ಶುಕ್ರವಾರ, ನವೆಂಬರ್ 22, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!

Twitter
Facebook
LinkedIn
WhatsApp
ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!

ಬಿಎಸ್​ಇಯಲ್ಲಿ ಇತ್ತೀಚೆಗೆ ನಡೆದ ಹೂಡಿಕೆದಾರರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ನಿರ್ಮಲಾ ಸೀತಾರಾಮನ್  ಅವರು ಕುತೂಹಲಭರಿತ ಸಂವಾದಗಳಲ್ಲಿ ತೊಡಗಿದ್ದರು. ಈ ವೇಳೆ ಸಭಿಕರೊಬ್ಬರ ಎರಡು ಪ್ರಶ್ನೆಗೆ ಅವರು ನಿರುತ್ತರರಾಗಬೇಕಾಯಿತು. ನೀವು ನನಗೆ ಸ್ಲೀಪಿಂಗ್ ಪಾರ್ಟ್ನರ್, ನಾನು ವರ್ಕಿಂಗ್ ಪಾರ್ಟ್ನರ್ ಎಂದು ಹೇಳಿ ಸಭಾಂಗಣದಲ್ಲಿ ಆ ವ್ಯಕ್ತಿ ನಗೆಯ ಬುಗ್ಗೆ ಹರಿಸಿದರು. ಆ ವ್ಯಕ್ತಿ ಕೇಳಿದ ಆ ಎರಡು ಪ್ರಶ್ನೆಗಳೇನು? ಅದಕ್ಕೆ ಕೊನೆಯಲ್ಲಿ ನಿರ್ಮಲಾ ಸೀತಾರಾಮನ್ ನೀಡಿದ ಉತ್ತರ ಏನು? ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಮತ್ತು ವಾಟ್ಸಾಪ್​ನಲ್ಲಿ ಸಾಕಷ್ಟು ಶೇರ್ ಆಗುತ್ತಿದೆ.

ಸ್ಲೀಪಿಂಗ್ ಪಾರ್ಟ್ನರ್, ವರ್ಕಿಂಗ್ ಪಾರ್ಟ್ನರ್

ಸಿಜಿಎಸ್​ಟಿ, ಎಸ್​ಜಿಎಸ್​ಟಿ, ಐಜಿಎಸ್​ಟಿ, ಸ್ಟ್ಯಾಂಪ್ ಡ್ಯೂಟಿ, ಎಸ್​ಟಿಟಿ, ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಹೀಗೆ ಸಾಕಷ್ಟು ತೆರಿಗೆ ಸರ್ಕಾರಕ್ಕೆ ಹೋಗುತ್ತದೆ. ಇವತ್ತು ಭಾರತ ಸರ್ಕಾರ ಬ್ರೋಕರ್​ಗಿಂತ ಹೆಚ್ಚು ಸಂಪಾದಿಸುತ್ತಿದೆ. ನಾನು ಹೂಡಿಕೆ ಮಾಡುತ್ತಿದ್ದೇನೆ. ಎಲ್ಲಾ ರೀತಿಯ ರಿಸ್ಕ್ ಅನ್ನು ನಾನು ತೆಗೆದುಕೊಳ್ಳುತ್ತಿದ್ದೇನೆ. ನನ್ನ ಎಲ್ಲಾ ಲಾಭವನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ. ನನಗೆ ನೀವು (ಸರ್ಕಾರ) ಸ್ಲೀಪಿಂಗ್ ಪಾರ್ಟ್ನರ್, ನಾನು ವರ್ಕಿಂಗ್ ಪಾರ್ಟ್ನರ್. ನನ್ನ ಹಣ, ನನ್ನ ರಿಸ್ಕ್, ನನ್ನ ಸಿಬ್ಬಂದಿ… ಇದರ ಬಗ್ಗೆ ಏನು ಹೇಳುತ್ತೀರಿ? ಎಂದು ಅವರು ಕೇಳಿದರು.

