ಶನಿವಾರ, ಏಪ್ರಿಲ್ 27, 2024
ಲೋಕಸಭೆ ಚುನಾವಣೆ; ರಾಜ್ಯದಲ್ಲಿ ಇಂದು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ-ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬಿಜೆಪಿ - ಜೆಡಿಎಸ್ ನ 28 ಕ್ಷೇತ್ರಗಳ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ.!

Twitter
Facebook
LinkedIn
WhatsApp
ಬಿಜೆಪಿ - ಜೆಡಿಎಸ್ ನ 28 ಕ್ಷೇತ್ರಗಳ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ.!
ಬೆಂಗಳೂರು: ಕರ್ನಾಟದಕ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 25 ಹಾಗೂ ಜೆಡಿಎಸ್‌ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ನಾಮಪತ್ರ ಸಲ್ಲಿಕೆ ಆರಂಭಕ್ಕೂ ಮುನ್ನ ಎಲ್ಲ ಕ್ಷೇತ್ರಗಳಿಗೂ ಉಮೇದುವಾರರನ್ನು ಘೋಷಿಸಿವೆ.
ಆಡಳಿತರೂಢ ಕಾಂಗ್ರೆಸ್‌ ಇನ್ನೂ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಯನ್ನ ಘೋಷಿಸುವುದು ಬಾಕಿ ಉಳಿದಿದೆ. ಆದರೆ, ಮೈತ್ರಿಯಾಗಿರುವ ಬಿಜೆಪಿ ಹಾಗೂ ಜೆಡಿಎಸ್‌ ಬಹುತೇಕ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳನ್ನ ಘೋಷಿಸಿದೆ. ಇತ್ತ ಬಿಜಪಿ ಮೊದಲ ಪಟ್ಟಿಯಲ್ಲೇ 20 ಕ್ಷೇತ್ರಗಳ ಅಭ್ಯರ್ಥಿಗಳನ್ನ ಘೋಷಣೆ ಮಾಡಿದ್ರೆ, ನಾಲ್ಕು ಕ್ಷೇತ್ರಗಳಿಗೆ ಹಾಗೂ ಬುಧವಾರ ಒಂದು ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಿಸಿದೆ. ಇತ್ತ ಕಾಂಗ್ರೆಸ್‌ ಮೊದಲ ಪಟ್ಟಿಯಲ್ಲಿ 7 ಕ್ಷೇತ್ರದ ಅಭ್ಯರ್ಥಿಗಳನ್ನ ಘೋಷಿಸಿದೆ. ಇನ್ನೂ ಎರಡನೇ ಪಟ್ಟಿಯಲ್ಲಿ ಕಾಂಗ್ರೆಸ್‌ 17 ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನ ಪ್ರಕಟಿಸಿದ್ದು, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಮತ್ತು ಬಳ್ಳಾರಿ ಕ್ಷೇತ್ರಗಳನ್ನು ಕಾಂಗ್ರೆಸ್ ಬಾಕಿ ಉಳಿಸಿಕೊಂಡಿದೆ.
ಇನ್ನು ಎಲ್ಲಾರ ನಿರೀಕ್ಷೆಯಂತೆ ಹಾಸನದಿಂದ ಪ್ರಜ್ವಲ್‌ ರೇವಣ್ಣ ಅವರಿಗೆ ಟಿಕೆಟ್‌ ನೀಡಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರು ಸ್ಪರ್ಧೆಗೆ ರೆಡಿಯಾಗಿದ್ದಾರೆ. ಇತ್ತ ಕೋಲಾರದಲ್ಲಿ ಅಭ್ಯರ್ಥಿ ಆಯ್ಕೆ ವಿಚಾರ ದಳಪತಿಗಳಿಗೆ ದೊಡ್ಡ ತಲೆ ನೋವಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು, ಬಂಗಾರಪೇಟೆಯ ಜೆಡಿಎಸ್ ಮುಖಂಡ ಮಲ್ಲೇಶ್ ಬಾಬು ಅವರನ್ನು ಕೋಲಾರದಿಂದ ಕಣಕ್ಕಿಳಿಸುವುದಾಗಿ ಹೇಳಿದ್ದರು. ಆದರೆ, ಅವರ ಬದಲಿಗೆ ನಿಸರ್ಗ ನಾರಾಯಣಸ್ವಾಮಿಯವರನ್ನು ಜೆಡಿಎಸ್ ಕಣಕ್ಕಿಳಿಸಿದೆ ಎಂದು ತಿಳಿದು ಬಂದಿದೆ. ಹಾಗಾದರೇ ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ ಎಂಬ 28 ಕ್ಷೇತ್ರಗಳ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ.
ಬಿಜೆಪಿ-ಜೆಡಿಎಸ್‌ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ. 

1. ಚಿಕ್ಕೋಡಿ : ಅಣ್ಣಾಸಾಹೇಬ್‌ ಜೊಲ್ಲೆ

2. ಬೆಳಗಾವಿ: ಜಗದೀಶ್‌ ಶೆಟ್ಟರ್‌

3.ಬಾಗಲಕೋಟೆ: ಪಿಸಿ ಗದ್ದಿಗೌಡರ್‌

4. ಬಿಜಾಪುರ (SC): ರಮೇಶ್‌ ಜಿಗಜಿಣಗಿ

5.ಕಲಬುರಗಿ (SC) : ಡಾ ಉಮೇಶ್‌ ಜಾಧವ್

6. ರಾಯಚೂರು: ರಾಜಾ ಅಮರೇಶ್ವರ ನಾಯಕ

7. ಬೀದರ್: ಭಗವಂತ್‌ ಖೂಬಾ

8. ಕೊಪ್ಪಳ : ಡಾ. ಬಸವರಾಜ್‌ ಕ್ಯಾವಟೂರು

9. ಬಳ್ಳಾರಿ : ಶ್ರೀರಾಮುಲು

10.ಹಾವೇರಿ ಬಸವರಾಜ ಬೊಮ್ಮಾಯಿ

11.ಧಾರವಾಡ ಪ್ರಹ್ಲಾದ್‌ ಜೋಶಿ

12. ಉತ್ತರ ಕನ್ನಡ: ವಿಶ್ವೇಶ್ವರ ಹೆಗಡೆ ಕಾಗೇರಿ

13.ದಾವಣಗೆರೆ: ಗಾಯತ್ರಿ ಸಿದ್ದೇಶ್ವರ್‌

14. ಶಿವಮೊಗ್ಗ: ಬಿವೈ ರಾಘವೇಂದ್ರ

15. ಉಡುಪಿ – ಚಿಕ್ಕಮಗಳೂರು : ಕೋಟ ಶ್ರೀನಿವಾಸ್‌ ಪೂಜಾರಿ

16. ದಕ್ಷಿಣ ಕನ್ನಡ: ಕ್ಯಾ. ಬ್ರಿಜೇಶ್‌ ಚೌಟಾ

17.ಚಿತ್ರದುರ್ಗ (SC): ಗೋವಿಂದ ಕಾರಜೋಳ

18.ತುಮಕೂರು : ವಿ ಸೋಮಣ್ಣ

19.ಮೈಸೂರು: ಯದುವೀರ್‌ ಕೃಷ್ಣದತ್ತ ಚಾಮರಾಜ್‌ ಒಡೆಯರ್

20.ಚಾಮರಾಜನಗರ (SC): ಎಸ್‌ ಬಾಲರಾಜ್‌

21. ಬೆಂಗಳೂರು ಗ್ರಾಮಾಂತರ: ಡಾ ಸಿಎನ್‌ ಮಂಜುನಾಥ್‌

22. ಬೆಂಗಳೂರು ಉತ್ತರ: ಶೋಭಾ ಕರಂದ್ಲಾಜೆ

23. ಬೆಂಗಳೂರು ಕೇಂದ್ರ: ಪಿಸಿ ಮೋಹನ್

24. ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ

25. ಚಿಕ್ಕಬಳ್ಳಾಪುರ: ಡಾ ಕೆ ಸುಧಾಕರ್‌

26. ಮಂಡ್ಯ: ಎಚ್‌ಡಿ ಕುಮಾರಸ್ವಾಮಿ (ಜೆಡಿಎಸ್)

27. ಹಾಸನ: ಪ್ರಜ್ವಲ್‌ ರೇವಣ್ಣ (ಜೆಡಿಎಸ್)

28. ಕೋಲಾರ (SC): ನಿಸರ್ಗ ನಾರಾಯಣಸ್ವಾಮಿ (ಜೆಡಿಎಸ್‌)

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