Oppo F21 Pro ಮೇಲೆ ಭರ್ಜರಿ ಡಿಸ್ಕೌಂಟ್, ಏನಿದರ ವೈಶಿಷ್ಟ್ಯ
ಕ್ಯಾಮೆರಾ ಪ್ರಿಯರಿಗೆ ಹೆಚ್ಚು ಇಷ್ಟವಾಗುವ ಫೋನನ್ನು ಪರಿಚಯಿಸುವ ಪ್ರಸಿದ್ಧOppo F21 Pro ಒಪ್ಪೋ ಕಳೆದ ವರ್ಷ ಒಪ್ಪೋ ಎಫ್21 ಪ್ರೊ (Oppo F21 Pro) ಎಂಬ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿತ್ತು.
ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರುವ ಈ ಫೋನಿನ ಹಿಂಭಾಗದಲ್ಲಿ ಆರ್ಬಿಟ್ ಲೈಟ್ ಒಳಗೊಂಡಿದೆ. ಆಕರ್ಷಕ ಡಿಸೈನ್ ಕೂಡ ಈ ಫೋನಿನ ಪ್ರಮುಖ ಹೈಲೇಟ್. ನಾನಾ ವಿಚಾರಗಳಿಂದ ಸದ್ದು ಮಾಡಿದ್ದ ಈ ಸ್ಮಾರ್ಟ್‌ಫೋನ್ ಈಗ ಭರ್ಜರಿ ಡಿಸ್ಕೌಂಟ್ನಲ್ಲಿ ಸೇಲ್ ಕಾಣುತ್ತಿದೆ Oppo F21 Pro.
ಭಾರತದಲ್ಲಿ ಒಪ್ಪೋ F21 ಪ್ರೊ ಸ್ಮಾರ್ಟ್‌ಫೋನ್ 8GB RAM ಮತ್ತು 128GB ಸ್ಟೋರೇಜ್ ರೂಪಾಂತರದಲ್ಲಿ ಬಿಡುಗಡೆ ಆಗಿತ್ತು. ಇದಕ್ಕೆ 27,999 ರೂ. ನಿಗದಿ ಮಾಡಲಾಗಿತ್ತು. ಆದರೀಗ ಈ ಫೋನಿನ ಮೇಲೆ 25% ರಿಯಾಯಿತಿ ನೀಡಲಾಗಿದೆ.
ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ನಲ್ಲಿ ಒಪ್ಪೋ F21 ಪ್ರೊ 20,999 ರೂ. ಗಳಿಗೆ ಲಭ್ಯವಿದೆ. ಇದರ ಜೊತೆಗೆ ಕೆಲ ಬ್ಯಾಂಕಿಂಗ್ ಆಫರ್ ಕೂಡ ನೀಡಲಾಗಿದೆ. ಈ ಫೋನ್ ಕಾಸ್ಮಿಕ್ ಬ್ಲ್ಯಾಕ್ ಮತ್ತು ಸನ್‌ಸೆಟ್ ಆರೆಂಜ್ ಬಣ್ಣಗಳಲ್ಲಿ ಬರುತ್ತದೆ.
ಒಪ್ಪೋ F21 ಪ್ರೊ ಸ್ಮಾರ್ಟ್‌ಫೋನ್ 1,080×2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.43 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಮತ್ತು 180Hz ಟಚ್ ಸ್ಯಾಂಪ್ಲಿಂಗ್ ರೇಟ್ನಿಂದ ಕೂಡಿದೆ.
ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 12 ನಲ್ಲಿ ಕಲರ್ OS 12.1 ಜೊತೆಗೆ ರನ್ ಆಗುತ್ತದೆ.
ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ Sony IMX709 ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು,33W SuperVOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi, ಬ್ಲೂಟೂತ್, GPS- AGPS ಮತ್ತು USB ಟೈಪ್-C ಪೋರ್ಟ್ ಸೇರಿವೆ.
Tech Tips: ಸ್ಮಾರ್ಟ್‌ಫೋನ್ ಬ್ಯಾಟರಿ ದೀರ್ಘ ಕಾಲದವರೆಗೆ ಬಾಳಿಕೆ ಬರಲು ಏನು ಮಾಡಬೇಕು?: ಇಲ್ಲಿದೆ ಟಿಪ್ಸ್
ಇಂದು 5000mAh ನಿಂದ ಹಿಡಿದು 7000mAh ವರೆಗಿನ ಬ್ಯಾಟರಿಯ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಯಲ್ಲಿದೆ. ಇವು ದೀರ್ಘ ಸಮಯ ಚಾರ್ಜ್ ಬರುತ್ತದೆ. ಆದರೆ, ಈ ಬ್ಯಾಟರಿಯನ್ನು ಜೋಪಾನವಾಗಿ ಕಾಪಾಡಿಕೊಳ್ಳದಿದ್ದರೆ ಕೆಲವೇ ತಿಂಗಳುಗಳಲ್ಲಿ ಹಾಳಾಗುವ ಸಾಧ್ಯತೆ ಇರುತ್ತದೆ.
ಈಗ ಬಿಡುಗಡೆ ಆಗುವ ಹೆಚ್ಚಿನ ಸ್ಮಾರ್ಟ್ಫೋನ್ಗಳು ಫಾಸ್ಟ್ ಚಾರ್ಜರ್ ಟೆಕ್ನಾಲಜಿ ಹೊಂದಿರುತ್ತದೆ. ಇದರಿಂದ ಕೆಲವೇ ನಿಮಿಷಗಳಲ್ಲಿ ಬ್ಯಾಟರಿ ಫುಲ್ ಆಗುತ್ತದೆ ನಿಜ. ಆದರೆ, ಇದನ್ನು ಸರಿಯಾಗಿ ಉಪಚರಿಸಿಲ್ಲ ಎಂದಾದರೆ ಅಷ್ಟೇ ವೇಗವಾಗಿ ಬ್ಯಾಟರಿ ಕೆಟ್ಟ ಹೋಗುತ್ತದೆ. ಹಾಗಾದರೆ ಸ್ಮಾರ್ಟ್‌ಫೋನ್ ಬ್ಯಾಟರಿ ದೀರ್ಘ ಕಾಲದವರೆಗೆ ಬಾಳಿಕೆ ಬರಲು ಏನು ಮಾಡಬೇಕು?.
ನಿಮ್ಮ ಮೊಬೈಲ್ನೊಂದಿಗೆ ನೀಡಿರುವ ಚಾರ್ಜರ್ ನಿಂದಲೇ ಫೋನ್ ಅನ್ನು ಚಾರ್ಜ್ ಮಾಡಿರಿ. ಸದ್ಯ ಎಲ್ಲ ಮೊಬೈಲ್ಗಳು ಯುಎಸ್‌ಬಿ ಕೇಬಲ್ ನಿಂದಲೇ ಚಾರ್ಜ್ ಆಗಲಿದೆ. ಹಾಗೆಂದು ಅದನ್ನು ಕಂಪ್ಯೂಟರ್ಗೆ ಹಾಕಿ ಇಲ್ಲವೇ ಬೇರೆ ಕಂಪನಿಗಳ ಚಾರ್ಜರ್ ಬಳಸಿ ಚಾರ್ಜ್ ಮಾಡಿದರೆ ಸಮಸ್ಯೆ ಎದುರಾಗುತ್ತದೆ. ಹಾಗಾಗಿ ಕಂಪನಿ ನೀಡಿರುವ ಚಾರ್ಜರ್ ನಿಂದಲೇ ಚಾರ್ಜ್ ಮಾಡಿ. ಆಗ ಬ್ಯಾಟರಿ ಕೂಡ ದೀರ್ಘ ಕಾಲದ ವರೆಗೆ ಬಾಳಿಕೆ ಬರುತ್ತದೆ.