ಇವತ್ತು ಮುಂಬೈನಲ್ಲಿ ಯಾರಾದರು ಮನೆ ಖರೀದಿಸಲು ಹೋದರೆ ಅದು ದುಃಸ್ವಪ್ನವೇ ಆಗಿರುತ್ತದೆ. ನಾನು ಟ್ಯಾಕ್ಸ್ ಕಟ್ಟುತ್ತೇನೆ. ಇವತ್ತು ಎಲ್ಲವನ್ನೂ ಚೆಕ್​ನಲ್ಲೇ ಕೊಡಬೇಕು. ಎಲ್ಲಾ ತೆರಿಗೆ ಪಾವತಿಸಿದ ಬಳಿಕ ಉಳಿಯುವ ಹಣವು ನನ್ನ ಬ್ಯಾಂಕ್ ಬ್ಯಾಲನ್ಸ್ ಆಗಿರುತ್ತದೆ. ನಾನು ಮನೆ ಖರೀದಿಸುವಾಗ ಸ್ಟ್ಯಾಂಪ್ ಡ್ಯೂಟಿ, ಜಿಎಸ್​ಟಿ ಕಟ್ಟಬೇಕು. ಬಾಂಬೆ ನಗರದಲ್ಲಿ ಅದು ಶೇ. 11ರಷ್ಟಿದೆ. ಅಂದರೆ ಮನೆ ಖರೀದಿಸುವಾಗ ಶೇ. 11ರಷ್ಟು ಹಣ ನನ್ನ ಜೇಬಿಂದ ಹೊರಟುಹೋಗುತ್ತೆ. ಸೀಮಿತ ಸಂಪನ್ಮೂಲ ಇರುವ ಒಬ್ಬ ಸಾಧಾರಣ ವ್ಯಕ್ತಿಗೆ ನೀವು ಮನೆ ಖರೀದಿಸಲು ಹೇಗೆ ನೆರವಾಗಲ್ಲಿರಿ? ಒಬ್ಬ ಬ್ರೋಕರ್ ಇಷ್ಟೊಂದು ತೆರಿಗೆಗಳ ಮಧ್ಯೆ ಹೇಗೆ ಕೆಲಸ ಮಾಡಲು ಸಾಧ್ಯ? ಇಲ್ಲಿ ಸರ್ಕಾರ ನನಗೆ ಸ್ಲೀಪಿಂಗ್ ಪಾರ್ಟ್ನರ್ ಆಗಿದೆ. ನಾನು ಯಾವ ಆದಾಯ ಇಲ್ಲದ ವರ್ಕಿಂಗ್ ಪಾರ್ಟ್ನರ್ ಆಗಿದ್ದೇನೆ ಎಂದು ಆ ವ್ಯಕ್ತಿ ಮತ್ತೊಂದು ಪ್ರಶ್ನೆ ಕೇಳಿದರು

ನಿರ್ಮಲಾ ಸೀತಾರಾಮನ್ ಕೊಟ್ಟ ಉತ್ತರ ಇದು…

ಈ ಎರಡು ಪ್ರಶ್ನೆಗಳು ಸಭಿಕರನ್ನು ನಗೆಗಡಲಿನಲ್ಲಿ ತೇಲಿಸಿತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲೂ ನಗೆ ಬರಿಸಿತು. ಅಂತಿಮವಾಗಿ ಈ ಪ್ರಶ್ನೆಗಳಿಗೆ ಅವರು ಚುಟುಕಾಗಿ ಉತ್ತರ ಕೊಟ್ಟರು. ‘ಸ್ಲೀಪಿಂಗ್ ಪಾರ್ಟ್ನರ್ ಇಲ್ಲಿ ಕೂತು ಈ ಪ್ರಶ್ನೆಗೆ ಉತ್ತರ ಕೊಡಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು. ANI ಯಲ್ಲಿ ಇದರ ವಿಡಿಯೋವನ್ನು ಹಾಕಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