ಹುಬ್ಬಳ್ಳಿ ಗಲಭೆ ಕೇಸ್: ಶ್ರೀಕಾಂತ್ ಪೂಜಾರಿಗೆ ಷರತ್ತುಬದ್ಧ ಜಾಮೀನು ಮಂಜೂರು...!
ಹುಬ್ಬಳ್ಳಿ, ಜನವರಿ 05: ರಾಮಜನ್ಮಭೂಮಿ ಹೋರಾಟದ ಕೇಸ್ನಲ್ಲಿ ಆರೋಪಿಯಾಗಿರುವ ಕರಸೇವಕ ಶ್ರೀಕಾಂತ ಪೂಜಾರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ. ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಿಂದ ಷರತ್ತುಬದ್ದ ಜಾಮೀನು ಮಂಜೂರು ಮಾಡಲಾಗಿದೆ. 1 ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಿಂದ ತೀರ್ಪು ಬಂದ ನಂತರ ದಾಖಲೆಗಳನ್ನು 5 ಮತ್ತು 3ನೇ ಜೆಎಮ್ಎಫ್‌ಸಿ ನ್ಯಾಯಾಲಕ್ಕೆ ನೀಡಬೇಕು.
ತೀರ್ಪು ಆದೇಶವನ್ನ ಈ ಎರಡೂ ಕೋರ್ಟ್‌ಗಳಿಗೆ ತಲುಪಿಸಬೇಕು. ಬಳಿಕ ಸಂಜೆ 6 ಗಂಟೆಯೊಳಗೆ ತೀರ್ಪಿನ ಆದೇಶ ಜೈಲು ಅಧಿಕಾರಿಗಳ ಕೈ ಸೇರಬೇಕು. ಸಮಯದ ಅಭಾವದಿಂದ ತೀರ್ಪು ಆದೇಶ ಕೈ ಸೇರುವುದು ತಡವಾದರೆ ಶ್ರೀಕಾಂತಗೆ ಇಂದು ಬಿಡುಗಡೆ ಭಾಗ್ಯವಿಲ್ಲ ಎನ್ನಲಾಗುತ್ತಿದೆ.
ಶ್ರೀಕಾಂತ್ ಪೂಜಾರಿ ಮೇಲೆ 16 ಕೇಸ್ ಇತ್ತು, ಈಗಲೂ ಇದೆ ಎಂದು ನಾವು ಹೇಳ್ತಿಲ್ಲ: ಪರಮೇಶ್ವರ್
ರಾಮನಗರ: ಕರಸೇವಕ ಶ್ರೀಕಾಂತ್ (Shrikanth Poojary) ಮೇಲೆ 16 ಕೇಸ್ ಇತ್ತು, ಈಗಲೂ ಇದೆ ಎಂದು ನಾವು ಹೇಳ್ತಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ (G. Parameshwar) ಹೇಳಿದ್ದಾರೆ.
16 ಕೇಸ್ ಗಳಲ್ಲಿ 15 ಕೇಸ್ ಖುಲಾಸೆ ವಿಚಾರ ಸಂಬಂಧ ಮಾಗಡಿಯಲ್ಲಿ ಪ್ರತಿಕ್ರಿಯೆ ನೀಡಿದ ಗೃಹ ಸಚಿವರು, ಶ್ರೀಕಾಂತ್ ಪೂಜಾರಿ ಮೇಲೆ 16 ಕೇಸ್ ಇತ್ತು. ಆದರೆ ಈಗಲೂ 16 ಕೇಸ್ ಇದೆ ಅಂತ ಹೇಳಿಲ್ಲ. 16 ಕೇಸ್ ನಲ್ಲಿ ಕೆಲವು ಖುಲಾಸೆ ಆಗಿರಬಹುದು ಎಂದರು.
ಶ್ರೀಕಾಂತ್ ಪೂಜಾರಿ 16 ಪ್ರಕರಣಗಳಲ್ಲಿ ಭಾಗಿಯಾಗಿದ್ದು ಸತ್ಯ, ಅದರ ಬಗ್ಗೆ ದಾಖಲಾತಿ ಇದೆ. ಇಂತಹ ವ್ಯಕ್ತಿಗೆ ನೀವು ಇಷ್ಟೋಂದು ಹೋರಾಟ ಮಾಡುತ್ತಿದ್ದೀರಿ. ಅನನೊಬ್ಬನೇನಾ ಹಿಂದೂ. ಹಳೆಯ 26 ಕೇಸ್ ಗಳನ್ನ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಅದರಲ್ಲಿ ಬೇರೆ ಹಿಂದೂಗಳು ಕೂಡಾ ಇದ್ದಾರೆ. ಅವರ ಬಗ್ಗೆ ಯಾಕೆ ಹೋರಾಟ ಮಾಡ್ತಿಲ್ಲ. ಇವನೊಬ್ಬ ಶ್ರೀಕಾಂತ್ ಪೂಜಾರಿ ಅನ್ನುವ ವ್ಯಕ್ತಿ ಬಗ್ಗೆ ಇಷ್ಟೊಂದು ಹೋರಾಟ ಯಾಕೆ.? ಇದು ರಾಜಕೀಯ ಉದ್ದೇಶದಿಂದ ಮಾಡುತ್ತಿರುವ ಹೋರಾಟ ಎಂದು ವಾಗ್ದಾಳಿ ನಡೆಸಿದರು.
ನಾವು ಕೂಡಾ ರಾಮಭಕ್ತರು ನಮ್ಮನ್ನೂ ಬಂಧನ ಮಾಡಿ ಎಂದು ಬಿಜೆಪಿ ನಾಯಕರ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಅವರ ಮೇಲೆ ಕೇಸ್ ಇದ್ರೆ ಕ್ರಮ ತೆಗೆದುಕೊಳ್ತಾರೆ. ಅವರನನ್ನೇನು ಬಿಟ್ಟು ಬಿಡೋದಿಲ್ಲ. ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ಅಶೋಕ್ ಗೂ ಒಂದೇ ಕಾನೂನು, ಪರಮೇಶ್ವರ್ ಗೂ ಒಂದೇ ಕಾನೂನು. ತಪ್ಪಿತಸ್ಥರ ವಿರುದ್ಧ ಕ್ರಮ ಆಗಿಯೇ ಆಗುತ್ತೆ ಎಂದು ಜಿ.ಪರಮೇಶ್ವರ್ ತಿಳಿಸಿದ್ದಾರೆ.