- ರಾಜ್ಯ
- 9:32 ಫೂರ್ವಾಹ್ನ
- ಅಕ್ಟೋಬರ್ 18, 2023
ಭೀಕರ ಅಪಘಾತ: ರಸ್ತೆ ಬದಿ ಕುಳಿತಿದ್ದವರ ಮೇಲೆ ಹರಿದ ವಾಹನ, ನಾಲ್ವರು ಯುವಕರ ದುರ್ಮರಣ

ವಿಜಯಪುರ(ಅ.18): ಟ್ರಕ್ ಬೈಲ್ ಬಳಿಯ ಸರ್ವೀಸ್ ರಸ್ತೆಯ ಡಿವೈಡರ್ ಮೇಲೆ ಕುಳಿತಿದ್ದ ನಾಲ್ವರ ಮೇಲೆ ಅಪರಿಚಿತ ವಾಹನವೊಂದು ಹರಿದ ಪರಿಣಾಮ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 50 ರಲ್ಲಿನ ಟೋಲ್ ಗೇಟ್ ಬಳಿಯ ಟ್ರಕ್ ಬೈಲೈನ್ ಬಳಿ ನಡೆದಿದೆ.
ಮೃತರನ್ನ ಶಿವಾನಂದ ಚೌಧರಿ (25), ಸುನೀಲ ಖಾನಾಪೂರ(26), ಈರಣ್ಣ ಕೋಲಾರ (26), ಪ್ರವೀಣ ಪಾಟೀಲ್ (30) ಎಂದು ಗುರುತಿಸಲಾಗಿದೆ. ಎಲ್ಲರೂ ವಿಜಯಪುರ ನಗರದ ವಜ್ರ ಹನುಮಾನ ನಗರದ ವಾಸಿಗಳಾಗಿದ್ದಾರೆ.
ಅಪರಿಚಿತ ವಾಹನ ಎರಡು ಬೈಕ್ ಮೇಲೂ ಹರಿದು ಪರಾರಿಯಾಗಿದೆ. ಎರಡೂ ಬೈಕ್‌ಗಳು ಜಖಂ ಆಗಿವೆ. KA28 EZ 7126 ಹಾಗೂ KA28 W 9952 ನಂಬರಿನ ಪಲ್ಸರ್ ಹಾಗೂ ಸಿಬಿಝಡ್ ಬೈಕ್‌ಗಳಾಗಿವೆ. ಸ್ಥಳೀಯರ ಮಾಹಿತಿ ಪ್ರಕಾರ MH12 QW 8521 ನಂಬರಿನ ಲಾರಿ ಗುದ್ದಿ ಪರಾರಿಯಾಗಿದೆ.
ಸ್ಥಳಕ್ಕೆ ವಿಜಯಪುರ ಗ್ರಾಮೀಣ ವಿಭಾಗದ ಡಿವೈಎಸ್ಪಿ ಗಿರಿಮಲ್ಲ ತಳಕಟ್ಟಿ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತೊಂದು ಪಟಾಕಿ ದುರಂತ, ಫ್ಯಾಕ್ಟರಿ ಸ್ಫೋಟದಲ್ಲಿ 9 ಮಹಿಳೆಯರು ಸೇರಿ 11 ಮಂದಿ ಮೃತ!
ಚೆನ್ನೈ(ಅ.17) ಅತ್ತಿಬೆಲೆ ಪಟಾಕಿ ದರುಂತದ ಬೆನ್ನಲ್ಲೇ ಇದೀಗ ತಮಿಳುನಾಡಿನ ಶಿವಾಕಾಶಿಯಲ್ಲಿ ಭೀಕರ ದುರಂತ ನಡೆದಿದೆ. 2 ಪಾಟಕಿ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿದೆ. ಪರಿಣಾಮ ಫ್ಯಾಕ್ಟರಿಯಲ್ಲಿದ್ದ 9 ಮಹಿಳೆಯರು ಸೇರಿ 11 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಪಟಾಕಿ ಮಾದರಿಯನ್ನು ಪರೀಕ್ಷಿಸುವ ವೇಳೆ ಸ್ಫೋಟ ಸಂಭವಿಸಿದೆ. ಭೀಕರ ಸ್ಫೋಟದಲ್ಲಿ ಹಲವರು ಗಾಯಗೊಂಡಿದ್ದಾರೆ. ಪಟಾಕಿ ದಸ್ತಾನು, ಮದ್ದು ತುಂಬಿದ ದಾಸ್ತಾನು ಸ್ಫೋಟಗೊಂಡಿದೆ.
ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಧಾವಿಸಿದ್ದು ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ. ಇತ್ತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಎರಡೂ ಘಟಕಗಳು ಸರ್ಕಾರದಿಂದ ಪರವಾನಗೆ ಪಡೆದಿರುವುದು ಖಚಿತವಾಗಿದೆ. ಅನಧಿಕೃತ ದಾಸ್ತಾನು, ಹೆಚ್ಚುವರಿ ದಾಸ್ತಾನು ಕುರಿತು ತನಿಖೆ ನಡೆಯುತ್ತಿದೆ. ಇನ್ನು ಪಟಾಕಿ ಘಟಕಗಳು ಹೊಂದಿರಬೇಕಾದ ಸುರಕ್ಷತಾ ಮಾನದಂಡ ಪಾಲಿಸಲಾಗಿದೆಯೇ ಅನ್ನೋ ಕುರಿತು ತನಿಖೆ ನಡೆಯುತ್ತಿದೆ.
ಘಟನೆಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಮೃತರ ಕುಟುಂಬಕ್ಕೆ ತಲಾ 3 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಇನ್ನು ಗಾಯಾಳುಗಳಿಗೆ ಉತ್ತಮ ಚಿಕಿತ್ಸೆಗೆ ಸೂಚಿಸಿದ್ದಾರೆ. ಇದೇ ವೇಳೆ ತಮಿಳುನಾಡಿನ ಪಟಾಕಿ ಘಟಕದಲ್ಲಿನ ಸುರಕ್ಷತೆ ಕುರಿತು ಪರಿಶೀಲಿಸಲು ಸೂಚಿಸಿದ್ದಾರೆ. ಅನಧಿಕೃತ ದಾಸ್ತಾನು, ಅಕ್ರಮ ದಾಸ್ತನು ಕುರಿತು ಪರಿಶೀಲಿಸಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಸುರಕ್ಷತೆಗೆ ಮೊದಲ ಆದ್ಯತೆ ನೀಡುವಂತೆ ಸೂಚಿಸಿದ್ದಾರೆ.