ಮೊಬೈಲ್ ಓವರ್ಹೀಟ್ ಮಾಡುವುದು ಕೂಡ ಬ್ಯಾಟರಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ರ್ಯಾಮ್ ಕಡಿಮೆ ಇದ್ದಾಗ ಅತಿಯಾಗಿ ಗೇಮ್ ಆಡಿದರೆ ಮೊಬೈಲ್ ಹೀಟ್ ಆಗುತ್ತದೆ. ಕೂಡಲೇ ಗೇಮ್ ಆಡುವುದನ್ನು ನಿಲ್ಲಿಸಿ. ಮೊಬೈಲ್ ಕೂಲ್ ಆಗುವವರೆಗೂ ಬಳಕೆ ಮಾಡಬೇಡಿ.
ಕಾರು ಅಥವಾ ಬೈಕುಗಳಲ್ಲಿರುವ ಚಾರ್ಜರ್‌ಗಳ ಮೂಲಕವೂ ಫೋನ್ ಬ್ಯಾಟರಿ ರೀಚಾರ್ಜ್ ಮಾಡುವ ಅಭ್ಯಾಸವನ್ನು ಸಾಧ್ಯವಾದಷ್ಟು ತಪ್ಪಿಸಿ. ಯಾಕೆಂದರೆ, ಅದರಿಂದ ಬರುವ ಅಧಿಕ ಪ್ರಮಾಣದ ವಿದ್ಯುತ್ ಪ್ರವಾಹವು ಫೋನ್‌ನ ಬ್ಯಾಟರಿ ಮೇಲೆ ಪರಿಣಾಮ ಬೀರುತ್ತದೆ.
ಕೆಲವರು ಮೊಬೈಲ್ ಅನ್ನು ರಾತ್ರಿ ಇಡೀ ಚಾರ್ಜ್‌ಗೆ ಹಾಕಿ ಬಿಟ್ಟಿರುತ್ತಾರೆ. ಈ ರೀತಿ ಮಾಡುವುದು ಅಪಾಯಕಾರಿ. ಇದರಿಂದ ಬ್ಯಾಟರಿಯು ದೀರ್ಘಕಾಲ ಬಾಳಿಕೆ ಬರುವುದಿಲ್ಲ. ಅತಿಯಾಗಿ ಚಾರ್ಜ್ ಮಾಡುವುದೂ ಬೇಡ. ಶೇ 90 ರಷ್ಟು ಚಾರ್ಜ್ ಆದ ಕೂಡಲೇ ಚಾರ್ಜರ್ ಆಫ್ ಮಾಡಿ.
ಮಾರುಕಟ್ಟೆಯಲ್ಲಿ ವೈಫೈ, ಬ್ಲ್ಯೂಟೂತ್ ಮೂಲಕ ಚಾರ್ಜ್ ಮಾಡಿಕೊಳ್ಳುವ ವೈರ್ ಲೈಸ್ ಚಾರ್ಜರ್ ಲಭ್ಯವಿದ್ದು, ಸಾಧ್ಯವಾದಷ್ಟು ಮಟ್ಟಿಗೆ ಇವುಗಳಿಂದ ದೂರವಿದ್ದರೆ ಮೊಬೈಲ್ ಬ್ಯಾಟರಿ ಆರೋಗ್ಯ ಚೆನ್ನಾಗಿರುತ್ತದೆ.
ಬ್ಯಾಟರಿ ಫುಲ್ ಚಾರ್ಜ್ ಮಾಡುವುದು ಎಷ್ಟು ತಪ್ಪೋ ಅದೇ ರೀತಿ ಬ್ಯಾಟರಿ ಲೋ ಆದಾಗಲೂ ಬ್ಯಾಟರಿ ಮೇಲೆ ಒತ್ತಡ ಬೀಳುತ್ತದೆ. ಹೀಗಾಗಿ ಮೊಬೈಲ್ 20 ಪ್ರತಿಶತ ಚಾರ್ಜ್‌ಗೆ ಬರುತ್ತಿದ್ದಂತೆಯೇ 80 ಪ್ರತಿಶತ ಚಾರ್ಜ್ ಆಗುವವರೆಗೆ ಚಾರ್ಜ್ ಮಾಡಿ. ಹೀಗೆ ಮಾಡಿದರೆ ಬ್ಯಾಟರಿ ದೀರ್ಘ ಕಾಲದವರೆಗೆ ಬಾಳಿಕೆ ಬರುತ್ತದೆ.