- ಸಿನೆಮಾ
- 9:32 ಫೂರ್ವಾಹ್ನ
- ನವೆಂಬರ್ 8, 2023
ದಾಂಪತ್ಯ ಜೀವನದಲ್ಲಿ ಬೇರೆ ಆದ ಹನಿ ಸಿಂಗ್ - ಶಾಲಿನಿ ; ಕೌಟುಂಬಿಕ ದೌರ್ಜನ್ಯ ಕೇಸ್ ಹಿಂಪಡೆದ ಗಾಯಕನ ಪತ್ನಿ..!

ಹನಿ ಸಿಂಗ್ (Honey Singh) ಹಾಗೂ ಅವರ ಪತ್ನಿ ಶಾಲಿನಿ ತಲ್ವಾರ್ ಅಧಿಕೃತವಾಗಿ ಬೇರೆ ಆಗಿದ್ದಾರೆ. ಈ ಮೂಲಕ ಸುಮಾರು 13 ವರ್ಷಗಳ ದಾಂಪತ್ಯ ಜೀವನ ಅಂತ್ಯವಾಗಿದೆ. ಮಂಗಳವಾರ (ನವೆಂಬರ್ 7) ದೆಹಲಿ ಫ್ಯಾಮಿಲಿ ಕೋರ್ಟ್ ಈ ದಂಪತಿಗೆ ಬೇರೆ ಆಗಲು ಕಾನೂನಾತ್ಮಕವಾಗಿ ಅನುಮತಿ ನೀಡಿದೆ. ವಿಚ್ಛೇದನ ಸಿಕ್ಕ ಬೆನ್ನಲ್ಲೇ ಶಾಲಿನಿ ಅವರು ಹನಿ ಸಿಂಗ್ ಮೇಲೆ ಹಾಕಿದ್ದ ಕೌಟುಂಬಿಕ ಹಿಂಸೆ ಪ್ರಕರಣವನ್ನು ಹಿಂಪಡೆದಿದ್ದಾರೆ.
ಹನಿ ಸಿಂಗ್ ಹಾಗೂ ಶಾಲಿನಿ ತಲ್ವಾರ್ 2011ರ ಜನವರಿಯಲ್ಲಿ ಮದುವೆ ಆದರು. ಮದುವೆ ಆದ 11 ವರ್ಷಗಳ ಬಳಿಕ ಇವರ ಮಧ್ಯೆ ಕಿತ್ತಾಟ ಶುರುವಾಯಿತು. 2022ರ ಸೆಪ್ಟೆಂಬರ್ ತಿಂಗಳಲ್ಲಿ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು. ಕೋರ್ಟ್ ಇಬ್ಬರಿಗೂ ಯೋಚಿಸಲು, ಹೊಂದಾಣಿಕೆ ಮಾಡಿಕೊಳ್ಳಲು ಆರು ತಿಂಗಳು ಅವಕಾಶ ನೀಡಿತ್ತು. ಆದರೆ, ಇಬ್ಬರೂ ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದರಿಂದ ಕೌಟುಂಬಿಕ ನ್ಯಾಯಾಲಯದ ಪ್ರಿನ್ಸಿಪಲ್ ಜಡ್ಜ್ ಪರಮಜೀತ್ ಸಿಂಗ್ ಅವರು ಇವರಿಗೆ ವಿಚ್ಛೇದನವನ್ನು ನೀಡಿದ್ದಾರೆ.
ಶಾಲಿನಿ ತಲ್ವಾರ್ ಅವರು ಹನಿಸಿಂಗ್ ಮೇಲೆ ಕೌಟುಂಬಿಕ ಹಲ್ಲೆಯ ಆರೋಪವನ್ನು ಮಾಡಿದ್ದರು. ಹನಿ ಸಿಂಗ್ ಮತ್ತು ಅವನ ಕುಟುಂಬದಿಂದ ಮಾನಸಿಕ, ದೈಹಿಕ, ಲೈಂಗಿಕ ಕಿರುಕುಳ ಅನುಭವಿಸಿದ್ದು, ನಿತಂತರ ಭಯದಲ್ಲಿ ಬದುಕುತ್ತಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದರು. ಈ ಸಂಬಂಧ ಅವರು ಕೇಸ್ ದಾಖಲು ಮಾಡಿದ್ದರು. ಈಗ ವಿಚ್ಛೇದನ ಪಡೆದ ಬಳಿಕ ಈ ವಿಚಾರದಲ್ಲಿ ರಾಜಿ ಆಗಿದ್ದಾರೆ. ಹನಿ ಸಿಂಗ್ ಮೇಲೆ ಹಾಕಿದ್ದ ಪ್ರಕರಣವನ್ನು ಅವರು ಹಿಂಪಡೆದಿದ್ದಾರೆ.
