ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ ಅಪಘಾತ; 5 ಗಂಭೀರ..!
ಕಡೂರು : ಪ್ರಯಾಣಿಕರಿಂದ ತುಂಬಿದ್ದ ಕೆಎಸ್‌ಆರ್‌ಟಿಸಿ ಬಸ್ವೊಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಬಳಿ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ನಡೆದಿದೆ.
ಕಡೂರಿನ ಅಂಚೆ ಚೋಮನಹಳ್ಳಿ ಬಳಿಯ ಸ್ಕೈ ವಾಕರ್ ಪಿಲ್ಲರಿಗೆ ಬಸ್ ಡಿಕ್ಕಿ ಹೊಡೆದು ನಿಂತಿದೆ. ಬಸ್ ಸಂಪೂರ್ಣ ಜಖಂಗೊಂಡಿದೆ. ಬಸ್ಸಿನಲ್ಲಿದ್ದ 5 ಮಂದಿ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು ಕಡೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಸ್ ಕಡೂರಿನಿಂದ ಅರಸೀಕೆರೆಗೆ ಪ್ರಯಾಣಿಕರನ್ನು ತುಂವಿ ತೆರಳುತ್ತಿತ್ತು ಎಂದು ತಿಳಿದುಬಂದಿದೆ.ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಇದಾಗಿದ್ದು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
Puttur ಅಂತಾರಾಜ್ಯ ನಟೋರಿಯಸ್ ಕಳ್ಳಿ ಸೆರೆ
ಪುತ್ತೂರು: ತಮಿಳುನಾಡು ಮೂಲದ ಅಂತರ್‌ರಾಜ್ಯ ನಟೋರಿಯಸ್ ಕಳ್ಳಿ ಈಶ್ವರಿ (45)ಯನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 6 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಫೆ. 12ರಂದು ಪುತ್ತೂರು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ತನ್ನ ಬ್ಯಾಗಿನಲ್ಲಿದ್ದ ಚಿನ್ನಾಭರಣಗಳು ಕಳವಾದ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ರೇಷ್ಮಾ ಎನ್. ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪುತ್ತೂರು ನಗರ ಠಾಣಾ ಪೊಲೀಸರು ತನಿಖೆ ನಡೆಸಿ ಆರೋಪಿ ಈಶ್ವರಿಯನ್ನು ಬಂಧಿಸಿದ್ದಾರೆ.
Delhi; ದರೋಡೆಕೋರರು ಎಂದು ಭಾವಿಸಿ ಸ್ನೇಹಿತರಿಬ್ಬರ ಕೊಲೆ; ನಾಲ್ವರ ಬಂಧನ
ಹೊಸದಿಲ್ಲಿ: ದರೋಡೆಕೋರರು ಎಂದು ತಪ್ಪು ಗ್ರಹಿಸಿ ಇಬ್ಬರು ಸ್ನೇಹಿತರನ್ನು ಕೊಂದ ಘಟನೆ ದೆಹಲಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ದೆಹಲಿಯ ರಣಹೊಳ್ಳ ಪ್ರದೇಶದಲ್ಲಿ ಕಳೆದ ಶುಕ್ರವಾರ ರಾಜೇಶ್ ಯಾದವ್ ಮತ್ತು ಮುಕೇಶ್ ಸಿಂಗ್ ಎಂಬವರ ಭೀಕರ ಹತ್ಯೆ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ನಾಲ್ವರ ಸ್ನೇಹಿತರನ್ನು ಮಾರ್ಚ್ 15 ರಂದು ಇಬ್ಬರು ವ್ಯಕ್ತಿಗಳು ದರೋಡೆ ಮಾಡಿದ್ದರು. ಅದಕ್ಕೆ ತಕ್ಕ ಪಾಠ ಕಲಿಸಲೆಂದು ನಾಲ್ಕು ಮಂದಿ ದರೋಡೆಕೋರರನ್ನು ಹುಡುಕಲು ಪ್ರಾರಂಭಿಸಿದ್ದರು. ಎರಡು ದಿನಗಳ ನಂತರ, ದರೋಡೆಕೋರರು ಆ ಪ್ರದೇಶದ ಬಾರ್ ನಲ್ಲಿ ಮದ್ಯಪಾನ ಮಾಡುತ್ತಿದ್ದಾರೆಂಬ ಮಾಹಿತಿ ಅವರಿಗೆ ಸಿಕ್ಕಿತು.
ದರೋಡೆಕೋರರ ಸಹಚರರು ಎಂದು ಭಾವಿಸಿ ನಾಲ್ವರು ರಾಜೇಶ್ ಯಾದವ್ ಮತ್ತು ಮುಖೇಶ್ ಸಿಂಗ್ ಮೇಲೆ ಚಾಕು ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ.
ರಾಜೇಶ್ ಮತ್ತು ಮುಖೇಶ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅಲ್ಲಿ ಬರುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು.
ರಾಜೇಶ್ ಮತ್ತು ಮುಖೇಶ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅಲ್ಲಿ ಬರುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು. ಗೌರವ್ ಕುಮಾರ್, ಕೇಶ್ರಿ ಕುಮಾರ್ ಪಾಂಡೆ, ಸಂದೇಶ್ ಕುಮಾರ್ ಮತ್ತು ಗೌರವ್ ಸಿಂಗ್ ರನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.