ಹೃದಯವಿದ್ರಾವಕ ಘಟನೆ ; ಮಗನ ಕಾಲೇಜು ಶುಲ್ಕ ಪಾವತಿಗೆ ಹಣ ಹೊಂದಿಸಲು ಚಲಿಸುತ್ತಿದ್ದ ಬಸ್ ಗೆ ಅಡ್ಡ ಬಿದ್ದು ತಾಯಿ ಆತ್ಮಹತ್ಯೆ - ವಿಡಿಯೋ ವೈರಲ್ !

ಸೇಲಂ: ಮಗನ ಕಾಲೇಜು ಶುಲ್ಕ ಕಟ್ಟಲು ಹಣ ಹೊಂದಿಸಲು ಆಗದೇ ಚಲಿಸುತ್ತಿದ್ದ ಬಸ್ ನಡಿಗೆ ಬಿದ್ದು ತಾಯಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡಿನಲ್ಲಿ ನಡೆದ ಹೃದಯ ವಿದ್ರಾವಕ ಘಟನೆಯೊಂದರಲ್ಲಿ ಮಗನ ಶಿಕ್ಷಣಕ್ಕಾಗಿ ಹಣ ಹೊಂದಿಸಲು ತಾಯಿಯೊಬ್ಬರು ಬಸ್ಸಿನಡಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮಿಳುನಾಡಿನ ಸೇಲಂ ಜಿಲ್ಲೆಯ ಕಲೆಕ್ಟರ್ ಕಚೇರಿಯಲ್ಲಿ ‘ಸಫಾಯಿ ಕರ್ಮಚಾರಿ’ (ಸ್ವಚ್ಛತಾ ಸಿಬ್ಬಂದಿ) ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಉದ್ದೇಶಪೂರ್ವಕವಾಗಿ ಬಸ್ ನ ಮುಂದೆ ಜಿಗಿದಿರುವುದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಕಂಡುಬಂದಿದೆ.
ಮೂಲಗಳ ಪ್ರಕಾರ ಅಪಘಾತದಲ್ಲಿ ಮೃತಪಟ್ಟರೆ ನಿಮ್ಮ ಕುಟುಂಬಕ್ಕೆ 45,000 ರೂ.ಲಭಿಸುವುದಾಗಿ ಹೇಳಿ ಯಾರೋ ದಾರಿ ತಪ್ಪಿಸಿದ್ದರಿಂದ ಮಹಿಳೆ ಈ ರೀತಿ ಮಾಡಿದ್ದಾರೆ. ಇದೇ ಕಾರಣಕ್ಕೆ ಮಗನ ಕಾಲೇಜು ಶುಲ್ಕ ಪಾವತಿಸಲು ಹಣದ ಅಗತ್ಯವಿದ್ದ ಮಹಿಳೆ ತನ್ನ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ತಾಯಿ ಬಸ್ ನಡಿಗೆ ಹೋಗುವ ವಿಡಿಯೋ ಆ ರಸ್ತೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಇನ್ನು ಈ ವಿಡಿಯೋ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂಯೆ ಎಚ್ಚೆತ್ತುಕೊಂಡಿರುವ ಸೇಲಂ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸ್ ತನಿಖೆ ನಡೆಯುತ್ತಿದ್ದು, ಪೊಲೀಸರು ಎಲ್ಲಾ ಕೋನಗಳಿಂದ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ.
A mother kills herself to meet son’s education expenses ?
— Arvind Gunasekar (@arvindgunasekar) July 17, 2023
Being misled by someone, a mother, working as ‘safai karmachari’ at Collector’s office in Salem, kills herself by falling into a bus to get financial assistance from the Govt to pay son’s college fees of 45,000.
A… pic.twitter.com/vzlcC6boWG
Double Murder: ರಾಡ್ನಿಂದ ಹೊಡೆದು ತಂದೆ-ತಾಯಿಯನ್ನ ಕೊಂದ ದುಷ್ಟ ಮಗ
Son Killed Parents: 27 ವರ್ಷದ ಶರತ್ ತಂದೆ-ತಾಯಿಯನ್ನ ಕೊಂದ ಮಗ. ಭಾಸ್ಕರ್ ಮೂಲತಃ ಮಂಗಳೂರಿನ ನಿವಾಸಿಗಳಾಗಿದ್ದು, ಕಳೆದ 12 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು.
ಬೆಂಗಳೂರು: ರಾಜಧಾನಿಯಲ್ಲಿ ಮಗನೇ ತಂದೆ-ತಾಯಿಯನ್ನು ಭೀಕರವಾಗಿ ಕೊಲೆ (Double Murder) ಮಾಡಿರುವ ಘಟನೆ ನಡೆದಿದೆ. ಬೆಂಗಳೂರಿನ (Bengaluru) ಬ್ಯಾಟರಾಯನಪುರದಲ್ಲಿ ಕೊಲೆ (Crime News) ನಡೆದಿದೆ. ಭಾಸ್ಕರ್ (64) ಮತ್ತು ಶಾಂತಾ (60) ಮಗನಿಂದಲೇ ಕೊಲೆಯಾದ ಪೋಷಕರು.
27 ವರ್ಷದ ಶರತ್ ತಂದೆ-ತಾಯಿಯನ್ನ ಕೊಂದ ಮಗ. ಭಾಸ್ಕರ್ ಮೂಲತಃ ಮಂಗಳೂರಿನ ನಿವಾಸಿಗಳಾಗಿದ್ದು, ಕಳೆದ 12 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು. ಶಾಂತಾ ನಿವೃತ್ತ ಕೇಂದ್ರ ಸರ್ಕಾರಿ ನೌಕರರು. ಭಾಸ್ಕರ್ ಕ್ಯಾಂಟೀನ್ನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡಿಕೊಂಡಿದ್ದರು.