ಹೇಯ್ ಭಾಯ್ ಹೀರೋ ನಹಿ ಬನ್ನೇಕ; ರೋಹಿತ್ ಶರ್ಮಾ ಮತ್ತು ಸರ್ಫರಾಜ್ ಖಾನ್ ನಡುವಿನ ಮಾತು ವೈರಲ್ .
ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ರಾಂಚಿಯಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಬಹುತೇಕ ಖಚಿತವಾಗಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಭಾರತ ವಿಕೆಟ್ ನಷ್ಟವಿಲ್ಲದೆ 40 ರನ್ ಗಳಿಸಿದ್ದು, ಗೆಲುವಿಗೆ 152 ರನ್ಗಳ ಅಗತ್ಯವಿದೆ. ಇದಕ್ಕೂ ಮುನ್ನ ರೋಹಿತ್ ಪಡೆಯ ಸ್ಪಿನ್ನರ್ಗಳ ಮುಂದೆ ಇಂಗ್ಲೆಂಡ್ ಆಟಗಾರರು ಸಂಪೂರ್ಣವಾಗಿ ಮಂಡಿಯೂರಿದರು. ಇಂಗ್ಲೆಂಡ್‌ನ ಎರಡನೇ ಇನ್ನಿಂಗ್ಸ್ ಕೇವಲ 145 ರನ್‌ಗಳಿಗೆ ಅಂತ್ಯಗೊಂಡಿತು. ಇದರ ನಡುವೆ ಇಂಗ್ಲೆಂಡ್ ಬ್ಯಾಟಿಂಗ್ ಮಾಡುವಾಗ ನಡೆದ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ರೋಹಿತ್ ಶರ್ಮಾ (Rohith sharma) ಹೆಲ್ಮೆಟ್ ಸೇಪ್ಟಿ ಬಗ್ಗೆ ಆಡಿದ ಮಾತು ವೈರಲ್ ಆಗಿದೆ
ಇಂಗ್ಲೆಂಡ್ ಬ್ಯಾಟಿಂಗ್ ಇನ್ನಿಂಗ್ಸ್‌ನ ನಡುವಿನಲ್ಲಿ, ನಾಯಕ ರೋಹಿತ್ ಶರ್ಮಾ ಅವರು ಸರ್ಫರಾಜ್ ಖಾನ್ (sarfaraz khan) ಅವರನ್ನು ಬ್ಯಾಟ್ಸ್‌ಮನ್ ಪಕ್ಕದಲ್ಲಿ ಫೀಲ್ಡಿಂಗ್ಗೆ ನಿಲ್ಲಿಸಿದರು. ಆದರೆ, ಸರ್ಫರಾಜ್ ಫೀಲ್ಡರ್ ಹೆಲ್ಮೆಟ್ ಅಥವಾ ಯಾವುದೇ ಇತರ ರಕ್ಷಣಾತ್ಮಕ ಕವಚ ಇಲ್ಲದೆ ಸಿಲ್ಲಿ ಪಾಯಿಂಟ್‌ಗೆ ಬಂದು ನಿಂತರು. ಇದರಿಂದ ಕೋಪಗೊಂಡ ರೋಹಿತ್ ಅವರು ಸರ್ಫರಾಜ್ ಅವರ ಮೇಲೆ ರೇಗಾಡಿದ್ದಾರೆ. ”ನೀನು ಇಲ್ಲಿ ಹೀರೋ ಆಗಬೇಕಂತಿಲ್ಲ” ಎಂದು ಹೇಳಿ ರಕ್ಷಣಾತ್ಮಕ ಕವಚ ಧರಿಸುವಂತೆ ಹೇಳಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದೆ.
🔊 Hear this! Rohit does not want Sarfaraz to be a hero?🤔#INDvsENG #IDFCFirstBankTestSeries #BazBowled #JioCinemaSports pic.twitter.com/ZtIsnEZM67
— JioCinema (@JioCinema) February 25, 2024
ಕ್ರಿಕೆಟ್‌ನಲ್ಲಿ ಬಾಲ್ ತಾಗಿ ಸಾವನ್ನಪ್ಪಿದ ಪ್ರಕರಣಗಳನ್ನು ನಾವು ಸಾಕಷ್ಟು ನೋಡಿದ್ದೇವೆ. ಈರೀತಿ ಯಾವುದೇ ದುರ್ಘಟನೆ ನಡೆಯುವುದು ಬೇಡ ಎಂದು ಬ್ಯಾಟ್ಸ್‌ಮನ್‌ನ ಬಳಿ ನಿಂತಿರುವ ಫೀಲ್ಡರ್ ಹೆಲ್ಮೆಟ್ ಮತ್ತು ಶಿನ್ ಪ್ಯಾಡ್‌ಗಳನ್ನು ಧರಿಸುತ್ತಾರೆ. ಇದೇ ಕಾಳಜಿಯಲ್ಲಿ ರೋಹಿತ್ ಅವರು ಸರ್ಫರಾಜ್ಗೆ ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರೋಹಿತ್ ನಡೆಗೆ ಅವರಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ಟಂಪ್ ಮೈಕ್‌ನಲ್ಲಿ ರೋಹಿತ್ ಆಡಿದ ಮಾತು ಸೆರೆಯಾಗಿದೆ. ಬಳಿಕ ಕೆ.ಎಸ್.ಭರತ್ ಹೆಲ್ಮೆಟ್ ನೊಂದಿಗೆ ಮೈದಾನಕ್ಕೆ ಬಂದು ಸರ್ಫರಾಜ್ ಖಾನ್ಗೆ ನೀಡಿದರು.