ಪಶು ಆಹಾರದ ಕಚ್ಚಾ ವಸ್ತುಗಳ ಬೆಲೆ ಏರಿಕೆ ಕುರಿತು ಪರಿಷತ್ತಿನಲ್ಲಿ ಪ್ರಸ್ತಾಪಿಸಿದ ಹರೀಶ್ ಕುಮಾರ್
ಮಂಗಳೂರು: ಪುಶು ಆಹಾರದ ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಇವತ್ತು ರೈತರ ಹಾಗೂ ಇತರ ವರ್ಗದ ಜನರು ತೊಂದರೆಗೆ ಒಳಗಾಗಿದ್ದಾರೆ . ಇದರಿಂದ ಹಾಲು ಹಾಗೂ ಇತರ ಉತ್ಪನ್ನಗಳ ಬೆಲೆ ಏರಿಕೆ ಆಗುತ್ತದೆ ಎಂಬ ಗಂಭೀರ ವಿಷಯವನ್ನು ನಿನ್ನೆ ನಡೆದ ಪರಿಷತ್ತಿನ ಸದನದಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಪ್ರಸ್ತಾಪಿಸಿದರು.
ಕರಾವಳಿ ಜಿಲ್ಲೆಗಳು ಇತರ ಜಿಲ್ಲೆಗಳಿಗಿಂತ ಹೆಚ್ಚಿನ ಪಶು ಆಹಾರಗಳನ್ನು ಉಪಯೋಗಿಸುತ್ತಿರುವ ಕಾರಣದಿಂದಾಗಿ ಉಭಯ ಜಿಲ್ಲೆಗಳಲ್ಲಿ ಬಹಳಷ್ಟು ಸಮಸ್ಯೆ ಉಂಟಾಗುತ್ತಿದೆ ಈ ಬಗ್ಗೆ ಸರ್ಕಾರ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಪಶು ಆಹಾರ ಉತ್ಪನ್ನಗಳ ಬೆಲೆ ಏರಿಕೆಯಿಂದಾಗಿ ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯಾಗಿದೆ. ಪಶು ಆಹಾರ ಉತ್ಪನ್ನಗಳ ಬೆಲೆಯನ್ನು ಕಡಿಮೆಗೊಳಿಸಿದರೆ ಹಾಲಿನ ಉತ್ಪನ್ನಗಳ ಬೆಲೆ ಕಡಿಮೆಗೊಳಿಸಬಹುದು ಎಂದು ಅವರು ಸಲಹೆ ನೀಡಿದರು.
RSS ನಾಯಕರ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ಹೊನಲು ಬೆಳಕಿನ ಕ್ರೀಡೋತ್ಸವಕ್ಕೆ ಮಾಜಿ ಸಿಎಂ HD ಕುಮಾರಸ್ವಾಮಿ ಅತಿಥಿ..!
ಬಂಟ್ವಾಳ: ಆರ್‌ಎಸ್ ಎಸ್ ಹಿರಿಯ ನಾಯಕ ಡಾ. ಕಲ್ಲಡ್ಕ ಪ್ರಭಾಕರ ಭಟ್ ಸಾರಥ್ಯದ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ಹೊನಲು ಬೆಳಕಿನ ಕ್ರೀಡೋತ್ಸವಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮೀ ಭಾಗವಹಿಸಲಿದ್ದಾರೆ ಎಂದ ಸುದ್ದಿ ರಾಜಕೀಯ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ.
ರಾಜ್ಯದಲ್ಲಿ ಗುರುತಿಸಲ್ಪಡುವ ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್ ( ರಿ.) ಕಲ್ಲಡ್ಕ, ಇಲ್ಲಿನ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಡಿ.9 ರಂದು ನಡೆಯುವ ಹೊನಲು ಬೆಳಕಿನ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಜೆ.ಡಿ.ಎಸ್. ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಕಳೆದ ಬಾರಿ ಬಿಜೆಪಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಆಗಮಿಸಿದ್ದರು. ಮಳೆಯ ನಡುವೆಯೂ ಛತ್ರಿಯನ್ನು ಹಿಡಿದು ಇಲ್ಲಿನ ಕ್ರೀಡೋತ್ಸವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಆದರೆ ಕಳೆದ ಅನೇಕ ವರ್ಷಗಳ ಕ್ರೀಡೋತ್ಸವವನ್ನು ಗಮನಿಸಿದಾಗ ಈ ಬಾರಿ ಮೃದು ಹಿಂದುತ್ವದತ್ತ ವಾಲಿದ, ಬಿಜೆಪಿ ಜೊತೆ ಹೊಂದಾಣಿಕೆಗೆ ಮುಂದಾಗಿರುವ ಮತ್ತು ದತ್ತ ಪೀಠಕ್ಕೆ ಮಾಲಾಧಾರಣೆ ಮಾಡಿ ಹೋಗುವುದಾಗಿ ಹೇಳಿಕೆ ನೀಡಿ ರಾಜ್ಯದಲ್ಲಿ ಒಂದು ರೀತಿಯ ಬಿರುಗಾಳಿ ಎಬ್ಬಿಸಿರುವ ಕುಮಾರ ಸ್ವಾಮಿ ಆಗಮನ ರಾಜಕೀಯ ವಲಯದಲ್ಲಿ ಒಂದಷ್ಟು ಸಂಚಲನ ಮೂಡಿಸಿದೆ.
