ಸೋಮವಾರ, ಅಕ್ಟೋಬರ್ 2, 2023
Galaxy S23 FE: ಸ್ಯಾಮ್ಸಂಗ್ ಗ್ಯಾಲಕ್ಸಿ S23 ಎಫ್​ಇ ಸ್ಮಾರ್ಟ್​ಫೋನ್ ಅ.4 ರಂದು ಬಿಡುಗಡೆ!-ಜಿಂಬಾಬ್ವೆಯಲ್ಲಿ ವಿಮಾನ ಪತನ ; ಭಾರತದ ಕೋಟ್ಯದೀಶ್ವರ ಹಾಗೂ ಗಣಿ ಉದ್ಯಮಿ ಮತ್ತು ಅವರ ಪುತ್ರ ದುರ್ಮರಣ!-ಸಂಕ್ರಾಂತಿ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ; ಸಿಪಿ ಯೋಗೇಶ್ವರ್ ಬಾಂಬ್-ದಿಗ್ಗಜ ಮಾಜಿ ಓಟಗಾರ್ತಿ ಪಿ.ಟಿ ಉಷಾರವರ ರಾಷ್ಟ್ರೀಯ ದಾಖಲೆ ಸರಿಗಟ್ಟಿ ಪದಕ ಸುತ್ತಿಗೇರಿದ ವಿತ್ಯಾ!-ನೀವು ಹೆದರಿಸದರೆ ಮಾತ್ರಕ್ಕೆ ನಾನು ಹೆದರಲ್ಲ ದೇವೇಗೌಡರಿಗೆ ಡಿಕೆಶಿ ಟಾಂಗ್!-ಜಿಪಿಎಸ್ ಮ್ಯಾಪ್ ನೋಡಿ ಕಾರನ್ನು ಚಲಿಸುವುತ್ತಿರುವಾಗ ನದಿಗೆ ಬಿದ್ದು ಇಬ್ಬರು ವೈದ್ಯರು ಸಾವು ; ಮೂವರು ಪಾರು!-ಹೃದಯ ವಿದ್ರಾವಕ ಘಟನೆ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸೇರಿ 6 ಮಂದಿ ಹತ್ಯೆ-ಬೆಂಗಳೂರಿನ ಕಂಬಳಕ್ಕೆ ಹೇಗಿದೆ ತಯಾರಿ; ದಕ್ಷಿಣ ಕನ್ನಡ ಭಾಗದ 150 ಫುಡ್ ಸ್ಟಾಲ್ ಏರ್ಪಾಡು..!-ಪಿಯುಸಿಯಲ್ಲಿ ಅಂಕ ಕಡಿಮೆ ಬಂತೆಂದು ಮನನೊಂದು ಅಪಾರ್ಟ್‌ಮೆಂಟ್‌ನಿಂದ ಜಿಗಿದ ಬಾಲಕಿ ; ರಕ್ಷಣೆಗೆ ಧಾವಿಸಿದ ಯುವಕ - ಇಲ್ಲಿದೆ ವಿಡಿಯೋ-ಬರ್ತ್‌ಡೇ ಪಾರ್ಟಿಯಲ್ಲಿ ಡೆಕೋರೇಷನ್‌ಗೆ ಹಾಕಿದ್ದ ಹೀಲಿಯಂ ಬಲೂನ್‌ ಬ್ಲಾಸ್ಟ್‌ ; ಐವರು ಗಂಭೀರ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Hockey World Cup 2023 ದೇಶದ ಅತಿದೊಡ್ಡ ಹಾಕಿ ಕ್ರೀಡಾಂಗಣ ಉದ್ಘಾಟನೆ..!

Twitter
Facebook
LinkedIn
WhatsApp
download 12

ರೂರ್ಕೆಲಾ(ಜ.06): ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಗುರುವಾರ ಭಾರತದ ಅತಿದೊಡ್ಡ ಹಾಕಿ ಕ್ರೀಡಾಂಗಣ ಎನ್ನುವ ಖ್ಯಾತಿ ಪಡೆದಿರುವ ಬಿರ್ಸಾ ಮುಂಡಾ ಅಂತಾರಾಷ್ಟ್ರೀಯ ಕ್ರೀಡಾಂಗಣವನ್ನು ಉದ್ಘಾಟನೆ ಮಾಡಿದರು. ಜನವರಿ 13ರಿಂದ ಆರಂಭಗೊಳ್ಳಲಿರುವ ಪುರುಷರ ವಿಶ್ವಕಪ್‌ನ 44 ಪಂದ್ಯಗಳ ಪೈಕಿ 20 ಪಂದ್ಯಗಳಿಗೆ ಈ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಫೈನಲ್‌ ಸೇರಿ ಉಳಿದ ಪಂದ್ಯಗಳು ಭುವನೇಶ್ವರದ ಕಳಿಂಗಾ ಕ್ರೀಡಾಂಗಣದಲ್ಲಿ ನಡೆಯಲಿದೆ.

146 ಕೋಟಿ ರುಪಾಯಿ ವೆಚ್ಚದಲ್ಲಿ ಕೇವಲ 11 ತಿಂಗಳಲ್ಲಿ ಪೂರ್ಣಗೊಂಡಿರುವ ಕ್ರೀಡಾಂಗಣ ಒಟ್ಟು 21,000 ಆಸನ ಸಾಮರ್ಥ್ಯ ಹೊಂದಿದೆ. ಇದು ವಿಶ್ವದ ಅತಿದೊಡ್ಡ ಹಾಕಿ ಕ್ರೀಡಾಂಗಣಗಳಲ್ಲಿ ಒಂದೆನಿಸಿದೆ.

ಭಾರತ ಗೆದ್ದರೆ ಪ್ರತಿ ಆಟಗಾರಗೆ 1 ಕೋಟಿ!

ಭಾರತ ವಿಶ್ವಕಪ್‌ ಗೆದ್ದರೆ ತಂಡದ ಪ್ರತಿ ಆಟಗಾರನಿಗೆ ತಲಾ 1 ಕೋಟಿ ರುಪಾಯಿ ಬಹುಮಾನ ನೀಡುವುದಾಗಿ ಸಿಎಂ ಪಟ್ನಾಯಕ್‌ ಘೋಷಿಸಿದ್ದಾರೆ. ಭಾರತ 1975ರಲ್ಲಿ ವಿಶ್ವಕಪ್‌ ಗೆದ್ದಿತ್ತು. ಇದು ತಂಡದ ಏಕೈಕ ವಿಶ್ವಕಪ್‌ ಗೆಲುವಾಗಿದೆ.

ಹಾಲಿ ಚಾಂಪಿಯನ್ ಬೆಲ್ಜಿಯಂ ಆಗಮನ: ಒಡಿಶಾದಲ್ಲಿ ನಡೆಯಲಿರುವ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಬೆಲ್ಜಿಯಂ ತಂಡವು ಇದೀಗ ಭಾರತಕ್ಕೆ ಬಂದಿಳಿದೆ. 16 ರಾಷ್ಟ್ರಗಳು ಪಾಲ್ಗೊಳ್ಳಲಿರುವ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಕಪ್ ಗೆಲ್ಲಬಲ್ಲ ನೆಚ್ಚಿನ ತಂಡಗಳಲ್ಲಿ ಬೆಲ್ಜಿಯಂ ತಂಡವು ಕೂಡಾ ಒಂದೆನಿಸಿದೆ. 

ಹಾಕಿ ವಿಶ್ವಕಪ್‌ನಲ್ಲಿ ಚಿನ್ನ ಗೆದ್ದರೆ ಭಾರತೀಯ ಆಟಗಾರರಿಗೆ ತಲಾ 25 ಲಕ್ಷ ರುಪಾಯಿ ಬಹುಮಾನ!

ನವದೆಹಲಿ: ಭಾರತ ತಂಡವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮುಂಬರುವ ಹಾಕಿ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದರೆ ತಂಡದ ಪ್ರತಿ ಆಟಗಾರನಿಗೆ ತಲಾ 25 ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ಹಾಕಿ ಇಂಡಿಯಾ ಈಗಾಗಲೇ ಘೋಷಿಸಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಹಾಕಿ ಇಂಡಿಯಾ ಸಂಸ್ಥೆ, ಸಹಾಯಕ ಸಿಬ್ಬಂದಿಗೂ ತಲಾ 5 ಲಕ್ಷ ರುಪಾಯಿ ನೀಡುವುದಾಗಿ ತಿಳಿಸಿದೆ. ಅಲ್ಲದೇ ಬೆಳ್ಳಿ ಗೆದ್ದರೆ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗೆ ಕ್ರಮವಾಗಿ ತಲಾ 15 ಲಕ್ಷ ರುಪಾಯಿ ಹಾಗೂ 3 ಲಕ್ಷ ರುಪಾಯಿ, ಕಂಚು ಗೆದ್ದರೆ ತಲಾ 10 ಲಕ್ಷ ಹಾಗೂ 2 ಲಕ್ಷ ರುಪಾಯಿ ನೀಡುವುದಾಗಿ ತಿಳಿಸಿದೆ.

ಹಾಕಿ ವಿಶ್ವಕಪ್‌: ರೂರ್ಕೆಲಾ ಪಂದ್ಯಗಳ ಟಿಕೆಟ್‌ ಸೋಲ್ಡೌಟ್‌!

2023ರ ಎಫ್‌ಐಎಚ್‌ ಹಾಕಿ ವಿಶ್ವಕಪ್‌ ಒಡಿಶಾದಲ್ಲಿ ಜನವರಿ 13ರಿಂದ 29ರ ವರೆಗೆ ನಡೆಯಲಿದ್ದು, ರೂರ್ಕೆಲಾದಲ್ಲಿ ನಡೆಯಲಿರುವ ಎಲ್ಲಾ ಪಂದ್ಯಗಳ ಟಿಕೆಟ್‌ಗಳು ಕೆಲವೇ ದಿನಗಳಲ್ಲಿ ಮಾರಾಟವಾಗಿದೆ ಎಂದು ಹಾಕಿ ಇಂಡಿಯಾ ತಿಳಿಸಿದೆ. ರೂರ್ಕೆಲಾದಲ್ಲಿ ನೂತನವಾಗಿ ನಿರ್ಮಿಸಲಾದ ಬಿರ್ಸಾ ಮುಂಡಾ ಕ್ರೀಡಾಂಗಣ 21,000 ಆಸನ ಸಾಮರ್ಥ್ಯ ಹೊಂದಿದ್ದು, ಭಾರತದ ಅತಿದೊಡ್ಡ ಹಾಕಿ ಕ್ರೀಡಾಂಗಣ ಎನಿಸಿಕೊಂಡಿದೆ. ಟೂರ್ನಿಯ 20 ಪಂದ್ಯಗಳಿಗೆ ಈ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಡಿ.19ಕ್ಕೆ ಇಲ್ಲಿನ ಪಂದ್ಯಗಳ ಟಿಕೆಟ್‌ ಮಾರಾಟಕ್ಕಿಟ್ಟಿದ್ದು, ವಾರದೊಳಗೆ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿದೆ. ಇನ್ನು ಭುವನೇಶ್ವರದ ಕಳಿಂಗಾ ಕ್ರೀಡಾಂಗಣದ 24 ಪಂದ್ಯಗಳ ಬಹುತೇಕ ಟಿಕೆಟ್‌ಗಳು ಕೂಡಾ ಮಾರಾಟವಾಗಿವೆ ಎಂದು ವರದಿಯಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