ಮಂಗಳವಾರ, ಡಿಸೆಂಬರ್ 5, 2023
ಬೆಂಗಳೂರಿನ ಮನೆಯನ್ನೇ 100 ಕೋಟಿಗೆ ಅಡವಿಟ್ಟು ಸಿಬ್ಬಂದಿಗಳಿಗೆ ವೇತನ ನೀಡಿದ ಬೈಜೂಸ್ ಸಂಸ್ಥಾಪಕ!-ಅರ್ಜುನನ ಅಂತ್ಯಕ್ರಿಯೆ ವೇಳೆ ಪ್ರತಿಭಟನೆ: ಪೊಲೀಸರಿಂದ ಲಾಠಿ ಚಾರ್ಜ್!-ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ: ದೂರು ದಾಖಲು!-ಕಾಲೇಜು ಕಟ್ಟಡದ ಮೇಲಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!-ಕರ್ನಾಟಕ ಹೈಕೋರ್ಟ್ ಕಲಾಪದಲ್ಲಿ ವಿಡಿಯೋ ಕಾನ್ಫರೆನ್ಸ್ ಆ್ಯಪ್​ನಲ್ಲಿ ಅಶ್ಲೀಲ ದೃಶ್ಯ ಅಪ್​ಲೋಡ್..!-ಆಹಾರ ಧಾನ್ಯಗಳ ಮೂಟೆಯಡಿ ಸಿಲುಕಿ ಐವರು ಕಾರ್ಮಿಕರ ಸಾವು-ಸಿಐಡಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಫ್ರೆಡ್ರಿಕ್ಸ್ ಖ್ಯಾತಿಯ ನಟ ದಿನೇಶ್ ಫಡ್ನಿಸ್ ಹೃದಯಾಘಾತದಿಂದ ನಿಧನ.!-ನಾಯಿ ಬೊಗಳಿದಕ್ಕೆ ಗಲಾಟೆ; ಆ್ಯಸಿಡ್​ ಎರಚಿದ ದಂಪತಿ!-ಮರಕ್ಕೆ ಬಸ್ ಡಿಕ್ಕಿ 14 ಜನ ಸಾವು, 20 ಮಂದಿ ಗಾಯ-ಮುಂಬೈ ದಾಳಿಯ ಉಗ್ರನಿಗೆ ಪಾಕ್‌ ಜೈಲಿನಲ್ಲೇ ವಿಷ ಪ್ರಾಶನ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬಾಯ್‌ಫ್ರೆಂಡ್ ಪ್ರಪೋಸ್‌ಗೆ ಯೆಸ್ ಎಂದು 2 ನೇ ಮದುವೆಗೆ ತಯಾರಾದ ಹೆಬ್ಬುಲಿ ನಟಿ ಅಮಲಾ ಪೌಲ್!

Twitter
Facebook
LinkedIn
WhatsApp
ಬಾಯ್‌ಫ್ರೆಂಡ್ ಪ್ರಪೋಸ್‌ಗೆ ಯೆಸ್ ಎಂದು 2 ನೇ ಮದುವೆಗೆ ತಯಾರಾದ ಹೆಬ್ಬುಲಿ ನಟಿ ಅಮಲಾ ಪೌಲ್!

ಕಿಚ್ಚ ಸುದೀಪ್ ನಟಿಸಿದ ‘ಹೆಬ್ಬುಲಿ’ ಸಿನಿಮಾ ಕನ್ನಡಿಗರಿಗೆ ಚೆನ್ನಾಗಿಯೇ ಗೊತ್ತಿದೆ. ಆ ಸಿನಿಮಾದ ಮೂಲಕ ದಕ್ಷಿಣ ಭಾರತದ ನಟಿ ಅಮಲಾ ಪೌಲ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಕಿಚ್ಚನೊಂದಿಗೆ ಹೆಜ್ಜೆ ಹಾಕಿ ಮನಗೆದ್ದಿದ್ದ ಅಮಲಾ ಪೌಲ್ ಆ ಬಳಿಕ ಸಿಕ್ಕಾಪಟ್ಟೆಎ ಸುದ್ದಿಯಾಗಿದ್ದರು.

