ಮನೆಯ ಬಾವಿಯ ಕಸ ಸ್ವಚ್ಛಗೊಳಿಸುವಾಗ ಕಾಲು ಜಾರಿ ಬಿದ್ದು ಸಾವು
ಕೋಟ: ಮರದ ಕೆಲಸ ನಿರ್ವಹಿಸುವ ಕಾರ್ಮಿಕನೋರ್ವ ಮನೆಯ ಬಾವಿಯ ಕಸ ಸ್ವಚ್ಛಗೊಳಿಸುವ ಸಂದರ್ಭ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಹಳ್ಳಾಡಿ ಕೆಳಮನೆಯಲ್ಲಿ ಆ. 27ರಂದು ಸಂಭವಿಸಿದೆ.
ಇಲ್ಲಿನ ನಿವಾಸಿ ಗಣೇಶ ಆಚಾರಿ (40) ಮೃತರು. ಬೆಳಗ್ಗೆ ಮನೆಯ ಬಾವಿ ಸ್ವಚ್ಛಗೊಳಿಸಲು ತೆರಳಿದ್ದು, ಸಾಕಷ್ಟು ಹೊತ್ತು ಕಳೆದರೂ ವಾಪಸಾಗದ ಕಾರಣ ಪತ್ನಿ ಬಾವಿಯ ಸಮೀಪ ಹೋಗಿ ನೋಡುವಾಗ ಬಾವಿಗೆ ಬಿದ್ದಿರುವುದು ಕಂಡು ಬಂದಿತ್ತು.
ಅನಂತರ ಅಗ್ನಿಶಾಮಕ ದಳದ ಸಹಾಯದಿಂದ ದೇಹವನ್ನು ಮೇಲಕ್ಕೆತ್ತಿ ನೋಡಿದಾಗ ಗಣೇಶ್ ಆಚಾರಿ ಮೃತಪತ್ತಿಟ್ಟಿದ್ದರು. ಈ ಕುರಿತು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಟಾಕಿ ಸಂಗ್ರಹ ಘಟಕಕ್ಕೆ ಬೆಂಕಿ – 1.5 ಕೋಟಿ ರೂ. ಮೌಲ್ಯದ ಪಟಾಕಿ ಭಸ್ಮ
ಹಾವೇರಿ: ವೆಲ್ಡಿಂಗ್ ಮಾಡುತ್ತಿದ್ದ ವೇಳೆ ಪಟಾಕಿ ಅಂಗಡಿಗೆ ಬೆಂಕಿ (Fire) ತಗುಲಿದ ಘಟನೆ ಹಾವೇರಿಯ (Haveri) ಆಲದಕಟ್ಟೆ ಗ್ರಾಮದಲ್ಲಿ ನಡೆದಿದೆ. ಪರಿಣಾಮ 1.5 ಕೋಟಿ ರೂ. ಮೌಲ್ಯದ ಪಟಾಕಿ ಬೆಂಕಿಗೆ ಆಹುತಿಯಾಗಿದೆ.
ಘಟನೆಯ ವೇಳೆ ವೆಲ್ಡಿಂಗ್ ಮಾಡುತ್ತಿದ್ದ ಕಾರ್ಮಿಕ ಹರಿರಾಮ್ (32) ಎಂಬುವವರು ಕೆಳಗೆ ಬಿದ್ದು ಬೆನ್ನಿಗೆ ಪೆಟ್ಟಾಗಿದೆ. ಅಲ್ಲದೇ ನಾಲ್ಕು ಬೈಕ್‍ಗಳು ಸುಟ್ಟು ಹೋಗಿವೆ. ಸ್ಥಳಕ್ಕೆ ಆಗಮಿಸಿರುವ ಎರಡು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಅಲ್ಲದೇ ಗ್ರಾಮೀಣ ಪೊಲೀಸರು (Police) ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಸತತ ಮೂರು ಗಂಟೆಯಿಂದ ಬೆಂಕಿ ನಂದಿಸಲು ಪ್ರಯತ್ನಿಸಲಾಗುತ್ತಿದೆ. ತೀವ್ರ ಪಟಾಕಿ ಸದ್ದಿನಿಂದ ಜನ ಗಾಬರಿಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ರಘುನಂದಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣಪತಿ ಹಾಗೂ ದೀಪಾವಳಿ ಹಬ್ಬದ ಸಲುವಾಗಿ ಶಿವಕಾಶಿಯಿಂದ ತರಿಸಿದ ಪಟಾಕಿಗಳನ್ನು ಸಂಗ್ರಹಿಸಲಾಗಿತ್ತು. ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಈ ವೇಳೆ ಓರ್ವ ಕಾರ್ಮಿಕನಿಗೆ ಗಾಯವಾಗಿದೆ. ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.