ಭಾನುವಾರ, ಮೇ 5, 2024
ಪ್ರಜ್ವಲ್‌ ರೇವಣ್ಣರ ಅಶ್ಲೀಲ ವಿಡಿಯೋವನ್ನು ನಾನು ನೋಡುವ ಧೈರ್ಯ ಮಾಡಿಲ್ಲ :ನಿಖಿಲ್‌ ಕುಮಾರಸ್ವಾಮಿ-Onion price : ಈರುಳ್ಳಿ ದರ ಮತ್ತೆ ಏರಿಕೆಯಾಗುವ ಸಾಧ್ಯತೆ; ಕಾರಣವೇನು?-ಅಶ್ಲೀಲ ವಿಡಿಯೋ ಪ್ರಕರಣ; ದೇವೇಗೌಡರ ನಿವಾಸಿದಿಂದಲೇ ಹೆಚ್​ಡಿ ರೇವಣ್ಣ ಎಸ್ಐಟಿ ವಶಕ್ಕೆ..!-ಮಂಗಳೂರಿನ ಚುನಾವಣೆಯ ಡಲ್ ಪ್ರಚಾರದ ಮೂಲಕ ಹೆಣೆ ದ ಬಿಜೆಪಿ ತಂತ್ರಗಾರಿಕೆಯು ರಾಷ್ಟ್ರೀಯ ಕಾಂಗ್ರೆಸ್ ನ ದಾರಿ ತಪ್ಪಿಸಿತೇ?-ಚುನಾವಣಾ ಪ್ರಚಾರಕ್ಕೆ ಹಣವಿಲ್ಲವೆಂದು ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿ ಕಾಂಗ್ರೆಸ್​​ ಅಭ್ಯರ್ಥಿ..!-ಕೋವಿಶೀಲ್ಡ್​ ಪಡೆದವರು ಕೋಲ್ಡ್, ಐಸ್​ ಕ್ರೀಮ್ ಸೇವಿಸಬಾರದು ಎನ್ನುವುದು ಸುಳ್ಳು ಸುದ್ದಿ ಎಂದ ಆರೋಗ್ಯ ಇಲಾಖೆ.!-17 ಭಾರತೀಯರು ಸೇರಿದಂತೆ ಒಟ್ಟು 25 ಮಂದಿ ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಬಿಡುಗಡೆ ಮಾಡಿದ ಇರಾನ್!-ಕಾರ್ಕಳ : ನಾಲ್ಕು ತಿಂಗಳೊಳಗೆ ಪರುಶುರಾಮ ಥೀಂ ಪಾರ್ಕ್ ಕಾಮಗಾರಿ ಮುಗಿಸುವಂತೆ ಹೈಕೋರ್ಟ್ ಆದೇಶ..!-ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!-ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Hurricane Ian: ಫ್ಲೋರಿಡಾದಲ್ಲಿ ಇಯಾನ್ ಚಂಡಮಾರುತದ ರೌದ್ರಾವತಾರ; ಭಾರೀ ಭೂಕುಸಿತ, ವಿಮಾನ ಹಾರಾಟ ರದ್ದು, ಕೊಚ್ಚಿ ಹೋದ ಮನೆಗಳು

Twitter
Facebook
LinkedIn
WhatsApp
Hurricane Ian: ಫ್ಲೋರಿಡಾದಲ್ಲಿ ಇಯಾನ್ ಚಂಡಮಾರುತದ ರೌದ್ರಾವತಾರ; ಭಾರೀ ಭೂಕುಸಿತ, ವಿಮಾನ ಹಾರಾಟ ರದ್ದು, ಕೊಚ್ಚಿ ಹೋದ ಮನೆಗಳು

ಫ್ಲೋರಿಡಾ: ಕ್ಯೂಬಾದಲ್ಲಿ ರೌದ್ರಾವತಾರ ತೋರಿದ್ದ ಇಯಾನ್ ಚಂಡಮಾರುತ (Hurricane Ian) ಇದೀಗ ಅಮೆರಿಕಾದ ಫ್ಲೋರಿಡಾಗೆ (Florida) ಕಾಲಿಟ್ಟಿದೆ. ನಿರೀಕ್ಷೆಗಿಂತ ಹೆಚ್ಚು ಅನಾಹುತಗಳನ್ನು ಸೃಷ್ಟಿಸುತ್ತಿರುವ ಇಯಾನ್ ಚಂಡಮಾರುತದ ಅಬ್ಬರಕ್ಕೆ ಜನರು ತತ್ತರಿಸಿಹೋಗಿದ್ದಾರೆ. ಭಾರೀ ತೀವ್ರತೆಯ ಇಯಾನ್ ಚಂಡಮಾರುತ (Ian Cyclone) ಅಪ್ಪಳಿಸಿರುವುದರಿಂದ ಫ್ಲೋರಿಡಾದ ಆಡಳಿತ ಮಂಡಳಿ ತುರ್ತು ಕ್ರಮಗಳನ್ನು ಕೈಗೊಂಡಿದೆ. ಅಪಾಯದ ಸ್ಥಳಗಳಿಂದ 25 ಲಕ್ಷಕ್ಕೂ ಹೆಚ್ಚು ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ. ಬುಧವಾರ ಸಂಜೆಯೇ ಫ್ಲೋರಿಡಾಗೆ ಇಯಾನ್ ಚಂಡಮಾರುತ ಅಪ್ಪಳಿಸಿದ್ದು, ಕರಾವಳಿ ನಗರವಾದ ನೇಪಲ್ಸ್​ನಲ್ಲಿ ಭಾರೀ ಹಾನಿಯಾಗಿದೆ. ಕಾರುಗಳು, ರಸ್ತೆಗಳು ಸಂಪೂರ್ಣವಾಗಿ ಮುಳುಗಡೆಯಾಗಿವೆ. ಅಪಾಯಕಾರಿ ಇಯಾನ್ ಚಂಡಮಾರುತದಿಂದ ಮನೆಗಳು ಕೊಚ್ಚಿಕೊಂಡು ಹೋಗಿವೆ.