ಹನಿ ಸಿಂಗ್ ಅವರು ಟೀನಾ ತಡಾನಿ ಜೊತೆ ರಿಲೇಶನ್ಶಿಪ್ನಲ್ಲಿ ಇರುವುದಾಗಿ 2022ರ ಡಿಸೆಂಬರ್ನಲ್ಲಿ ಹೇಳಿಕೊಂಡಿದ್ದರು. ದುಬೈನಲ್ಲಿ ಇವರ ಭೇಟಿ ಆಗಿತ್ತು. ಹನಿ ಸಿಂಗ್ ಅವರ ‘ಪ್ಯಾರಿಸ್ ಕಾ ಟ್ರಿಪ್’ ವಿಡಿಯೋ ಸಾಂಗ್ನಲ್ಲಿ ಟೀನಾ ಕಾಣಿಸಿಕೊಂಡಿದ್ದರು. ಅವರು ಕೆನಡಾದ ನಟಿ. ಅವರು ಕಿರು ಚಿತ್ರ ನಿರ್ದೇಶನ ಮಾಡಿದ್ದಾರೆ.
ಡಿಪ್ಫೇಕ್ ವಿಡಿಯೋಗಳಿಂದ ಸಮಸ್ಯೆಗೆ ಒಳಗಾದ ಸೆಲೆಬ್ರಿಟಿಗಳು ಇವರೇ ನೊಡಿ
ಇತ್ತೀಚೆಗೆ ರಶ್ಮಿಕಾ ಮಂದಣ್ಣ (Rashmika Mandanna) ಅವರು ಲಿಫ್ಟ್ ಏರುತ್ತಿರುವ ವಿಡಿಯೋ ವೈರಲ್ ಆಗಿದೆ. ಟೈಟ್ ಡ್ರೆಸ್ ಹಾಕಿ ಅವರು ಲಿಫ್ಟ್ ಏರಿದ್ದರು. ಅಸಲಿಗೆ ಇದು ರಶ್ಮಿಕಾ ಮಂದಣ್ಣ ಅವರ ವಿಡಿಯೋನೆ ಆಗಿರಲಿಲ್ಲ. ಜರಾ ಪಟೇಲ್ ಎಂಬ ಯುವತಿಯ ವಿಡಿಯೋನ ಎಡಿಟ್ ಮಾಡಲಾಗಿತ್ತು. ವಿಡಿಯೋನ ತಿರುಚಿ ಜರಾ ಪಟೇಲ್ ಮುಖಕ್ಕೆ ರಶ್ಮಿಕಾ ಅವರ ಫೋಟೋ ಹಾಕಲಾಗಿತ್ತು. ಇದು ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಅಮಿತಾಭ್ ಬಚ್ಚನ್ ಸೇರಿ ಅನೇಕರು ಈ ಬಗ್ಗೆ ಧ್ವನಿ ಎತ್ತಿದ್ದರು.
ತಂತ್ರಜ್ಞಾನ ಮುಂದುವರಿದಂತೆ ಈ ರೀತಿಯ ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ರಶ್ಮಿಕಾ ರೀತಿಯೇ ಈ ಮೊದಲು ಅನೇಕ ಸೆಲೆಬ್ರಿಟಿಗಳು ಡಿಪ್ಫೇಕ್ ವಿಡಿಯೋಗಳಿಂದ ತೊಂದರೆ ಅನುಭವಿಸಿದ್ದರು. ಈ ಸಾಲಿನಲ್ಲಿ ಕತ್ರಿನಾ ಕೈಫ್ ಸೇರಿ ಅನೇಕರಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಕತ್ರಿನಾ ಕೈಫ್
ಬಾಲಿವುಡ್ನ ಬೇಡಿಕೆಯ ನಟಿ ಕತ್ರಿನಾ ಕೈಫ್ ಅವರು ಈ ರೀತಿಯ ಸಮಸ್ಯೆಯನ್ನು 9 ವರ್ಷಗಳ ಹಿಂದೆಯೇ ಅನುಭವಿಸಿದ್ದರು. ಅದು 2014ರ ಸಮಯ. ಕತ್ರಿನಾ ಕೈಫ್ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಒಂದು ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಇರುವವರು ಕತ್ರಿನಾ ಕೈಫ್ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಅದು ನಕಲಿ ಅನ್ನೋದು ನಂತರ ಗೊತ್ತಾಯಿತು.
