ಹೈದರಾಬಾದ್ : ಕುಡಿದ ಮತ್ತಿನಲ್ಲಿ ಕಂಡಕ್ಟರ್ ಮೇಲೆ ಯುವತಿಯಿಂದ ಹಲ್ಲೆ
ಹೈದರಾಬಾದ್: ಕುಡಿದ (Alcohol) ಅಮಲಿನಲ್ಲಿ ಬಸ್ ನಿರ್ವಾಹನ ( Conductor) ಮೇಲೆ ಯುವತಿ (Woman) ಹಲ್ಲೆ ಮಾಡಿರುವ ಘಟನೆ ಹೈದರಾಬಾದ್ ನಗರದಲ್ಲಿ ನಡೆದಿದೆ.
ಕುಡಿತ ಮತ್ತಿನಲ್ಲಿ ಬಸ್ ಹತ್ತಿದ್ದು, ಟಿಕೆಟ್‌ಗೆ ಸಂಬಂಧಿಸಿದಂತೆ ನಿರ್ವಾಹನ ಜೊತೆ ಯುವತಿ ಜಗಳ ಮಾಡಿದ್ದಾಳೆ. ಇದರಿಂದ ಮತ್ತಷ್ಟು ಕೋಪಗೊಂಡ ಯುವತಿ ಅವಾಚ್ಯ ಶಬ್ದಗಳಿಂದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಟಿಎಸ್‌ಆರ್‌ಟಿಸಿ) ಬಸ್ ಕಂಡಕ್ಟರ್‌ಗೆ ನಿಂದಿಸಿ ಹಲ್ಲೆ ಮಾಡಿದ್ದಾಳೆ. ಯುವತಿ ಹಲ್ಲೆ ಮಾಡುತ್ತಿರುವ ದೃಶ್ಯಗಳನ್ನು ಬಸ್ ಪ್ರಯಾಣಿಕರು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ಬಸ್‌ನಲ್ಲಿ ಇತರ ಪ್ರಯಾಣಿಕರೊಂದಿಗೆ ಯುವತಿ ಅಸಭ್ಯವಾಗಿ ವರ್ತಿಸಿದ್ದಾಳೆ. ಈಕೆಯ ವರ್ತನೆಯನ್ನು ಸಹ ಪ್ರಯಾಣಿಕರು ಸೆರೆ ಹಿಡಿದಿದ್ದಾರೆ. ಯುವತಿ ವಿರುದ್ಧ ಟಿಎಸ್‌ಆರ್‌ಟಿಸಿ ದೂರು ದಾಖಲಿಸಿದೆ. ಯುವತಿ ರಂಪಾಟದ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಂಗಳೂರಿನ ಮೆಸ್ಕಾಂ ಇಇ ಶಾಂತಕುಮಾರ್ ಮನೆ, ಕಚೇರಿಗೆ ಲೋಕಾಯುಕ್ತ ದಾಳಿ
ಮಂಗಳೂರು: ಆದಾಯಕ್ಕೂ ಮೀರಿ ಅಕ್ರಮ ಆಸ್ತಿಗಳಿಕೆ ಆರೋಪದಡಿ ಮಂಗಳೂರಿನ ಮೆಸ್ಕಾಂ ಇಇ ಶಾಂತಕುಮಾರ್ (Mescom EE Shantakumar) ಮನೆ ಹಾಗೂ ಕಚೇರಿಗೆ ಏಕಕಾಲದಲ್ಲಿ ಲೋಕಾಯುಕ್ತ ಅಧಿಕಾರಿಗಳು (Lokayukta Officer) ದಾಳಿ ನಡೆಸಿದ್ದಾರೆ.
ಮಂಗಳೂರಿನ ಅತ್ತಾವರ ವಿಭಾಗದದಲ್ಲಿ ಕಳೆದ ಐದೂವರೆ ವರ್ಷದಿಂದ ಇಲೆಕ್ಟ್ರಿಕಲ್ ಎಂಜಿನಿಯರ್ ಆಗಿರುವ ಶಾಂತಕುಮಾರ್ ಅಕ್ರಮ ಆಸ್ತಿಹೊಂದಿರೋ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ. ನಗರದ ಕೊಂಚಾಡಿಯಲ್ಲಿರುವ ಶಿವಪ್ರಸಾದ್ ಗೋಲ್ಡ್ ಅಪಾರ್ಟ್‍ಮೆಂಟ್ ನ ಮನೆಗೂ ಹಾಗೂ ಅತ್ತಾವರದಲ್ಲಿರುವ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಶಾಂತಕುಮಾರ್ ಅವರ ಬೆಂಗಳೂರಿನಲ್ಲಿರುವ ಮನೆಗೂ ಇದೇ ಸಂದರ್ಭದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಮೂರು ಕಡೆಗಳಲ್ಲೂ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.