ಇಯಾನ್ ಚಂಡಮಾರುತದಿಂದ ಅಮೆರಿಕದಲ್ಲಿ ವಿಮಾನಗಳ ಹಾರಾಟವೂ ರದ್ದಾಗಿದೆ. ಸುಮಾರು 1,800 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ನೈಋತ್ಯ ಫ್ಲೋರಿಡಾಗೆ ಅಪ್ಪಳಿಸಿರುವ ಇಯಾನ್ ಚಂಡಮಾರುತದಿಂದ ಬೋಟ್ ಮುಳುಗಿ 20 ವಲಸಿಗರು ನಾಪತ್ತೆಯಾಗಿದ್ದಾರೆ. ಕರಾವಳಿ ನಗರವಾದ ನೇಪಲ್ಸ್‌ನಲ್ಲಿನ ಚಂಡಮಾರುತದ ಆಘಾತಕಾರಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಪ್ರವಾಹದ ನೀರು ಬೀಚ್‌ಫ್ರಂಟ್ ಮನೆಗಳಿಗೆ ನುಗ್ಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. 80,000ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಫೋರ್ಟ್ ಮೈಯರ್ಸ್‌ನ ಕೆಲವು ಪ್ರದೇಶಗಳು ನೀರಿನಿಂದ ಆವೃತವಾಗಿ ಸಮುದ್ರದಂತೆ ಕಾಣುತ್ತಿವೆ.

Hurricane Ian: ಫ್ಲೋರಿಡಾದಲ್ಲಿ ಇಯಾನ್ ಚಂಡಮಾರುತದ ರೌದ್ರಾವತಾರ; ಭಾರೀ ಭೂಕುಸಿತ, ವಿಮಾನ ಹಾರಾಟ ರದ್ದು, ಕೊಚ್ಚಿ ಹೋದ ಮನೆಗಳು

ಫ್ಲೋರಿಡಾದಾದ್ಯಂತ ಮತ್ತು ಆಗ್ನೇಯ ರಾಜ್ಯಗಳಾದ ಜಾರ್ಜಿಯಾ ಮತ್ತು ದಕ್ಷಿಣ ಕೆರೊಲಿನಾದಲ್ಲಿ ಇಯಾನ್ ಚಂಡಮಾರುತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಫ್ಲೋರಿಡಾದಲ್ಲಿ 3,200 ರಾಷ್ಟ್ರೀಯ ಕಾವಲು ಸಿಬ್ಬಂದಿಯನ್ನು ಕರೆಸಲಾಗಿದೆ. ಇನ್ನೂ 1,800 ಆಗಮಿಸುತ್ತಿದ್ದಾರೆ.

ಇಯಾನ್ ಚಂಡಮಾರುತದ ವೇಗ ದಿನದಿನವೂ ಏರಿಕೆ ಆಗುತ್ತಿದೆ. ಸೋಮವಾರ ಗಂಟೆಗೆ 160 ಕಿಮೀ ವೇಗದಲ್ಲಿದ್ದ ಇಯಾನ್ ಚಂಡಮಾರುತ ಕ್ಯೂಬಾ ಕಡೆ 130 ಕಿಮೀ ವೇಗದಲ್ಲಿ ಧಾವಿಸಿತ್ತು. ಆಗ ಅದರ ತೀವ್ರತೆ ಕೆಟಗರಿ 1 ಎಂದು ವರ್ಗೀಕರಿಸಲಾಗಿತ್ತು. ಈಗ ಫ್ಲೋರಿಡಾಕ್ಕೆ ಅಪ್ಪಳಿಸಿರುವ ಇಯಾನ್ ಚಂಡಮಾರುತ ಕೆಟಗರಿ 4ರಲ್ಲಿದೆ ಎನ್ನಲಾಗಿದೆ. ಈ ಚಂಡಮಾರುತದ ತೀವ್ರತೆ ಫ್ಲೋರಿಡಾದಲ್ಲಿ ಹೆಚ್ಚಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..! Twitter Facebook LinkedIn WhatsApp ಸುಬ್ರಮಣ್ಯ: 10 ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ಸಿಡಿಲು ಬಡಿದು ಸಾವನ್ನಪ್ಪಿರುವ

ಅಂಕಣ