ಅಕ್ಷರಾ ಸಿಂಗ್
ಭೋಜ್ಪುರಿ ನಟಿ ಅಕ್ಷರಾ ಸಿಂಗ್ ಕೂಡ ಇದೇ ರೀತಿಯ ತೊಂದರೆ ಅನುಭವಿಸಿದ್ದರು. ವಿಡಿಯೋ ವೈರಲ್ ಆದ ಬಳಿಕ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ತಮಗೂ ಈ ವಿಡಿಯೋಗೂ ಸಂಬಂಧ ಇಲ್ಲ ಎಂದು ಅವರು ಹೇಳಿಕೊಂಡಿದ್ದರು. ಆದಾಗ್ಯೂ ಅನೇಕರು ಇದನ್ನು ನಂಬಲೇ ಇಲ್ಲ.
ತಮನ್ನಾ ಭಾಟಿಯಾ
ನಟಿ ತಮನ್ನಾ ಭಾಟಿಯಾ ಕೂಡ ಎಡಿಟ್ ಮಾಡಿದ ವಿಡಿಯೋದಿಂದ ತೊಂದರೆ ಅನುಭವಿಸಿದ್ದರು. ಅಶ್ಲೀಲ ವಿಡಿಯೋ ಒಂದರಲ್ಲಿ ತಮನ್ನಾ ಕಾಣಿಸಿಕೊಂಡಿದ್ದಾರೆ ಎಂದು ವಿಡಿಯೋ ವೈರಲ್ ಮಾಡಲಾಗಿತ್ತು. ಆ ಬಳಿಕ ಇದು ಫೇಕ್ ಅನ್ನೋದು ಗೊತ್ತಾಯಿತು.
ಪ್ರೀತಿ ಜಿಂಟಾ
ನಟಿ ಪ್ರೀತಿ ಜಿಂಟಾ ಅವರು ಚಿತ್ರರಂಗದಿಂದ ದೂರ ಇದ್ದಾರೆ. ಸದ್ಯ ಅವರು ಕೌಟುಂಬಿಕ ಜೀವನ ಹಾಗೂ ತಮ್ಮ ಒಡೆತನದ ಐಪಿಎಲ್ ತಂಡ ಪಂಜಾಬ್ ಕಿಂಗ್ಸ್ ಕಡೆ ಗಮನ ಹರಿಸುತ್ತಿದ್ದಾರೆ. ಅವರ ಎಂಎಂಎಸ್ ವಿಡಿಯೋ ಲೀಕ್ ಆಗಿದೆ ಎನ್ನಲಾಗಿತ್ತು. ಅವರು ಯಾರದ್ದೋ ಜೊತೆ ಲಿಪ್ ಲಾಕ್ ಮಾಡುತ್ತಿರುವ ವಿಡಿಯೋ ಇದಾಗಿತ್ತು. ಆದರೆ, ಇದು ಫೇಕ್ ಅನ್ನೋದು ಬಳಿಕ ಗೊತ್ತಾಯಿತು.
ಸೋನಾಕ್ಷಿ ಸಿನ್ಹಾ
ಸೋನಾಕ್ಷಿ ಸಿನ್ಹಾ ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅವರ ಖಾಸಗಿ ವಿಡಿಯೋ ಒಂದು ವೈರಲ್ ಆಗಿದೆ ಎಂದು ಹೇಳಲಾಗಿತ್ತು. ಆದರೆ, ಇದು ಎಡಿಟ್ ಮಾಡಿದ ವಿಡಿಯೋ ಅನ್ನೋದು ಬಳಿಕ ಗೊತ್ತಾಯಿತು.
ಮೋನಾ ಸಿಂಗ್
ಮೋನಾ ಸಿಂಗ್ ಅವರು ಬೆತ್ತಲಾಗಿ ಇರುವ ವಿಡಿಯೋ ಲೀಕ್ ಆಗಿತ್ತು. ಆದರೆ ಇದು ಫೇಕ್ ಎಂಬುದು ನಂತರ ತಿಳಿಯಿತು. ಈ ಘಟನೆಯಿಂದ ಮೋನಾ ಸಿಂಗ್ ನೊಂದಿದ್ದರು.
ಅಂಜಲಿ ಅರೋರಾ
‘ಕಚ್ಚಾ ಬಾದಾಮ್..’ ಹಾಡಿಗೆ ಡ್ಯಾನ್ಸ್ ಮಾಡಿ ಫೇಮಸ್ ಆದವರು ಅಂಜಲಿ ಅರೋರಾ. ಈ ಹಾಡಿಗೆ ಡ್ಯಾನ್ಸ್ ಮಾಡಿ ವೈರಲ್ ಆಗಿದ್ದರು. ಅವರು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡ ವಿಡಿಯೋ ವೈರಲ್ ಆಗಿತ್ತು. ಇದು ಫೇಕ್ ವಿಡಿಯೋ ಎಂದು ಅವರು ಬಳಿಕ ಸ್ಪಷ್ಟನೆ ನೀಡಿದ್ದರು.