Honda EM1 e ಎಲೆಕ್ಟ್ರಿಕ್ ಸ್ಕೂಟರ್
Honda New Scooter Launch: ಮುಂಚೂಣಿಯ ದ್ವಿಚಕ್ರವಾಹನ ತಯಾರಾಕ ಕಂಪನಿ ಹೋಂಡಾ ತನ್ನ ಹೊಚ್ಚ ಹೊಸ ಹೋಂಡಾ EM1 e ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಿದೆ. ಹೊಸ ಎಲೆಕ್ಟ್ರಿಕ್ ಸ್ಕೂಟರ್ ಇಂಡೋನೇಷ್ಯಾದಲ್ಲಿ ಕಂಪನಿ ಬಿಡುಗಡೆ ಮಾಡಿದೆ. ಇಂಡೋನೇಷ್ಯಾದಲ್ಲಿ ಎಲೆಕ್ಟ್ರಿಕ್ ವಾಹನಗಳ ಮೂಲಸೌಕರ್ಯ ನಿಧಾನ ಗತಿಯಲ್ಲಿ ಇದೀಗ ವೇಗ ಪಡೆದುಕೊಳ್ಳುತ್ತಿದೆ, ಇದು ಗ್ರಾಹಕರ ನಿರ್ಧಾರಗಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪ್ರಭಾವ ಬೀರಲಿದೆ. ಬನ್ನಿ ಹಾಗಾದರೆ ಹೋಂಡಾ EM1 e ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ.
ಹೋಂಡಾ ಇಎಮ್1 ಇ ಬೆಲೆ
ಹೋಂಡಾ ಬಿಡುಗಡೆ ಮಾಡಿರುವ ಈ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯ ಕುರಿತು ಹೇಳುವುದಾದರೆ, ಹೋಂಡಾ ಇಎಮ್1 ಇ ಸ್ಕೂಟರ್ ನ ಆರಂಭಿಕ ಎಕ್ಸ್ ಶೋರೂಂ ಬೆಲೆ 40,000,000 ಇಂಡೋನೇಷಿಯನ್ ರೂಪಾಯಿಗಲಾಗಿದೆ. ಅಂದರೆ ಭಾರತೀಯ ಮೌಲ್ಯದ ಪ್ರಕಾರ ಸುಮಾರು ರೂ. 2,16,377 ಗಳಷ್ಟಾಗುತ್ತದೆ.ಮತ್ತೊಂದೆಡೆ, ಇದನ್ನು ಹೋಂಡಾ ಮೊಬೈಲ್ ಪವರ್ ಪ್ಯಾಕ್ ಇ ಮೂಲಕ ಖರೀದಿಸಿದರೆ, ಬೆಲೆ 45,000,000 ಇಂಡೋನೇಷಿಯನ್ ರೂಪಾಯಿ (ಅಂದರೆ ಸುಮಾರು ರೂ. 2,43,436) ಆಗಿರುತ್ತದೆ. ಇದು ಇಂಡೋನೇಷ್ಯಾದಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ. ಜಪಾನ್ ಮತ್ತು ಯುರೋಪ್‌ನಲ್ಲಿಯೂ ಸಹ ಇದು ಲಭ್ಯವಿದೆ.
ಹೋಂಡಾ EM1 e ನ ಶಕ್ತಿ ಮತ್ತು ಶ್ರೇಣಿ
ಹೋಂಡಾ EM1 e 1.7 kW ಪವರ್ ಮತ್ತು 90 Nm ಟಾರ್ಕ್ ಅನ್ನು ಉತ್ಪಾದಿಸುವ ಇನ್-ವೀಲ್ 3-ಫೇಸ್ ಮೋಟರ್‌ನಿಂದ ಚಾಲಿತವಾಗಿದೆ. ರೆಂಜ್ ಕುರಿತು ಹೇಳುವುದಾದರೆ, ಇದು ಒಂದೇ ಚಾರ್ಜ್‌ನಲ್ಲಿ 41.1 ಕಿಮೀ ದೂರವನ್ನು ಕ್ರಮಿಸುತ್ತದೆ. ಇದೇ ವೇಳೆ, ಅದರ ಗರಿಷ್ಠ ವೇಗ ಗಂಟೆಗೆ 45 ಕಿಲೋಮೀಟರ್ ಗಳಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ 29.4Ah ಬ್ಯಾಟರಿಯನ್ನು ಹೊಂದಿದ್ದು, 6 ಗಂಟೆಗಳಲ್ಲಿ 0 ರಿಂದ 100 ಪ್ರತಿಶತದಷ್ಟು ಚಾರ್ಜ್ ಮಾಡಬಹುದು.
ಈ ಸ್ಕೂಟರ್‌ನ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ನೀಡಲಾಗಿದೆ. ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಮತ್ತು ಹಿಂಭಾಗದಲ್ಲಿ ಟ್ವಿನ್ ಸಸ್ಪೆನ್ಷನ್ ಇದೆ.
ಆಯಾಮಗಳಿಗೆ ಸಂಬಂಧಿಸಿದಂತೆ, ಹೋಂಡಾ EM1 e ಉದ್ದ 1795 ಎಂಎಂ, ಅಗಲ 680 ಎಂಎಂ, ಎತ್ತರ 1080 ಎಂಎಂ, ವೀಲ್‌ಬೇಸ್ 1300 ಎಂಎಂ, ಗ್ರೌಂಡ್ ಕ್ಲಿಯರೆನ್ಸ್ 135 ಎಂಎಂ, ಸೀಟ್ ಎತ್ತರ 740 ಎಂಎಂ, ಒಟ್ಟು ತೂಕ 93 ಕೆಜಿ. ವಿನ್ಯಾಸದ ಕುರಿತು ಮಾತನಾಡುವುದಾದರೆ, ಈ ಎಲೆಕ್ಟ್ರಿಕ್ ಸ್ಕೂಟರ್ ಎಲ್ಇಡಿ ಹೆಡ್ಲೈಟ್, ಎಲ್ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್ಇಡಿ ಟೈಲ್ಲೈಟ್, ಯುಎಸ್ಬಿ ಟೈಪ್-ಎ ಸಾಕೆಟ್ ಮತ್ತು ನಿಶ್ಚಲತೆಯನ್ನು ಹೊಂದಿದೆ.