ಭಾನುವಾರ, ಅಕ್ಟೋಬರ್ 6, 2024
ಮಡಿಕೇರಿ ದಸರಾಕ್ಕೆ ದಸರಾ ಇತಿಹಾಸದಲ್ಲಿ ಅತಿ ಹೆಚ್ಚು 1.50 ಕೋಟಿ ರೂಪಾಯಿ ಅನುದಾನ: ಡಾ. ಮಂತರ್ ಗೌಡ-ಬಿಜೆಪಿಯಿಂದ ವಿಧಾನಪರಿಷತ್ತಿಗೆ ಕಾರ್ಯಕರ್ತ ಅಭ್ಯರ್ಥಿ: ಪುತ್ತೂರಿನ ಕಿಶೋರ್ ಬೊಟ್ಯಾಡಿ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ.-30 ವರ್ಷಗಳ ಕಾಲ ಕಾಂಗ್ರೆಸ್ ಕಾರ್ಯಕರ್ತ, 2 ಬಾರಿ ಜಿ. ಪಂ ಚುನಾವಣೆಯಲ್ಲಿ ಘಟಾನುಘಟಿಗಳನ್ನು ಸೋಲಿಸಿದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಯವರಿಗೆ ಸಿಗಬಹುದೇ ಕಾಂಗ್ರೆಸ್ ಟಿಕೆಟ್?-ಮುಡಾ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ; 14 ನಿವೇಶನ ವಾಪಸ್ ನೀಡಲು ಸಿಎಂ ಸಿದ್ದರಾಮಯ್ಯ ಪತ್ನಿ ನಿರ್ಧಾರ!-Naravi: ಲಾರಿ ಮತ್ತು ಬೈಕ್ ಮಧ್ಯೆ ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರು ಸಾವು-Udayanidhi Stalin: ಉಪ ಮುಖ್ಯಮಂತ್ರಿಯಾಗಿ ಉದಯನಿಧಿ ಸ್ಟಾಲಿನ್ ನೇಮಕ; ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯ!-CM Siddaramaiah: ನಿರ್ಮಲಾ ಸೀತಾರಾಮನ್‌, ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ರಾಜೀನಾಮೆ ನೀಡಬೇಕು ಅಲ್ಲವೇ?-MLC Election:ಸ್ಥಳೀಯ ಸಂಸ್ಥೆಗಳ ಎಂಎಲ್ಸಿ ಚುನಾವಣೆ: ಕಾಂಗ್ರೆಸ್ಸಿನಿಂದ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಡಿ. ಆರ್. ರಾಜು ಹೆಸರು ಮುಂಚೂಣಿಯಲ್ಲಿ.-Hathras: ಶಾಲೆಯ ಏಳಿಗೆಗಾಗಿ ಬಾಲಕನ ಬಲಿ, ಐವರ ಬಂಧನ-ಮುಡಾ ಕೇಸ್ ಪ್ರಕರಣ: ಸಿದ್ದರಾಮಯ್ಯ ವಿರುದ್ಧ ಎಫ್​ಐಆರ್ ದಾಖಲು
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Hassan: ಹಾಸನ ನಗರಸಭೆ ಜೆಡಿಎಸ್ ತೆಕ್ಕೆಗೆ; ಸ್ವರೂಪ್ ವಿರುದ್ಧ ಪ್ರೀತಂಗೌಡ ವಾಗ್ದಾಳಿ!

Twitter
Facebook
LinkedIn
WhatsApp
Hassan Municipal Council

Hassan: ಹಾಸನ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಚುನಾವಣೆಯ ಜಿದ್ದಾ ಜಿದ್ದಿನ ದೋಸ್ತಿ ಹೋರಾಟದಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿದೆ. ಆ ಮೂಲಕ ಮಾಜಿ ಶಾಸಕ ಪ್ರೀತಂಗೌಡಗೆ ಹಿನ್ನೆಡೆ ಆಗಿದೆ. ಈ ವಿಚಾರವಾಗಿ ಮಾತನಾಡಿದ ಪ್ರೀತಂಗೌಡ, ಮಿತ್ರ ಪಕ್ಷದ ನಡೆಗೆ ಕೆಂಡಾಮಂಡಲರಾಗಿದ್ದಾರೆ. ಮೈತ್ರಿ ಧರ್ಮ ಪಾಲಿಸಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಕಿಡಿಕಾರಿದ್ದಾರೆ.

