ಸೋಮವಾರ, ಡಿಸೆಂಬರ್ 23, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Hina Khan: ಟ್ರಿಮ್ಮರ್ ಹಿಡಿದು ತಲೆ ಬೋಳಿಸಿಕೊಂಡ ಖ್ಯಾತ ನಟಿ

Twitter
Facebook
LinkedIn
WhatsApp
Hina Khan: Famous actress who shaved her head

Hina Khan: ಹಿನಾ ಖಾನ್ (Hina Khan) ಅವರು ತಮ್ಮ ಕೂದಲನ್ನು ಬೋಳಿಸಿಕೊಂಡಿರುವ ಧೈರ್ಯಶಾಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆಕೆ ತನ್ನ 3 ನೇ ಹಂತದ ಸ್ತನ ಕ್ಯಾನ್ಸರ್‌ಗೆ ಕೀಮೋಥೆರಪಿಗೆ ಒಳಗಾಗುತ್ತಿದ್ದಾಳೆ.

ಕಿರುತೆರೆ ನಟಿ ಹೀನಾ ಖಾನ್ ಅವರು ಕೀಮೋಥೆರಪಿಗೆ ಒಳಗಾಗಿರುವ ಕಾರಣ ತಮ್ಮ ಕೂದಲನ್ನು ಬೋಳಿಸುವ ನಿರ್ಧಾರವನ್ನು ಹಂಚಿಕೊಂಡಿದ್ದಾರೆ,

Instagram ನಲ್ಲಿ ಭಾವನಾತ್ಮಕ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಹಿನಾ ಖಾನ್ ಇತ್ತೀಚೆಗೆ 3 ನೇ ಹಂತದ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಹಿನಾ ಖಾನ್​ ಅವರು ‘ಬಿಗ್​ ಬಾಸ್​ 11’ ರನ್ನರ್​ ಅಪ್​ ಆಗಿಯೂ ಜನಪ್ರಿಯತೆ ಪಡೆದರು. ಭಾರಿ ಬೇಡಿಕೆ ಹೊಂದಿರುವ ಅವರು ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. 

ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುತ್ತಿರುವ ನಟಿಗೆ ಕೂದಲು ಉದುರುತ್ತಿದೆ. ಹಾಗಾಗಿ ಪೂರ್ತಿ ತಲೆ ಬೋಳಿಸಿಕೊಂಡಿದ್ದಾರೆ. ಆ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.

ತಮಗೆ ಕ್ಯಾನ್ಸರ್​ ಇದೆ ಎಂಬುದು ತಿಳಿದಾಗಿನಿಂದ ಹಿನಾ ಖಾನ್​ ಅವರು ಅಭಿಮಾನಿಗಳ ಜೊತೆ ಎಲ್ಲ ವಿಷಯವನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಕಾಯಿಲೆಗೆ ಅವರು ಹೆದರಿಲ್ಲ. ಬದಲಿಗೆ, ತುಂಬ ಧೈರ್ಯದಿಂದ ಇದನ್ನು ಎದುರಿಸಲು ಸಜ್ಜಾಗಿದ್ದಾರೆ. ಅದರ ಮೊದಲ ಹಂತ ಎಂಬಂತೆ ಅವರು ತಲೆ ಬೋಳಿಸಿಕೊಂಡಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಈ ಬಗ್ಗೆ ಅವರು ವಿಡಿಯೋ ಪೋಸ್ಟ್​ ಮಾಡಿದ್ದಾರೆ.

ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುವಾಗ ಪ್ರತಿ ದಿನ ಕೂದಲು ಉದುರಲು ಆರಂಭ ಆಗುತ್ತದೆ. ಪ್ರತಿ ಬಾರಿ ತಲೆಗೆ ಕೈ ಹಾಕಿದಾದ ಕೂದಲು ಉದುರುತ್ತದೆ. ಅದನ್ನು ನೋಡಿದಾಗಲೆಲ್ಲ ಕಿರಿಕಿರಿ ಆಗುವುದು ಸಹಜ. ಅದರಲ್ಲೂ ಮಹಿಳೆಯರಿಗೆ ಈ ಪರಿ ಕೂದಲು ಉದುರಿದರೆ ಹೆಚ್ಚು ಬೇಸರ ಆಗುತ್ತದೆ. ಇದರಿಂದ ಒಮ್ಮೆಲೆ ಮುಕ್ತಿ ಪಡೆಯಲು ಹಿನಾ ಖಾನ್ ಅವರು ಪೂರ್ತಿ ತಲೆ ಬೋಳಿಸಿಕೊಂಡಿದ್ದಾರೆ. ಅಗತ್ಯ ಇರುವಾಗ ತಾವು ವಿಗ್ ಧರಿಸುವುದಾಗಿ ಅವರು ತಿಳಿಸಿದ್ದಾರೆ. 

ದೈಹಿಕ ಅನಾರೋಗ್ಯವನ್ನು ಎದುರಿಸಬೇಕು ಎಂದರೆ ಮಾನಸಿಕವಾಗಿ ಗಟ್ಟಿಯಾಗಿ ಇರಬೇಕು ಎಂದು ಅವರು ಹೇಳಿದ್ದಾರೆ. ಅಲ್ಲದೇ, ತಮ್ಮ ಅಭಿಮಾನಿಗಳಿಗೂ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ‘ನೀವು ಬೇಗ ಗುಣಮುಖರಾಗಬೇಕು’ ಎಂದು ಹಾರೈಸಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ಕಮೆಂಟ್​ ಮಾಡಿದ್ದಾರೆ.

ಕ್ಯಾನ್ಸರ್ ವಿರುದ್ಧದ ಹೋರಾಟದ ಜೊತೆಗೆ, ಹಿನಾ ಹಲವಾರು ಸಂಗೀತ ವೀಡಿಯೊಗಳು ಮತ್ತು OTT ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆಕೆಯ ಜೀವನದಲ್ಲಿ ಈ ಕಷ್ಟಕರವಾದ ಹಂತವನ್ನು ಎದುರಿಸಲು ಅವರ ಸಕಾರಾತ್ಮಕ ದೃಷ್ಟಿಕೋನವು ನಿಜವಾದ ಸ್ಪೂರ್ತಿದಾಯಕ ಕಥೆಯಾಗಿದೆ

ಕಳೆದ 16 ವರ್ಷಗಳಿಂದ ಕಿರುತೆರೆಯಲ್ಲಿ ನಟಿ ಆಕ್ಟಿವ್ ಆಗಿದ್ದಾರೆ. ಸಿನಿಮಾ, ಸಾಲು ಸಾಲು ಸೀರಿಯಲ್‌ಗಳಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ’ ಹಿನಾಗೆ ಭಾರೀ ಜನಪ್ರಿಯತೆ ನೀಡಿತ್ತು.

ದೀಪಿಕಾ ಪಡುಕೋಣೆಗೆ ಗಂಡು ಮಗು ಹುಟ್ಟಿದೆ ಅಂತ ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳು

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಸದ್ಯ ಚೊಚ್ಚಲ ಮಗು ಬರಮಾಡಿಕೊಳ್ಳಲು ಎದುರು ನೋಡ್ತಿದ್ದಾರೆ. ಸಿನಿಮಾಗೆ ಬ್ರೇಕ್ ಕೊಟ್ಟು ವಿಶ್ರಾಂತಿ ಪಡೆಯುತ್ತಿದ್ದಾರೆ. ಇದರ ನಡುವೆ ನಟಿಗೆ ಗಂಡು ಮಗು ಹುಟ್ಟಿದೆ ಎಂದು ನಕಲಿ ಫೋಟೋವೊಂದನ್ನು ಸೃಷ್ಟಿ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಕಿಡಿಗೇಡಿಗಳು ಹರಿಬಿಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನಕಲಿ ವಿಡಿಯೋ ಮತ್ತು ಫೋಟೋಗಳು ಹರಿಬಿಡೋದು ಈಗ ಸಾಮಾನ್ಯವಾಗಿದೆ. ಇಂಟರ್‌ನೆಟ್‌ನಲ್ಲಿ ಲೈಕ್, ವಿವ್ಸ್ ಗಿಟ್ಟಿಸಿಕೊಳ್ಳಲು ನಾನಾ ತಂತ್ರಗಳನ್ನು ಕಿಡಿಗೇಡಿಗಳು ಮಾಡುತ್ತಿರುತ್ತಾರೆ. ಈಗ ‘ಪಠಾಣ್’ ಹೀರೋಯಿನ್ ದೀಪಿಕಾಗೆ ಗಂಡು ಮಗು ಹುಟ್ಟಿದೆ ಎನ್ನಲಾದ ಫೋಟೋವೊಂದು ವೈರಲ್ ಆಗುವಂತೆ ಮಾಡಿದ್ದಾರೆ.

ಯಾರದ್ದೋ ಫೋಟೋವನ್ನು ಎಡಿಟ್ ಮಾಡಿ ಅದಕ್ಕೆ, ರಣ್‌ವೀರ್ ಸಿಂಗ್ ಮತ್ತು ದೀಪಿಕಾ ಫೋಟೋ ಎಂದು ನಂಬಿಸುವ ಪ್ರಯತ್ನ ಮಾಡಿದ್ದಾರೆ. ಅದೆಷ್ಟೋ ಅಭಿಮಾನಿಗಳು, ದೀಪಿಕಾಗೆ ಗಂಡು ಮಗು ಆಗಿದೆ ಎಂದೇ ಭಾವಿಸಿದ್ದಾರೆ. ಆದರೆ ಅದು ಸುಳ್ಳು. 

ದೀಪಿಕಾ ಪಡುಕೋಣೆ ಸೆಪ್ಟೆಂಬರ್‌ನಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ. ಮಗುವಿನ ಆಗಮನಕ್ಕಾಗಿ ಇಡೀ ಕುಟುಂಬ ಎದುರು ನೋಡ್ತಿದೆ.

ಅಂದಹಾಗೆ, ಇತ್ತೀಚೆಗೆ ಪ್ರಭಾಸ್ ಜೊತೆಗಿನ ‘ಕಲ್ಕಿ 2898 ಎಡಿ’ ಸಿನಿಮಾ ರಿಲೀಸ್ ಆಗಿತ್ತು. ಈ ಚಿತ್ರದ ಭರ್ಜರಿ ಯಶಸ್ಸಿನ ಮೂಲಕ ನಟಿಯ ಕೆರಿಯರ್‌ಗೆ ತಿರುವು ಸಿಕ್ಕಿದೆ. ಇದರ ಪಾರ್ಟ್‌ 2ಗಾಗಿ ಫ್ಯಾನ್ಸ್‌ ಎದುರು ನೋಡ್ತಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist