ಶನಿವಾರ, ಮೇ 18, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ರಾಜ್ಯದಲ್ಲಿ ವಿದ್ಯುತ್ ದರ ಇಳಿಕೆಗೆ ಸರ್ಕಾರ ಆದೇಶ; ಹೇಗಿದೆ ಪರಿಷ್ಕೃತ ದರ?

Twitter
Facebook
LinkedIn
WhatsApp
ರಾಜ್ಯದಲ್ಲಿ ವಿದ್ಯುತ್ ದರ ಇಳಿಕೆಗೆ ಸರ್ಕಾರ ಆದೇಶ; ಹೇಗಿದೆ ಪರಿಷ್ಕೃತ ದರ?

ಬೆಂಗಳೂರು: ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯ ಸರ್ಕಾರ ದಿವಾಳಿ ಎದ್ದಿದೆ ಎಂಬ ಆರೋಪ, ಗುಲ್ಲುಗಳ ನಡುವೆಯೇ ನಂಬಲಸಾಧ್ಯ ಬ್ರೇಕಿಂಗ್‌ ನ್ಯೂಸ್‌ ಬಂದಿದೆ. ಅದೇನೆಂದರೆ ‌ ರಾಜ್ಯ ವಿದ್ಯುತ್‌ ನಿಯಂತ್ರಣ ಆಯೋಗ  ವಿದ್ಯುತ್‌ ದರವನ್ನು  ವಿಪರೀತ ಇಳಿಸಿದೆ! ಅತ್ಯಂತ ಅಪರೂಪದಲ್ಲಿ ಅಪರೂಪದಲ್ಲಿ ನಡೆಯುವ ಈ ಇಳಿಕೆಯ ಲಾಭವನ್ನು ಗೃಹ ಬಳಕೆದಾರರು  ಮಾತ್ರವಲ್ಲ, ವಾಣಿಜ್ಯ, ಕೈಗಾರಿಕೆ, ರೈತರು ಎಲ್ಲರಿಗೂ ನೀಡಲಾಗಿದೆ.

ಬುಧವಾರ ಸಂಜೆ ವೇಳೆ ವಿದ್ಯುತ್‌ ದರ ಪರಿಷ್ಕರಣೆ (Power Tariff revision) ಘೋಷಣೆಯಾಗಲಿದೆ. ಎಸ್ಕಾಂಗಳ ಬೇಡಿಕೆಯಂತೆ ವಿದ್ಯುತ್‌ ದರ ಏರಿಕೆಯಾಗಲಿದೆ, ಎಲ್ಲರಿಗೂ ಶಾಕ್‌ ಹೊಡೆಯಲಿದೆ ಎಂದೇ ಮಾತನಾಡಿಕೊಳ್ಳಲಾಗುತ್ತಿತ್ತು. ಆದರೆ, ಆಯೋಗ ಮಾತ್ರ ವಾಣಿಜ್ಯ, ಗೃಹಬಳಕೆ ವಿದ್ಯುತ್‌ ಬಳಕೆದಾರರಿಗೆ Biggest Surprise ನೀಡಿದೆ. ವಿದ್ಯುತ್‌ ದರದಲ್ಲಿ ಭಾರಿ ಕಡಿತ ಮಾಡುವ ಮೂಲಕ ಶುಭ ಸುದ್ದಿ ನೀಡಿದೆ.

ಪರಿಷ್ಕೃತ ದರ ಮಾರ್ಚ್ 1ರಿಂದ ಅನ್ವಯವಾಗಲಿದೆ. ಕಳೆದ ಹಣಕಾಸು ವರ್ಷದಲ್ಲಿ ಎಸ್ಕಾಂಗಳಿಗೆ 259 ಕೋಟಿ ರೂ.‌ ಲಾಭವಾಗಿದೆ. ಇದರ ಲಾಭವನ್ನು ಬಳಕೆದಾರರಿಗೆ ನೀಡುವ ಉದ್ದೇಶದಿಂದ ದರವನ್ನು ಇಳಿಸಲಾಗಿದೆ ಎಂದು ಕೆಇಆರ್‌ ಸಿ ಹೇಳಿದೆ.

 

1.ಗೃಹಬಳಕೆ ವಿದ್ಯುತ್ ಬಳಕೆದಾರರಿಗೆ ಶುಭ ಸುದ್ದಿ: 100 ಯೂನಿಟ್‌ಗಳಿಗಿಂತ ಹೆಚ್ಚಿನ ಯೂನಿಟ್‌ಗೆ 1 ರೂಪಾಯಿ 10 ಪೈಸೆ ಇಳಿಕೆ. ಅಂದರೆ ಇದರ ಲಾಭ 100 ಯುನಿಟ್‌ಗಿಂತ ಹೆಚ್ಚು ವಿದ್ಯುತ್‌ ಬಳಸುವವರಿಗೆ ಮಾತ್ರ ಸಿಗಲಿದೆ.

2. ವಾಣಿಜ್ಯ ಬಳಕೆದಾರರಿಗೆ ಒಂದು ಯುನಿಟ್‌ ವಿದ್ಯುತ್‌ಗೆ 1 ರೂಪಾಯಿ 25 ಪೈಸೆ ಇಳಿಕೆ

3. ಕೈಗಾರಿಕೆಗಳಿಗೆ ಬಳಸುವ ವಿದ್ಯುತ್‌ ದರದಲ್ಲಿ ಯುನಿಟ್‌ಗೆ 50 ಪೈಸೆ ಇಳಿಕೆ ಮಾಡಲಾಗಿದೆ.

4. ಆಸ್ಪತ್ರೆ ಹಾಗು ಶೈಕ್ಷಣಿಕ ಸಂಸ್ಥೆಗಳಲ್ಲಿ ಬಳಸುವ ವಿದ್ಯುತ್‌ ದರ ಒಂದು ಯುನಿಟ್‌ಗೆ 40 ಪೈಸೆ ಇಳಿಕೆ

5. ಖಾಸಗಿ ಆಸ್ಪತ್ರೆಗಳು ಹಾಗು ಖಾಸಗಿ ಶಾಲೆಗಳಿಗೆ – 50 ಪೈಸೆ ಇಳಿಕೆ

6. ಖಾಸಗಿ ಏತ ನೀರಾವರಿ ವಿದ್ಯುತ್‌ ಬಳಕೆದಾರರಿಗೆ ಗರಿಷ್ಠ ಲಾಭ ನೀಡಲಾಗಿದ್ದು, ಒಂದು ಯುನಿಟ್‌ಗೆ 2 ರೂಪಾಯಿ ಇಳಿಕೆ ಮಾಡಲಾಗಿದೆ.

7. ಅಪಾರ್ಟ್‌ಮೆಂಟ್‌ಗಳಿಗೆ ಡಿಮ್ಯಾಂಡ್‌ ಚಾರ್ಜಸ್‌ನಲ್ಲಿ 10 ರೂ. ಇಳಿಕೆ ಪ್ರಕಟಿಸಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