ಹಾಲಿವುಡ್ ನ ಖ್ಯಾತ ನಟ, ಹ್ಯಾರಿ ಪಾಟರ್ ನಲ್ಲಿ ಹೆಡ್ ಮಾಸ್ಟರ್ ಪಾತ್ರ ಮಾಡಿದ್ದ ಮೈಕಲ್ ಗ್ಯಾಂಬೋನ್ ನಿಧನ..!
ಹಾಲಿವುಡ್ ನ ಖ್ಯಾತ ನಟ, ಹ್ಯಾರಿ ಪಾಟರ್ (Harry Potter) ನಲ್ಲಿ ಹೆಡ್ ಮಾಸ್ಟರ್ ಪಾತ್ರ ಮಾಡುತ್ತಿದ್ದ ಮೈಕೆಲ್ ಗ್ಯಾಂಬೋನ್ (Michael Gambon) ನಿಧನರಾಗಿದ್ದಾರೆ. ನ್ಯೂಮೋನಿಯಾದಿಂದ ಬಳಲುತ್ತಿದ್ದ ಮೈಕಲ್ ಚಿಕಿತ್ಸೆ ಪಡೆಯುತ್ತಿದ್ದರು. ಹಲವು ದಿನಗಳಿಂದ ಆಸ್ಪತ್ರೆಗೂ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೈಕಲ್ ಇಹಲೋಕ (Passed Away) ತ್ಯಜಿಸಿದ್ದಾರೆ.
ಹ್ಯಾರಿ ಪಾಟರ್ ನಲ್ಲಿ ಮೈಕಲ್ ಪ್ರೊಫೆಸರ್ ಆಲ್ಬಸ್ ಡಂಬಲ್ಡೋರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರದ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಅವರು ಹೊಂದಿದ್ದರು. ತನ್ನ 22ನೇ ವಯಸ್ಸಿನಲ್ಲೇ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದ ಮೈಕಲ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಓಪನ್ ರೇಂಜ್, ಲೇಯರ್ ಕೇಕ್ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಇವರು ನಟಿಸಿದ್ದು, ಕೊನೆಯಾದಾಗಿ 2019ರಲ್ಲಿ ತೆರೆಕಂಡ ಕಾರ್ಡೇಲಿಯಾ ಚಿತ್ರಕ್ಕೆ ಬಣ್ಣ ಹಚ್ಚಿದ್ದರು. ಹಿರಿಯ ನಟನ ನಿಧನಕ್ಕೆ ಹಾಲಿವುಡ್ ನ ಅನೇಕ ತಾರೆಯರು ಮತ್ತು ತಂತ್ರಜ್ಞರು ಕಂಬನಿ ಮಿಡಿದಿದ್ದಾರೆ. ಅವರ ಪಾತ್ರಗಳನ್ನು ನೆನಪಿಸಿಕೊಂಡಿದ್ದಾರೆ.
ರಾಖಿ ಸಾವಂತ್ ಆಸೆ ಈಡೇರಿಸ್ತಾರಾ ರಿಷಬ್ ಶೆಟ್ಟಿ?
ಬಾಲಿವುಡ್ ಕಿರಿಕ್ ಬೆಡಗಿ ರಾಖಿ ಸಾವಂತ್ (Rakhi Sawant) ಸಿನಿಮಾ ಮಾಡಿ ಸುದ್ದಿಯಾಗಿದ್ದಕ್ಕಿಂತ ಕಾಂಟ್ರವರ್ಸಿಯಿಂದ ಹೆಚ್ಚೆಚ್ಚು ಸೌಂಡ್ ಮಾಡಿರೋದು ಜಾಸ್ತಿ. ಅದರಲ್ಲೂ ಪತಿ ಆದಿಲ್ ಖಾನ್ ಜೊತೆಗಿನ ಕಿತ್ತಾಟ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ತಮ್ಮ ಬಯೋಪಿಕ್ (Biopic) ಬಗ್ಗೆ ಆಸೆಯನ್ನ ನಟಿ ವ್ಯಕ್ತಪಡಿಸಿದ್ದಾರೆ. ತನ್ನ ಜೀವನ ಚರಿತ್ರೆಯನ್ನ ಕಾಂತಾರ ನಟ ಕಮ್ ಡೈರೆಕ್ಟರ್ ರಿಷಬ್ ಶೆಟ್ಟಿ (Rishab Shetty) ನಿರ್ದೇಶನ ಮಾಡಬೇಕು ಎಂದಿದ್ದಾರೆ.
ರಾಖಿ ಸಾವಂತ್ ಅವರ ಜೀವನದ ಕಥೆ ಇಟ್ಟುಕೊಂಡು ಸಿನಿಮಾ ಮಾಡಲು ತೆರೆಮರೆಯಲ್ಲಿ ಪ್ಲ್ಯಾನ್ ನಡೆಯುತ್ತಿದೆ. ಅದಕ್ಕೆ ನಿರ್ಮಾಪಕರು ಕೂಡ ಮುಂದೆ ಬಂದಿದ್ದಾರೆ. ತಮ್ಮ ಪಾತ್ರವನ್ನು ವಿದ್ಯಾ ಬಾಲನ್ (Vidya Balan) ಮಾಡಿದರೆ ಉತ್ತಮ ಎಂದು ರಾಖಿ ಸಾವಂತ್ ಹೇಳಿದ್ದಾರೆ. ನಿಮ್ಮ ಪಾತ್ರವನ್ನು ನೀವೇ ಮಾಡಬಹುದಲ್ಲ ಎಂದು ನಿರ್ಮಾಪಕರು ರಾಖಿಗೆ ಹೇಳಿದ್ದಾರಂತೆ. ಆ ಬಗ್ಗೆ ನಾನು ಯೋಚಿಸಿಲ್ಲ ಎಂದು ರಾಖಿ ಸಾವಂತ್ ಎಂದಿದ್ದಾರೆ. ಯಾರು ನಿರ್ದೇಶನ ಮಾಡಬೇಕು ಎಂದು ಕೇಳಿದ್ದಕ್ಕೆ ರಿಷಬ್ ಶೆಟ್ಟಿಯ ಹೆಸರನ್ನು ರಾಖಿ ಸಾವಂತ್ ಸೂಚಿಸಿದ್ದಾರೆ. ರಿಷಬ್, ತನ್ನ ಬಯೋಪಿಕ್ ನಿರ್ದೇಶಿಸಿದರೆ ಚೆನ್ನಾಗಿರುತ್ತೆ ಎಂದು ಆಸೆ ವ್ಯಕ್ತಪಡಿಸಿದ್ದಾರೆ.
ಕಥೆ, ಚಿತ್ರಕಥೆ, ಸಂಗೀತ, ನಿರ್ದೇಶನ ಎಲ್ಲ ವಿಭಾಗದಲ್ಲೂ ದೊಡ್ಡ ತಂತ್ರಜ್ಞರನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂದು ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ಸದ್ಯ ರಿಷಬ್ ಶೆಟ್ಟಿ ‘ಕಾಂತಾರ 2’ (Kantara 2) ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಕಾಂತಾರ ಸಕ್ಸಸ್ ನಂತರ ಪಾರ್ಟ್ 2 ಕೂಡ ಗೆಲುವು ಕಾಣಲೇಬೇಕು ಎಂದು ಪಣ ತೊಟ್ಟಿದ್ದಾರೆ.