ಹೆಚ್ಚಾಗಿ ಹಿಂದುತ್ವದ ಸಿದ್ದಾಂತದ ಮೇಲೆ ನಾಯಕರೆನಿಸಿದವರು ಈ ಶಾಲೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಕಂಡು ಬಂದಿದೆಯಾದರೂ, ಹೊರರಾಜ್ಯದಿಂದ ಬೇರೆ ಬೇರೆ ಪಕ್ಷಗಳ ನಾಯಕರು ಕ್ರೀಡೋತ್ಸವದಲ್ಲಿ ಭಾಗವಹಿಸಿದ ನಿದರ್ಶನಗಳು ಇವೆ.
ಈ ಬಾರಿ ಬಿಜೆಪಿಯ ಉನ್ನತ ನಾಯಕರನ್ನು ಹೊರತುಪಡಿಸಿ ಬಿಜೆಪಿಯತ್ತ ಚಿತ್ತ ಹರಿಸಿರುವ ಕರ್ನಾಟಕದ ಡ್ಯಾಸಿಂಗ್ ,ಡೈನಾಮಿಕ್ ಲೀಡರ್ ಆಗಿರುವ ಕುಮಾರಸ್ವಾಮಿಯವರನ್ನು ಆಮಂತ್ರಿಸಿರುವುದರ ಹಿಂದೆ ರಾಜಕೀಯ ತಂತ್ರಗಾರಿಕೆ ಇರಬಹುದೇ ? ಎಂಬ ಸಂಶಯಗಳು ಮೂಡಿವೆ..
ಕಳೆದ ಕೆಲ ವರ್ಷಗಳ ಹಿಂದೆ ಕಾಂಗ್ರೆಸ್ ಸರಕಾರ ಆಡಳಿತವಿದ್ದ ಸಮಯದಲ್ಲಿ ಆರ್.ವಿ.ದೇಶ್ ಪಾಂಡೆ ಅವರು ಆಗಮಿಸಿಲಿದ್ದರು.ಆದರೆ ಕೊನೆಯ ಕ್ಷಣದಲ್ಲಿ ಕಲ್ಲಡ್ಕಕ್ಕೆ ಬರುವುದು ಕೈ ತಪ್ಪಿ ಹೋಗಿತ್ತು.
ಹಾಗಾಗಿ ಜೆ.ಡಿ.ಎಸ್.ನ ಮಾಸ್ ಲೀಡರ್ ಕುಮಾರ್ ಸ್ವಾಮಿ ಆಗಮನ ವಿಚಾರ ರಾಜಕೀಯವಾಗಿ ದೊಡ್ಡ ವಿಚಾರವಾದರೂ ಕಲ್ಲಡ್ಕದ ಭದ್ರಕೋಟೆಗೆ ಅದು ಸಾಮನ್ಯ ವಿಚಾರ ಎಂದು ಹೇಳಲಾಗುತ್ತಿದೆ.
ಡಾ| ಭಟ್ ಅವರ ಸಂಪರ್ಕದಲ್ಲಿರುವ ವ್ಯಕ್ತಿಯಲ್ಲಿ ಬೋಜೆ ಗೌಡ ಅವರು ಒಬ್ಬರಾಗಿದ್ದು ಈ ಹಿಂದಿನ ಕ್ರೀಡಾಕೂಟದಲ್ಲಿ ಅವರು ಭಾಗವಹಿಸಿದ್ದಾರೆ. ಈ ಬಾರಿ ಮತ್ತೆ ಕ್ರೀಡೋತ್ಸವ ಕಾರ್ಯಕ್ರಮ ಅತಿಥಿಯಾಗಿದ್ದಾರೆ.
ಅಂತಿಮವಾಗಿ ರಾಜಕೀಯ ವಲಯದಲ್ಲಿ ಬಾರಿ ಚರ್ಚೆಗೆ ಕಾರಣವಾಗಿರುವ ಕುಮಾರ ಸ್ವಾಮಿ ಆಮಂತ್ರಣ ಮುಂದಿನ ದಿನಗಳಲ್ಲಿನ ಫಲಿತಾಂಶದ ಮೇಲೆ ನಿರ್ಧರಿಸಲ್ಪಡುತ್ತದೆ. ಯಾವುದೇ ಕಾರಣವಿಲ್ಲದೆ ಕುಮಾರ ಸ್ವಾಮಿ ಕಲ್ಲಡ್ಕ ಕ್ರೀಡೋತ್ಸವದಲ್ಲಿ ಭಾಗಿಯಾಗುವುದಲ್ಲ ಎಂಬ ಸಂದೇಹಗಳು ಉಂಟಾಗಿವೆ.