ಹಾಸನ (Hassan) ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯ ಪ್ರೀತಂಗೌಡ (Preetham Gowda) -ಜೆಡಿಎಸ್‌ನ ಸ್ವರೂಪ್ ಪ್ರಕಾಶ್ ಬೆಂಬಲಿಗರ ಮಧ್ಯೆ ಜಿದ್ದಾಜಿದ್ದಿ ನಡೆದಿದೆ. ಅಂತಿಮವಾಗಿ ಜೆಡಿಎಸ್‌ನ ಸ್ವರೂಪ್‌ಗೌಡ ಬೆಂಬಲಿಗರು ಮೇಲುಗೈ ಸಾಧಿಸಿದ್ದು, ಹಾಸನ ನಗರಸಭೆ (Hassan Municipality) ಜೆಡಿಎಸ್ ಪಾಲಾಗಿದೆ.

ಅಧ್ಯಕ್ಷರಾಗಿ ಜೆಡಿಎಸ್ (JDS) ಚಂದ್ರೇಗೌಡ ಆಯ್ಕೆಯಾಗಿದ್ದಾರೆ. ಜೆಡಿಎಸ್‌ಗೆ ಮತ ಹಾಕದೇ ಬಿಜೆಪಿ ಸದಸ್ಯರು ತಟಸ್ಥವಾಗಿ ಉಳಿದಿದ್ದಾರೆ. ಇನ್ನು, ಬಿಜೆಪಿಯ ಲತಾದೇವಿ ಜೆಡಿಎಸ್‌ನಲ್ಲಿ ಗುರುತಿಸಿಕೊಂಡು ಉಪಾಧ್ಯಕ್ಷೆಯಾಗಿದ್ದಾರೆ. ಮೈತ್ರಿಯಂತೆ ಉಪಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ಬಿಜೆಪಿ, ಶಿಲ್ಪಾವಿಕ್ರಮ್‌ರನ್ನು ಇಳಿಸಿತ್ತು. ಆದರೆ, ವಿಪ್ ಜಾರಿ ಹಿನ್ನೆಲೆಯಲ್ಲಿ ಶಿಲ್ಪಾವಿಕ್ರಂಗೆ ಕೈ ಎತ್ತುವ ಮೂಲಕ ತಮ್ಮ ವಿರುದ್ಧವೇ ಲತಾದೇವಿ ಮತ ಹಾಕಿದ್ದರು. ಆದರೆ, ಲತಾದೇವಿಗೆ ಜೆಡಿಎಸ್‌ನವರು ಹೆಚ್ಚು ವೋಟ್‌ ಹಾಕಿ ಗೆಲ್ಲಿಸಿಕೊಂಡಿದ್ದಾರೆ. 

ಹಾಸನ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯ ಪ್ರೀತಂಗೌಡ (Preetham Gowda) -ಜೆಡಿಎಸ್‌ನ ಸ್ವರೂಪ್ ಪ್ರಕಾಶ್ ಬೆಂಬಲಿಗರ ಮಧ್ಯೆ ಜಿದ್ದಾಜಿದ್ದಿ ನಡೆದಿದೆ. ಅಂತಿಮವಾಗಿ ಜೆಡಿಎಸ್‌ನ ಸ್ವರೂಪ್‌ಗೌಡ ಬೆಂಬಲಿಗರು ಮೇಲುಗೈ ಸಾಧಿಸಿದ್ದು, ಹಾಸನ ನಗರಸಭೆ (Hassan Municipality) ಜೆಡಿಎಸ್ ಪಾಲಾಗಿದೆ.

ಅಧ್ಯಕ್ಷರಾಗಿ ಜೆಡಿಎಸ್ (JDS) ಚಂದ್ರೇಗೌಡ ಆಯ್ಕೆಯಾಗಿದ್ದಾರೆ. ಜೆಡಿಎಸ್‌ಗೆ ಮತ ಹಾಕದೇ ಬಿಜೆಪಿ ಸದಸ್ಯರು ತಟಸ್ಥವಾಗಿ ಉಳಿದಿದ್ದಾರೆ. ಇನ್ನು, ಬಿಜೆಪಿಯ ಲತಾದೇವಿ ಜೆಡಿಎಸ್‌ನಲ್ಲಿ ಗುರುತಿಸಿಕೊಂಡು ಉಪಾಧ್ಯಕ್ಷೆಯಾಗಿದ್ದಾರೆ. ಮೈತ್ರಿಯಂತೆ ಉಪಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ಬಿಜೆಪಿ, ಶಿಲ್ಪಾವಿಕ್ರಮ್‌ರನ್ನು ಇಳಿಸಿತ್ತು. ಆದರೆ, ವಿಪ್ ಜಾರಿ ಹಿನ್ನೆಲೆಯಲ್ಲಿ ಶಿಲ್ಪಾವಿಕ್ರಂಗೆ ಕೈ ಎತ್ತುವ ಮೂಲಕ ತಮ್ಮ ವಿರುದ್ಧವೇ ಲತಾದೇವಿ ಮತ ಹಾಕಿದ್ದರು. ಆದರೆ, ಲತಾದೇವಿಗೆ ಜೆಡಿಎಸ್‌ನವರು ಹೆಚ್ಚು ವೋಟ್‌ ಹಾಕಿ ಗೆಲ್ಲಿಸಿಕೊಂಡಿದ್ದಾರೆ. 

ಕೊನೇ ಕ್ಷಣದಲ್ಲಿ ಗಿರೀಶ್ ಚನ್ನವೀರಪ್ಪರನ್ನು ಅಧ್ಯಕ್ಷ ಸ್ಥಾನಕ್ಕೆ ರೇವಣ್ಣ ಅಖಾಡಕ್ಕೆ ಇಳಿಸಿದ್ದರು. ಆದರೆ, ಶಾಸಕ ಸ್ವರೂಪ್ ಪ್ರಕಾಶ್ ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಂಡಿದ್ದು, ಹೆಚ್.ಡಿ.ರೇವಣ್ಣ, ಪ್ರೀತಂಗೌಡಗೂ ಟಾಂಗ್ ಕೊಟ್ಟಿದ್ದಾರೆ. ಮೈತ್ರಿ ಧರ್ಮ ಪಾಲಿಸಿಲ್ಲ ಅಂತ ಸ್ವರೂಪ್ ವಿರುದ್ಧ ಪ್ರೀತಂಗೌಡ ವಾಗ್ದಾಳಿ ನಡೆಸಿದ್ದಾರೆ.

ಪ್ರತಿಪಕ್ಷ ನಾಯಕ ಆರ್.ಅಶೋಕ್, ಡಾ.ಅಶ್ವತ್ಥ್ ನಾರಾಯಣ, ನಮ್ಮ ಶಾಸಕ ಸಿಮೆಂಟ್ ಮಂಜು ಚರ್ಚೆ ನಡೆಸಿ ನಿರ್ಧರಿಸಿದ್ದರು. 10 ತಿಂಗಳ ಅವಧಿಯಂತೆ ಅಧಿಕಾರ ಹಂಚಿಕೆಗೆ ತೀರ್ಮಾನಿಸಿದ್ದರು. ಈ ಬಗ್ಗೆ ರಾಜ್ಯ ಹಾಗೂ ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತರಲು ನಮ್ಮ ಸ್ಥಳೀಯ ನಾಯಕರು ತೀರ್ಮಾನ ಮಾಡಿದಾರೆ ಎಂದು ತಿಳಿಸಿದ್ದಾರೆ.

ನಮ್ಮಿಂದ ವೀರಶೈವ ಮಹಿಳೆ ಉಪಾಧ್ಯಕ್ಷ ಮಾಡಲು ತೀರ್ಮಾನ ಮಾಡಲಾಗಿತ್ತು. ಮತ ಮಾತ್ರ ಎಲ್ಲರದ್ದು ಬೇಕು. ಅಧಿಕಾರ ಒಂದೇ ಸಮುದಾಯದಕ್ಕೆ ಸಿಗಬಾರದು ಎನ್ನೊ ಕಾರಣಕ್ಕೆ ತೀರ್ಮಾನ ಮಾಡಲಾಗಿತ್ತು. ಆದರೆ ಇವತ್ತು ಮೈತ್ರಿ ಪಕ್ಷ ಮಾಡಿರುವ ತೀರ್ಮಾನ ನಮಗೆ ಅಚ್ಚರಿ ಮೂಡಿಸಿದೆ. ಈ ಬಾರಿಯೂ ಮನಸ್ಸು ಮಾಡಿದ್ದರೆ ಅಧ್ಯಕ್ಷ-ಉಪಾಧ್ಯಕ್ಷ ಆಗಬಹುದಾಗಿತ್ತು. ಆದರೆ ಯಾವುದೇ ಬೆಳವಣಿಗೆಗೆ ಅವಕಾಶ ನೀಡದೆ ಪಕ್ಷದ ಸೂಚನೆಯಂತೆ ಚೌಕಟ್ಟು ದಾಟಿಲ್ಲ. ಇದನ್ನ ರಾಜ್ಯ, ರಾಷ್ಟ್ರೀಯ ನಾಯಕರು ಗಮನಿಸುತ್ತಾರೆ. ಅವರು ಏನು ತೀರ್ಮಾನ ಮಾಡುತ್ತಾರೆ ನೋಡೋಣ ಎಂದು ಕಿಡಿಕಾರಿದ್ದಾರೆ.

ನನ್ನ ಮಾತಿನ ಮೇಲೆ ಗೌರವ ಇಟ್ಟು ನಮ್ಮ ಸದಸ್ಯರು ನಡೆದುಕೊಂಡರು. ಆದರೆ ಇದರಿಂದ ನಡವಳಿಕೆ ನಮಗೆ ಅಚ್ಚರಿ ಹಾಗೂ ಕಾರ್ಯಕರ್ತರಿಗೆ ನೋವಾಗಿದೆ. ಜನರು ಹಾಗೂ ವೀರಶೈವ ಸಮಾಜದ ಮುಖಂಡರು ಫೋನ್ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಿಂದೆ ಯಡಿಯೂರಪ್ಪ ಅವರಿಗೂ ಹೀಗಾಗಿತ್ತು. 

ಈಗ ಹಾಸನದಲ್ಲಿ ಹೀಗಾಗಿದೆ ಎಂದು ಜನ ಹೇಳ್ತಿದ್ದಾರೆ. ಇಂದು ಉಪಾಧ್ಯಕ್ಷರಾಗಿ ಆಯ್ಕೆಯಾದ ಬಿಜೆಪಿ ಸದಸ್ಯೆಗೆ ಪಾಪ ಏನು ಮಾಹಿತಿ ಇಲ್ಲ. ಅವರಿಗಿಂತ ಪ್ರೀತಂಗೌಡ ಚೆನ್ನಾಗಿ ಮ್ಯಾನ್ಯುಪ್ಲೇಟ್ ಮಾಡುತ್ತಾನೆ ಎನ್ನೋದು ಎಲ್ಲರಿಗೂ ಗೊತ್ತಿದೆ. ಮೈತ್ರಿ ಎಂದು ಹೇಳಿ ಕೇವಲ ಅನುಕೂಲ ಸಿಂಧು ಆಗಬಾರದು. ಕೊಂಡುಕೊಳ್ಳುವಿಕೆ ಇರಬೇಕು ಆದರೆ ಇದನ್ನ ಹಿರಿಯರು ಗಮನಿಸುತ್ತಾರೆ ಎಂದಿದ್ದಾರೆ.

ಪ್ರೀತಂಗೌಡಗೆ ಹಿನ್ನಡೆ ಆದರೆ ಮುಂದೆ ಮುನ್ನಡೆ ಆಗೋದು. ಬ್ಯಾಕ್ ಸ್ಟೆಪ್ ಇಟ್ಟರೆ ಸಿಕ್ಸ್ ಹೊಡೆಯುವುದಕ್ಕೆ ಆಗೋದು. ನಾನು ಮೈತ್ರಿ ವಿರುದ್ಧ ಮಾತನಾಡುತ್ತಿಲ್ಲ. ಜೆಡಿಎಸ್ ಪಕ್ಷದ ಧೊರಣೆಯ ವಿರುದ್ಧ ಮಾತನಾಡಿದ್ದೇನೆ. ನಾನು ಜೆಡಿಎಸ್‌ ಸದಸ್ಯರ ಓಟು ಹಾಕಿಸಿಕೊಳ್ಳಬಹುದಾಗಿತ್ತು. ನಾನೇನು ಅಸಹಾಯಕನಲ್ಲ, ನನಗೂ ಶಕ್ತಿ ಇತ್ತು. ಇದು ಸಾರ್ವಜನಿಕರಲ್ಲಿ ಬೇಸರ ತರುವ ಸಂಗತಿ ಆಗಿದೆ ಎಂದು ಹೇಳಿದ್ದಾರೆ.

ಮೈತ್ರಿ ಎಂದರೆ ಪರಸ್ಪರ ಒಡಂಬಡಿಕೆ, ಒಂದು ಕಡೆಯ ತೀರ್ಮಾನ ಅಲ್ಲ. ಮೈತ್ರಿ ಧರ್ಮವನ್ನು ಬಿಜೆಪಿ ವರಿಷ್ಠರ ಸೂಚನೆ ಪಾಲಿಸಿದೆ. ಸಾಂದರ್ಭಿಕ ಶಾಸಕರಿಗೆ ಸಾಂದರ್ಭಿಕವಾಗಿ ಏನು ನಡೆಯುತ್ತಿದೆ ಅಂತ ಗೊತ್ತಿರಲ್ಲ. ಅವರ ಯೋಚನೆಗೆ ಮೀರಿದ ವಿಚಾರ ಇದು. ಶಾಸಕರನ್ನು ಕೇಳಿ ಮೈತ್ರಿ ಮಾಡಿಕೊಳ್ಳಲ್ಲ. ಇದು ಶಾಸಕರ ಮಾಡುವ ತೀರ್ಮಾನ ಅಲ್ಲ ಎಂದಿದ್ದಾರೆ.

ಮತ್ತೊಂದುಕಡೆ, ಕಾರವಾರ ನಗರಸಭೆಯಲ್ಲಿ ಮೈತ್ರಿ ಅಭ್ಯರ್ಥಿಗಳಿಗೆ ಜಯವಾಗಿದೆ. ಬಿಜೆಪಿಯ ರವಿರಾಜ್ ಅಂಕೋಲೇಕರ್ ಅಧ್ಯಕ್ಷರಾದರೆ. ಜೆಡಿಎಸ್‌ನ ಪ್ರೀತಿ ಮಧುಕರ್ ಜೋಶಿ ಉಪಾಧ್ಯಕ್ಷರಾಗಿದ್ದರೆ. ಹಾಸನ, ಕಾರವಾರ ಎರಡೂ ಕಡೆ ಕಾಂಗ್ರೆಸ್‌ಗೆ ಸೋಲಾಗಿದೆ. ಆದರೆ, ವಿಜಯೇಂದ್ರ ಸ್ವಕ್ಷೇತ್ರ ಶಿಕಾರಿಪುರದ ಶಿರಾಳಕೊಪ್ಪ ಪುರಸಭೆಯಲ್ಲಿ 25 ವರ್ಷಗಳ ಬಳಿಕ ಕಾಂಗ್ರೆಸ್ ಅಧಿಕಾರಕ್ಕೇರಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