ಇತ್ತೀಚೆಗೆ ಅಮಲಾ ಪೌಲ್ ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಗಳಿಂದಲೇ ಸುದ್ದಿಯಾಗಿದ್ದು ಹೆಚ್ಚು. 2014ರಲ್ಲಿ ತಮಿಳು ನಿರ್ದೇಶಕ ಎ ಎಲ್ ವಿಜಯ್‌ರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಮೂರು ವರ್ಷಗಳ ಬಳಿಕ ಇಬ್ಬರ ನಡುವೆ ಹೊಂದಾಣಿಕೆಯಾಗದೆ ವೈವಾಹಿಕ ಜೀವನ ಮುರಿದುಬಿದ್ದಿತ್ತು.
ಅಲ್ಲಿಂದ ಒಂದಲ್ಲ ಒಂದು ವಿವಾದ ಇವರನ್ನು ಹಿಂಬಾಲಿಸಿಕೊಂಡೇ ಬರುತ್ತಿದೆ. ಆಗಾಗ ವಿವಾದಗಳನ್ನು ಕೇಳುತ್ತಿದ್ದ ಅಮಲಾ ಅಭಿಮಾನಿಗಳಿಗೆ ಖುಷಿ ವಿಷಯವೊಂದಿದೆ. ‘ಹೆಬ್ಬುಲಿ’ ನಟಿ ಮತ್ತೊಂದು ಮದುವೆಗೆ ರೆಡಿಯಾಗಿದ್ದಾರೆ. ಬಾಯ್‌ಫ್ರೆಂಡ್ ಪ್ರಪೋಸ್‌ಗೆ ಯೆಸ್ ಎಂದು ಹೇಳಿದ್ದಾರೆ.

ಬಾಯ್‌ಫ್ರೆಂಡ್ ಪ್ರಪೋಸ್‌ಗೆ ಯೆಸ್ ಎಂದು 2 ನೇ ಮದುವೆಗೆ ತಯಾರಾದ ಹೆಬ್ಬುಲಿ ನಟಿ ಅಮಲಾ ಪೌಲ್!

ಫ್ಯಾನ್ಸ್ಗೆ ಅಮಲಾ ಪೌಲ್ ಸಿಹಿ ಸುದ್ದಿ

ಅಮಲಾ ಪೌಲ್ ದಕ್ಷಿಣ ಭಾರತದ ಎಲ್ಲಾ ಪ್ರಮುಖ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೇ ಇತ್ತೀಚೆಗೆ ಬಾಲಿವುಡ್‌ನ ‘ಭೊಲಾ’ ಸಿನಿಮಾದಲ್ಲಿ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಮೂರು ಮಲಯಾಳಂ ಸಿನಿಮಾಗಳಿವೆ. ಇದೇ ವೇಳೆ ತಮ್ಮ ಅಭಿಮಾನಿಗಳಿಗೆ ಅಮಲಾ ಪೌಲ್ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.

ಮತ್ತೊಂದು ಮದುವೆಗೆ ಸಜ್ಜಾದ ಅಮಲಾ ಪೌಲ್

ಅಮಲಾ ಪೌಲ್ ಹಾಗೂ ಬಾಯ್‌ಫ್ರೆಂಡ್ ಜಗತ್ ದೇಸಾಯಿ ಹಲವು ದಿನಗಳಿಂದ ಡೇಟಿಂಗ್ ಮಾಡುತ್ತಿದ್ದರು. ಈಗ ಜಗತ್ ದೇಸಾಯಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಪ್ರೇಯಸಿ ಅಮಲಾ ಪೌಲ್‌ ಮುಂದೆ ಮಂಡಿಯೂರಿ ಪ್ರಪೋಸ್ ಮಾಡಿದ್ದಾರೆ. ಈ ವಿಡಿಯೋ ಶೇರ್ ಮಾಡಿಕೊಳ್ಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಾಯ್‌ಫ್ರೆಂಡ್ ಪ್ರಪೋಸ್‌ಗೆ ಯೆಸ್ ಎಂದು 2 ನೇ ಮದುವೆಗೆ ತಯಾರಾದ ಹೆಬ್ಬುಲಿ ನಟಿ ಅಮಲಾ ಪೌಲ್!

ಅಮಲಾ ಬರ್ತ್ಡೇಗೆ ಗಿಫ್ಟ್

ಅಕ್ಟೋಬರ್ 26ರಂದು ಅಮಲಾ ಪೌಲ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ಖುಷಿ ಸಂದರ್ಭದಲ್ಲಿ ಅಮಲಾ ಪೌಲ್‌ಗೆ ಬಾಯ್‌ಫ್ರೆಂಡ್ ಜಗತ್ ದೇಸಾಯಿ ಉಡುಗೊರೆಯನ್ನು ನೀಡಿದ್ದಾರೆ. ಹುಟ್ಟುಹಬ್ಬದಂದು ಡ್ಯಾನ್ಸರ್‌ಗಳನ್ನು ಕರೆಸಿ, ಅವರೊಂದಿಗೆ ಹೆಜ್ಜೆ ಹಾಕಿ ಅಮಲಾ ಪೌಲ್‌ಗೆ ಪ್ರಮೋಸ್ ಮಾಡಿದ್ದಾರೆ. ಇದು ಅವರಿಗೆ ಸರ್ಪ್ರೈಸ್ ಆಗಿತ್ತು. ರಿಂಗ್ ಕೊಟ್ಟು ಮದುವೆಯಾಗುವಂತೆ ಕೇಳುತ್ತಿದ್ದಂತೆ ಅಮಲಾ ಪೌಲ್ ಯೆಸ್ ಅಂದಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