ ಇದುವರೆಗೆ ತೆರೆ ಹಂಚಿಕೊಂಡಿಲ್ಲ ಎಂಬುದೇ ಸಮಾಧಾನದ ಸಂಗತಿ. ಅಷ್ಟೇ ಅಲ್ಲ, ನಾನು ಸಿನಿಮಾ ಕ್ಷೇತ್ರದಲ್ಲಿ ಇರುವವರೆಗೆ ಈ ವ್ಯಕ್ತಿಯ ಜತೆ ನಟಿಸುವುದಿಲ್ಲ. ಇಂತಹ ವ್ಯಕ್ತಿಗಳು ಮನುಕುಲಕ್ಕೇ ಕೆಟ್ಟ ಹೆಸರು ತರುತ್ತಾರೆ” ಎಂದು ಪೋಸ್ಟ್ ಮಾಡಿದ್ದಾರೆ.
A recent video has come to my notice where Mr.Mansoor Ali Khan has spoken about me in a vile and disgusting manner.I strongly condemn this and find it sexist,disrespectful,misogynistic,repulsive and in bad taste.He can keep wishing but I am grateful never to have shared screen…
— Trish (@trishtrashers) November 18, 2023
ಖಾನ್ ಹೇಳಿಕೆ ಖಂಡಿಸಿದ ಗಣ್ಯರು
ಮನ್ಸೂರ್ ಅಲಿ ಖಾನ್ ಹೇಳಿಕೆಗೆ ಗಣ್ಯರು ಭಾರಿ ಖಂಡನೆ ವ್ಯಕ್ತಪಡಿಸಿದ್ದಾರೆ. ಗಾಯಕಿ ಚಿನ್ಮಯಿ ಶ್ರೀಪಾದ, ನಿರ್ದೇಶಕ ಲೋಕೇಶ್ ಕನಕರಾಜ್ ಸೇರಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಲ್ಲೂ, ನಟಿ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ್ ಅವರು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. “ಮಹಿಳಾ ಆಯೋಗದ ಸದಸ್ಯೆಯಾಗಿ ಮನ್ಸೂರ್ ಅಲಿ ಖಾನ್ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಆಯೋಗದ ಹಿರಿಯರ ಜತೆಗೂ ಮಾತನಾಡಿದ್ದೇನೆ. ಕ್ರಮ ತೆಗೆದುಕೊಳ್ಳಲಾಗುವುದು” ಎಂದಿದ್ದಾರೆ.
ವಿವಾದ ಭುಗಲೇಳುತ್ತಲೇ ಮನ್ಸೂರ್ ಅಲಿ ಖಾನ್ ಸ್ಪಷ್ಟನೆ ನೀಡಿದ್ದಾರೆ. “ನಾನು ನಟಿಯರನ್ನು ಗೌರವಿಸುತ್ತೇನೆ. ನನ್ನ ಮಗಳು ತ್ರಿಶಾ ಅವರ ದೊಡ್ಡ ಅಭಿಮಾನಿ. ನಾನು ಉದ್ದೇಶಪೂರ್ವಕವಾಗಿ ನೋವುಂಟು ಮಾಡಬೇಕು ಎಂದು ಹಾಗೆ ಹೇಳಿಲ್ಲ. ತಮಾಷೆಯಾಗಿ ಮಾತನಾಡುವಾಗ ಹಾಗೆ ಹೇಳಿದೆ” ಎಂದಿದ್ದಾರೆ. ಇನ್ನು ತ್ರಿಶಾ ಅಭಿಮಾನಿಗಳಂತೂ ಮನ್ಸೂರ್ ಅಲಿ ಖಾನ್ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದಾರೆ.