ಪತಿಯೊಂದಿಗೆ ಊಟ ಮಾಡುವಾಗ ಹೃದಯಾಘಾತ; ಮಹಿಳೆ ಸಾವು
ಪಾಲಕ್ಕಾಡ್: ಭಾರತೀಯ ಮೂಲದ 32 ವರ್ಷದ ಮಹಿಳೆ ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತಳನ್ನು ಶರಣ್ಯ ಎಂದು ಗುರುತಿಸಲಾಗಿದೆ. ಈಕೆ ಕೇರಳದ ಪಲಕ್ಕಾಡ್ ಜಿಲ್ಲೆಯ ಶ್ರೀಕೃಷ್ಣಪುರಂ ಮೂಲದವಳು. ಪ್ರಭಾಕರನ್ ಮತ್ತು ಶಾಂತಕುಮಾರಿ ದಂಪತಿಯ ಪುತ್ರಿ.
ಪತಿ ಮೃದಲ್ ಮೋಹನ್ ಜತೆ ಅರಬ್ನ ಶಾರ್ಜಾದಲ್ಲಿ ನೆಲೆಸಿದ್ದಳು. ಗಂಡನ ಜತೆ ಊಟ ಮಾಡುತ್ತಿರುವಾಗಲೇ ಹೃದಯಾಘಾತವಾಗಿ ಸರಣ್ಯ ಮೃತಪಟ್ಟಿದ್ದಾಳೆ. ತನ್ನ ಕಣ್ಣೆದುರಲ್ಲೇ ಪತ್ನಿ ಕೊನೆಯುಸಿರೆಳೆದಿದ್ದು ಮೋಹನ್ಗೆ ಭಾರೀ ಆಘಾತವಾಗಿದೆ. ಹೃದಯಾಘಾತವಾದ ತಕ್ಷಣ ಸರಣ್ಯಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಆಕೆ ಇಹಲೋಕ ತ್ಯಜಿಸಿದಳು. ಮರಣೋತ್ತರ ವರದಿ ಸೇರಿದಂತೆ ಎಲ್ಲ ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಸೋಮವಾರ ಸರಣ್ಯ ಮೃತದೇಹವನ್ನು ತವರಿಗೆ ತರುವ ಸಾಧ್ಯತೆ ಇದೆ.
ಶರಣ್ಯ ಕಳೆದ ಮೂರು ವರ್ಷಗಳಿಂದ ಪತಿಯೊಂದಿಗೆ ಶಾರ್ಜಾದಲ್ಲಿ ನೆಲೆಸಿದ್ದಾರೆ. ಮೃದುಲ್ ಮೋಹನ್ ದುಬೈನ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ.
ಹೃದಯಾಘಾತದಿಂದ ಪಶು ವೈದ್ಯಕೀಯ ಸಹಾಯಕ ನಿರ್ದೇಶಕ ಸಾವು
ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಮಾಡಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಕರ್ತವ್ಯದಲ್ಲಿದ್ದ ಪಶು ವೈದ್ಯಕೀಯ ಸಹಾಯಕ ನಿರ್ದೇಶಕರಿಗೆ ಹೃದಯಾಘಾತವಾಗಿದ್ದು, ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಬಾಬುಗೌಡ(54) ಸಾವನ್ನಪ್ಪಿದ್ದಾರೆ.
2 ದಿನದ ಹಿಂದ ಮಾಡಬಾಳು ಗ್ರಾ,ಮ ಪಂಚಾಯಿತಿ ಕಚೇರಿಯಲ್ಲಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ವೇಳೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಇಂದು (ಆಗಸ್ಟ್ 11) ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಮಲಗಿದ್ದಲ್ಲೇ ಏಕಾಏಕಿ ಎದೆ ನೋವು; 34 ವರ್ಷಕ್ಕೆ ಹೃದಯಾಘಾತದಿಂದ ಉಸಿರು ಚೆಲ್ಲಿದ ಪೇದೆ!
ಬಸನಗೌಡ (34) ಹೃದಯಾಘಾತದಿಂದ ಮೃತಪಟ್ಟ ಪೊಲೀಸ್ ಸಿಬ್ಬಂದಿ. ಇವರು ಜಿಲ್ಲೆಯ ಮಸ್ಕಿ ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಮಸ್ಕಿ ಠಾಣೆಯಲ್ಲಿ ರೈಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಬಸನಗೌಡ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ರಾತ್ರಿ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದ್ದು, ಮಲಗಿದಲ್ಲಿಯೇ ಸಾವನ್ನಪ್ಪಿದ್ದಾರೆ.
ಬಿಪಿ, ಶುಗರ್, ಹೃದಯ ಸಂಬಂಧಿ ಖಾಯಿಲೆ ಇಲ್ಲದೇ ಆರೋಗ್ಯವಾಗಿದ್ದ ಬಸನಗೌಡ ಏಕಾಏಕಿ ಸಾವನ್ನಪ್ಪಿದ್ದಾರೆ. ಮೂಲತಃ ಕೊಪ್ಪಳ (Koppala) ಜಿಲ್ಲೆ ಗಂಗಾವತಿ (Gangavathi) ತಾಲೂಕಿನ ಆಗೋಲಿ ಗ್ರಾಮದ ನಿವಾಸಿಯಾದ ಬಸನಗೌಡ ಅವರ ಸಾವಿಗೆ ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆ ಸಂತಾಪ ಸೂಚಿಸಿದೆ.