ಮನೆ ಕುಸಿದು ಒಂದೇ ಕುಟುಂಬದ ನಾಲ್ವರ ಸಾವು

ಲಖನೌ: ಉತ್ತರ ಭಾರತದಲ್ಲಿ ಭಾರಿ ಮಳೆಯಾಗುತ್ತಿದ್ದು, ವಿವಿಧ ರಾಜ್ಯಗಳಲ್ಲಿ ಶಿಥಿಲಗೊಂಡ ಕಟ್ಟಡಗಳು ಧರೆಗೆ ಉರುಳುತ್ತಿವೆ.
ಇದೀಗ ಉತ್ತರ ಪ್ರದೇಶದ (Uttar Pradesh) ಬುಲಂದ್ಶಹರ್ ಜಿಲ್ಲೆಯ ನರಸೇನಾ ಪೊಲೀಸ್ ಠಾಣಾ ವ್ಯಾಪ್ತಿಯ ಮಾವಾಯಿ ಗ್ರಾಮದಲ್ಲಿ ಮನೆ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.
ನಿರಂತರ ಮಳೆಯಿಂದ ಶಿಥಿಲಗೊಂಡಿದ್ದ ಮನೆ ಮೇಲ್ಛಾವಣಿ ಕುಸಿದು (Roof Collapse) ದುರಂತ ಸಂಭವಿಸಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ನರಸೇನಾ ಪೊಲೀಸರು ಅವಶೇಷಗಳಡಿ ಸಿಲುಕಿದ್ದ ಶವಗಳನ್ನು ಹೊರತೆಗೆದಿದ್ದಾರೆ.
ಮಗುಚಿ ಬಿತ್ತು ಟೊಮೆಟೋ ತುಂಬಿದ್ದ ಲಾರಿ – ಕಳ್ಳರ ಹಾವಳಿ ತಡೆಯಲು ಪೊಲೀಸರಿಂದ ಬಂದೋಬಸ್ತ್
ಕೋಲಾರ: ಕಳೆದ ಒಂದು ತಿಂಗಳಿನಿಂದ ಟೊಮೆಟೋ ದರ ರಾಕೆಟ್ ವೇಗದಲ್ಲಿ ಗಗನಕ್ಕೇರಿದ್ದು ಇದು ರೈತರ ಪಾಲಿಗೆ ವರದಾನವಾಗಿದೆ. ಪ್ರತಿ ಬಾರಿ ಟೊಮೆಟೋಗೆ ಸೂಕ್ತ ಬೆಲೆ ಇಲ್ಲದೇ ಟ್ರಾಕ್ಟರ್‌ನಲ್ಲಿ ತುಂಬಿಕೊಂಡು ಬಂದು ರಸ್ತೆಗೆ ಸುರಿಯುತ್ತಿದ್ದ ರೈತರು, ಈ ಬಾರಿ ಟೊಮೆಟೋ ಬೆಳೆಯಲ್ಲಿ ಭರ್ಜರಿ ಲಾಭ ಕಾಣುತ್ತಿದ್ದಾರೆ.
ಚಿನ್ನದ ಬೆಲೆ ಬಂದಿರುವುದರಿಂದ ಟೊಮೆಟೋ ಕಳ್ಳರ ಹಾವಳಿ ಹೆಚ್ಚಾಗಿದೆ. ಇದರ ನಡುವೆ ಟೊಮೆಟೋ ತುಂಬಿಕೊಂಡು ಕೋಲಾರದಿಂದ ದೆಹಲಿಗೆ ತೆರಳುತ್ತಿದ್ದ ಲಾರಿ ತೆಲಂಗಾಣದಲ್ಲಿ ಪಲ್ಟಿಯಾಗಿದೆ. ಹೀಗಾಗಿ ಬಿದ್ದಿರುವ ಟೊಮೆಟೋ ಲಾರಿಗೆ ಪೊಲೀಸರು ರಕ್ಷಣೆ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೋ ತುಂಬಿಸಿಕೊಂಡು ದೆಹಲಿಗೆ ತೆರಳುತ್ತಿದ್ದ ಲಾರಿ ಇದಾಗಿದ್ದು, ತೆಲಂಗಾಣ ರಾಜ್ಯದ ಆದಿಲ್ ಬಾದ್ ಜಿಲ್ಲೆಯಲ್ಲಿ ಮುಗುಚಿ ಬಿದ್ದಿದೆ. ಇದರಿಂದ ಟೊಮೆಟೋ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಟೊಮೆಟೋ ಕಳ್ಳರಿಂದ ರಕ್ಷಣೆ ನೀಡಲು ಮೂವರು ಪೊಲೀಸರನ್ನು ತೆಲಂಗಾಣ ಪೊಲೀಸ್ ಇಲಾಖೆ ನಿಯೋಜಿಸಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದೆ.